ಸ್ಯಾಂಡಲ್ವುಡ್ನ (Sandalwood) ಹಿರಿಯ ನಟಿ, ಅಭಿನಯ ಸರಸ್ವತಿ ಎಂದೇ ಖ್ಯಾತಿ ಹೊಂದಿದ್ದ ನಟಿ ಸರೋಜಾದೇವಿ (B.Saroja Devi) ಅಗಲಿಕೆಗೆ 11 ದಿನಗಳು. ಈ ಹಿನ್ನೆಲೆ ವೈಕುಂಠ ಸಮಾರಾಧನೆ (Vaikuntha Samaradhane) ಕಾರ್ಯವನ್ನು ಶುಕ್ರವಾರ (ಜು.25)ರಂದು ಕುಟುಂಬಸ್ಥರು ಹಮ್ಮಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಸ್ಯಾಂಡಲ್ವುಡ್ನ ನಟರು-ನಟಿಯರು ಹಾಗೂ ಕುಟುಂಬಸ್ಥರು, ಕುಟುಂಬದ ಆಪ್ತರು ಭಾಗಿಯಾಗಿದ್ದರು.
ಸರೋಜಾದೇವಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ನಟ-ನಟಿಯರು ಭಾವುಕರಾದರು. ಸಮಾರಾಧನೆಯಲ್ಲಿ ಭಾಗಿಯಾದ ನಟ ಉಪೇಂದ್ರ ಬಳಿಕ ಮಾತನಾಡಿದರು. “ವಿಷ್ಣುವರ್ಧನ್ ಪ್ರಶಸ್ತಿ, ಡಾ.ರಾಜ್ಕುಮಾರ್ ಪ್ರಶಸ್ತಿ ಹಾಗೆ ಬಿ.ಸರೋಜಾದೇವಿ ಅವ್ರ ಹೆಸರಲ್ಲಿ ಪ್ರಶಸ್ತಿ ಆಗಬೇಕು. `ಎ’ ಸಿನಿಮಾ ಸೆನ್ಸಾರ್ ಆಗೋದಿಲ್ಲ ಅನ್ನೋ ಟೈಂನಲ್ಲಿ ಸಪೋರ್ಟ್ ನನಗೆ ಮಾಡಿದವರು. `ಎ’ ಸಿನಿಮಾವನ್ನ ಮೆಚ್ಚಿ ಹೊಗಳಿದ ಮೊದಲಿಗರು ಸರೋಜಮ್ಮ. `ಎ’ ಪಿಚ್ಚರ್ಗೆ ಪ್ರೊತ್ಸಾಹ ನೀಡದೇ ಇದ್ದಿದ್ದರೆ ಇವತ್ತು ನಾನು ಹೀರೋ ಆಗಿರೋಕೆ ಅವಕಾಶ ಇರ್ತಿರಲಿಲ್ಲ”. ಎಂದು ಈ ವೇಳೆ ನೆನಪಿಸಿಕೊಂಡರು.
ಸರೋಜಾ ದೇವಿ ಅವರ ಪುತ್ರ ಗೌತಮ್ ಮಾತನಾಡಿ “ಸರೋಜಮ್ಮ ಅವ್ರಿಗೆ ಇಂಡಸ್ಟ್ರಿ ಬಗ್ಗೆ ಯಾವಾಗಲೂ ಗೌರವವಿತ್ತು. ಕೊನೆ ಘಳಿಗೆಯಲ್ಲಿ ಅವ್ರಿಗೆ ಆರೋಗ್ಯ ಸರಿಯಿರಲಿಲ್ಲ. ಮಲ್ಲೇಶ್ವರಂ ರಸ್ತೆಗೆ ಹೆಸರು ಇಡೋಕೆ ಚರ್ಚೆ ನಡಿತಾ ಇದೆ. ಈ ನಿರ್ಧಾರಕ್ಕೆ ಕುಟುಂಬದ ಸ್ವಾಗತವಿದೆ. ಮ್ಯೂಸಿಯಂ ಮಾಡುವ ಬಗ್ಗೆ ಯಾವಥರದ ಚಿಂತನೆ ಮಾಡಿಲ್ಲ. ಮಣ್ಣು ಮಾಡಿದ ಜಾಗದಲ್ಲಿ ಮೆಮೊರಿಯಲ್ ಮಾಡೋದಕ್ಕೆ ಚಿಂತನೆ ನಡಿತಿದೆ” ಎಂದರು.
