“ಸಂಸ್ಕೃತ ಸಪ್ತಾಹ”
ಕಲ್ಲಡ್ಕ, ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವೇದ ವ್ಯಾಸ ಧ್ಯಾನ ಮಂದಿರದಲ್ಲಿ “ಸಂಸ್ಕೃತ ಸಪ್ತಾಹ” ಕಾರ್ಯಕ್ರಮವು ಅತ್ಯಂತ ವಿಜೃಂಭಣೆಯಿಂದ ನಡೆಯಿತು.
ಕಾರ್ಯಕ್ರಮವು ದಿನಾಂಕ ೦೪-೦೮-೨೦೨೫ರಂದು ಪಾರಂಭವಾದ ಸಂಸ್ಕೃತಕಾರ್ಯಕ್ರಮವು ಎರಡು ಸಪ್ತಾಹಗಳ ತನಕವೂ ನಡೆದವು. ೧ ರಿಂದ ೭ನೇ ತರಗತಿ ವಿದ್ಯಾರ್ಥಿಗಳಿಂದಲೇ ಸ್ವಾಗತ, ಧನ್ಯವಾದ, ನಿರೂಪಣೆ, ನೃತ್ಯ, ನಾಟಕ ,ಕಥಾಭಿನಯ, ಭಾಷಣ , ಶ್ಲೋಕ , ಹಾಡು, ಮುಂತಾದವು ಸೊಗಸಾಗಿ ಮುಡಿಬಂದವು. ಧಾನ್ಯಗಳು, ತರಕಾರಿ, ಹಣ್ಣುಗಳು, ನಿತ್ಯಉಪಯೋಗಿ ವಸ್ತುಗಳ“ಸಂಸ್ಕೃತ ಪ್ರದರ್ಶಿನಿ”ಯನ್ನು ಏರ್ಪಡಿಸಲಾಗಿತ್ತು.ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಂಡರು. ಇದನ್ನೂ ಓದಿ : ಶ್ರೀ ದುರ್ಗಾ ಫ್ರೆಂಡ್ಸ್ ದುರ್ಗಾ ನಗರ ಕೂರಿಯಾಳ ಇದರ 18ನೇ ವರ್ಷದ ಮೊಸರು ಕುಡಿಕೆ ಕಾರ್ಯಕ್ರಮ
ಕಾರ್ಯಕ್ರಮದ ಕೊನೆಯ ದಿನವಾದ ೧೬-೦೮-೨೦೨೫ ರಂದು ಸಪ್ತಾಹದ ಸಮಾರೋಪವು ನಡೆಯಿತು. ಅಥಿತಿಗಳಾಗಿ ಆಗಮಿಸಿದ ಶ್ರೀರಾಮ ಆಂಗ್ಲ ಮಾದ್ಯಮ ಶಾಲೆಯ ಸಂಸ್ಕೃತ ಅಧ್ಯಾಪಕರಾದ ನಿರಂಜನ ಗೋಖಲೆಯವರು ಮಾತನಾಡುತ್ತಾ ‘ಸಂಸ್ಕೃತ ಭಾಷೆಯು ಸಮೃದ್ಧ ಭಾಷೆಯಾಗಿದೆ. “ಭಾರತಸ್ಯ ಪ್ರತಿಷ್ಠೇದ್ವೇ-ಸಂಸ್ಕೃತ ಸಂಸ್ಕೃತಿಶ್ಚ”.ಭಾರತದ ಪ್ರತಿಷ್ಠೆಗಳು ಸಂಸ್ಕೃತ ಹಾಗೂ ಸಂಸ್ಕೃತಿ.ಪಾಣಿನಿ ಮಹರ್ಷಿಯಅಷ್ಟಾಧ್ಯಾಯಿಗ್ರಂಥದ ಸೂತ್ರಗಳ ಅಭ್ಯಾಸದಿಂದ ವ್ಯಾಕರಣದ ವ್ಯವಸ್ಥೆಯನ್ನು ತಿಳಿಯಬಹುದು.ಸಂಸ್ಕೃತಕಲಿಯುವುದರಿಂದ ನಮ್ಮ ಮೇಧಾ ಶಕ್ತಿ, ಸ್ಮರಣಶಕ್ತಿ ಹೆಚ್ಚುತ್ತದೆಎಂಬುದನ್ನು ಸಂಶೋಧನೆಯಿಂದದೃಢಪಡಿಸಲಾಗಿದೆ.
ವರಾಹಮಿಹಿರರುಬರೆದಜ್ಯೋತಿಷ್ಯಾಸ್ತç, ಭಾಸ್ಕರಾಚಾರ್ಯರು ಬರೆದ ಲೀಲಾವತಿ ಎಂಬ ಗಣಿತ ಶಾಸ್ತçಗ್ರಂಥ ಹೀಗೆ ಅನೇಕ ಗ್ರಂಥಗಳು ಸಂಸ್ಕೃತದ ಹಿರಿಮೆಯನ್ನು ಸಾರುತ್ತವೆ. ಶಬ್ದಗಳ ಉತ್ಪತ್ತಿಯ ಬಗ್ಗೆ ಹೇಳುದಾದರೆ ಮಾತಾ ಎಂಬ ಪದದಿಂದ “ಮದರ್”, ಪಿತಾಎಂಬ ಪದದಿಂದ“ಫಾದÀರ್” ಹಾಗೆಯೇ ಸಂಖ್ಯೆಗಳಲ್ಲೂ ಕಾಣಬಹುದಾಗಿದೆ. ಪ್ರತಿನಿತ್ಯ ಶ್ಲೋಕಗಳ ಆಭ್ಯಾಸವನ್ನು ಮಾಡುತ್ತಾ ಸಂಸ್ಕೃತವನ್ನುಕಲಿಯೋಣ’ಎAಬುದಾಗಿ ತಿಳಿಸಿದರು.
ವೇದಿಕೆಯಲ್ಲಿಮುಖ್ಯೋಪಾಧ್ಯಾಯರುರವಿರಾಜ್ಕಣಂತೂರುಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ಪ್ರಾಪ್ತಿವರದಿ ವಾಚಿಸಿ, ಧನ್ಯಸ್ವಾಗತಿಸಿ, ತನ್ಮಯಿನಿರೂಪಿಸಿ, ಸ್ವಸ್ತಿಕ್ ವಂದಿಸಿದರು.
