ಬಂಟ್ವಾಳ : ಅತ್ಯಂತ ಸರಳ ಹಾಗೂ ವಿದ್ಯಾರ್ಥಿ ಪ್ರೇಮಿಯಾಗಿದ್ದ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಅವರು ತಮ್ಮ ಜೀವನವೇ ಸಂದೇಶವೆಂದು ಸಾರಿದವರು. ರಾಷ್ಟ್ರಪತಿಯಾಗಿದ್ದಾಗ ಮಾಡಿದಂತಹ ಕಾರ್ಯಗಳು ಚಿರಸ್ಮರಣೀಯವಾದುದು ಎಂದು ಎಸ್.ವಿ.ಎಸ್. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಎಂ.ಡಿ.ಮಂಚಿ ನುಡಿದರು.
ಇದನ್ನೂ ಓದಿ : ವೀರ ವಿಕ್ರಮ ಜೋಡುಕರೆ ‘ರೋಟರಿ ಕಂಬಳ’ ಕ್ಕೆ ಚಾಲನೆ
ಅವರು ಕಾಲೇಜಿನ ವಿಜ್ಞಾನ ಸಂಘ ಹಾಗೂ ಐ.ಕ್ಯೂ.ಎ.ಸಿ. ಜಂಟಿ ಆಶ್ರಯದಲ್ಲಿ ನಡೆದ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಜನ್ಮದಿನಾಚರಣೆ ನಿಮಿತ್ತ ನಡೆದ ವಿಶ್ವ ವಿದ್ಯಾರ್ಥಿಗಳ ದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ.ಸುಯೋಗ ವರ್ಧನ್ ಡಿ.ಎಮ್. ಅವರು ಡಾ.ಕಲಾಂರವರ ಸಾಧನೆಗಳು, ವೈಜ್ಞಾನಿಕ ಕೊಡುಗೆಗಳು ಮತ್ತು ಜೀವನಶೈಲಿಯ ಕುರಿತು ವಿವರಿಸಿದರು.
ವೇದಿಕೆಯಲ್ಲಿ ರಸಾಯನಿಕ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಝೀನಾ ಕೊಹಿಲೊ ಹಾಗೂ ಐ.ಕ್ಯು.ಎ.ಸಿ.ಸಂಯೋಜಕರಾದ ಡಾ.ಕಾಶೀನಾಥ ಶಾಸ್ತಿç ಹೆಚ್.ವಿ. ಉಪಸ್ಥಿತರಿದ್ದರು. ಗಣಿತ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಶ್ರೀದೇವಿ ನಿರೂಪಿಸಿ, ವಿಜ್ಞಾನ ವೇದಿಕೆಯ ಅಧ್ಯಕ್ಷರಾದ ಡಾ.ವಿನಾಯಕ ಕೆ.ಎಸ್. ಸ್ವಾಗತಿಸಿದರು. ಪ್ರಾಣಿಶಾಸ್ತç ವಿಭಾಗದ ಮುಖ್ಯಸ್ಥರಾದ ಶ್ರೀ ಸುಪ್ರೀತ್ ಕಡಕೋಳ್ ವಂದಿಸಿದರು.