ದೀಪಗಳ ಹಬ್ಬದ ಸಂದರ್ಭದಲ್ಲಿ ಆತ್ಮೀಯ ದೀಪಾವಳಿ ಶುಭಾಶಯ ಮತ್ತು ದೂರವಾಣಿ ಕರೆಗಾಗಿ ಅಮೆರಿಕ ಅಧ್ಯಕ್ಷ ಘನತೆವೆತ್ತ ಶ್ರೀ ಡೊನಾಲ್ಡ್ ಟ್ರಂಪ್ ಅವರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ತಮ್ಮ ಹೃತ್ಪೂರ್ವಕ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಇದನ್ನೂ ಓದಿ : ನಮೋ ಯುವ ರನ್ ಮ್ಯಾರಥಾನ್ ಕಾರ್ಯಕ್ರಮ
ಭಾರತ-ಅಮೆರಿಕ ಸಹಭಾಗಿತ್ವದ ನಿರಂತರ ಶಕ್ತಿಯನ್ನು ಒತ್ತಿ ಹೇಳಿದ ಪ್ರಧಾನಮಂತ್ರಿ ಅವರು, ಭಯೋತ್ಪಾದನೆಯನ್ನು ಎದುರಿಸಲು ಮತ್ತು ಅಂತಾರಾಷ್ಟ್ರೀಯ ಸಹಕಾರವನ್ನು ಮುಂದುವರಿಸಲು ಭಾರತದ ಅಚಲ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ.
ಈ ಕುರಿತು ಎಕ್ಸ್ ಖಾತೆಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಈ ರೀತಿ ಹೇಳಿದ್ದಾರೆ:
“ಅಮೆರಿಕ ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್ ಅವರೇ ನಿಮ್ಮ ದೂರವಾಣಿ ಕರೆ ಮತ್ತು ದೀಪಾವಳಿಯ ಶುಭಾಶಯಗಳಿಗಾಗಿ ಧನ್ಯವಾದಗಳು. ಬೆಳಕಿನ ಈ ಹಬ್ಬದಂದು, ನಮ್ಮ ಎರಡು ಮಹಾನ್ ಪ್ರಜಾಪ್ರಭುತ್ವ ದೇಶಗಳು ಜಗತ್ತಿನಲ್ಲಿ ಭರವಸೆಯನ್ನು ಬೆಳಗಿಸುವುದನ್ನು ಮುಂದುವರಿಸಲಿ ಮತ್ತು ಎಲ್ಲಾ ರೀತಿಯ ಭಯೋತ್ಪಾದನೆಯ ವಿರುದ್ಧ ಒಗ್ಗಟ್ಟಿನಿಂದ ನಿಲ್ಲಲಿ. ಇದನ್ನೂ ಓದಿ : ಸಂಘ-ಸಂಸ್ಥೆ ಸಂಘಟನೆ ಗಳನ್ನು ಕಟ್ಟುವುದು ಸುಲಭ ಉಳಿಸುವುದು ಕಷ್ಟ- ರಾಜೇಶ್ ನಾಯಕ್
