ಮಂಗಳೂರು: ಆಳ ಸಮುದ್ರದಲ್ಲಿ ಅಪಾಯಕ್ಕೆ ಸಿಲುಕಿದ್ದ ಗೋವಾದ ಮೀನುಗಾರಿಕಾ ಬೋಟ್‌ನಲ್ಲಿದ್ದ 31 ಮೀನುಗಾರರನ್ನು ಭಾರತೀಯ ತಟ ರಕ್ಷಣಾ ಪಡೆ ರಕ್ಷಿಸಿದೆ.
ಅ.24 ರಂದು ಸಂಪರ್ಕಕ್ಕೆ ಸಿಗದೆ IFB ಸಂತ ಆಂಟನಿ ಹೆಸರಿನ ಬೋಟ್ ಕಾಣೆಯಾಗಿತ್ತು. ತುರ್ತು ಮಾಹಿತಿ ಪಡೆದು ಕೋಸ್ಟ್ ಗಾರ್ಡ್‌ನ ICGS ಕಸ್ತೂರ ಬಾ ಗಾಂಧಿ ಹಡಗು ಕಾರ್ಯಾಚರಣೆ ನಡೆಸಿತ್ತು.
ಆಳ ಸಮುದ್ರದಲ್ಲಿ ಸ್ಟೇರಿಂಗ್ ಹಾಗೂ ಗೇರ್‌ನ ವೈಫಲ್ಯದಿಂದಾಗಿ ಮೀನುಗಾರಿಕಾ ಬೋಟ್ ಅಪಾಯಕ್ಕೆ ಸಿಲುಕಿತ್ತು. ಆಳ ಸಮುದ್ರದಲ್ಲಿ ತೂಫಾನ್ ನಡುವೆ ಸಿಲುಕಿ ಮೀನುಗಾರಿಕಾ ಬೋಟ್‌ನಲ್ಲಿದ್ದ 31 ಮೀನುಗಾರರು ಅಪಾಯದಲ್ಲಿದ್ದರು. ಇದನ್ನೂ ಓದಿ : 24ನೇ ಅಂತಾರಾಷ್ಟ್ರೀಯ ಪದಕ ವಿಜೇತರು ಮತ್ತು ಅನೇಕ ರಾಷ್ಟ್ರೀಯ ಪದಕ ವಿಜೇತ’ರಿಗೆ ಸನ್ಮಾನ ಸಮಾರಂಭ
