ಮಂಗಳೂರು: ಯೆನೆಪೊಯ ಅಲೈಡ್ ಮತ್ತು ಹೆಲ್ತ್‌ಕೇರ್ ಪ್ರೊಫೆಷನ್ಸ್ ಆಯೋಜಿದ ಬಹು ನಿರೀಕ್ಷಿತ ASTRA 2.0 , ಅಖಿಲ ಭಾರತ ಅಂತರ್‌ ಕಾಲೇಜು ಕ್ರೀಡಾ ಮತ್ತು ಸಾಂಸ್ಕೃತಿಕ ಉತ್ಸವವು ಯೆನೆಪೊಯ ಸಾಕರ್ ಮೈದಾನದಲ್ಲಿ ನಡೆಯಿತು.

ಮುಖ್ಯ ಅತಿಥಿಗಳಾಗಿ ಕರ್ನಾಟಕ ಅಲೈಡ್ ಮತ್ತು ಹೆಲ್ತ್‌ಕೇರ್ ಕೌನ್ಸಿಲ್‌ನ ಅಧ್ಯಕ್ಷರಾದ ಪ್ರೊ.ಡಾ.ಇಫ್ತಿಕಾರ್ ಅಲಿ ಅಹಮದ್, ಯೆನೆಪೊಯ (ಡೀಮ್ಡ್ ಟು ಯೂನಿರ‍್ಸಿಟಿ)ಯ ಪ್ರೊ| ವೈಸ್ ಚಾನ್ಸಲರ್ ಡಾ. ಬಿ.ಶ್ರೀಪತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಅಖಿಲ ಭಾರತ ಅಂತರ್‌ ಕಾಲೇಜು ಕ್ರೀಡಾ ಮತ್ತು ಸಾಂಸ್ಕೃತಿಕ ಉತ್ಸವ

ಮುಖ್ಯ ಅತಿಥಿಗಳಾಗಿ ಕರ್ನಾಟಕ ಅಲೈಡ್ ಮತ್ತು ಹೆಲ್ತ್‌ಕೇರ್ ಕೌನ್ಸಿಲ್‌ನ ಅಧ್ಯಕ್ಷರಾದ ಪ್ರೊ.ಡಾ.ಇಫ್ತಿಕಾರ್ ಅಲಿ ಅಹಮದ್ , ಗೌರವ ಅತಿಥಿಗಳಾಗಿ ಉಪ ರೇಂಜ್ ಅರಣ್ಯಾಧಿಕಾರಿ ಮತ್ತು ಬ್ಯಾಸ್ಕೆಟ್‌ ಬಾಲ್‌ನಲ್ಲಿ ದಕ್ಷಿಣ ಏಷ್ಯಾದ ಚಿನ್ನದ ಪದಕ ವಿಜೇತ ಶ್ರೀ ಶಶಾಂಕ್ ಜೆ. ರೈ, ಭಾರತೀಯ ವಾಯುಪಡೆಯ ಜೂನಿಯರ್ ವಾರಂಟ್ ಅಧಿಕಾರಿ ಒಲಿಂಪಿಯನ್ ನೋಹ್ ನರ‍್ಮಲ್ ಟಾಮ್ ಮತ್ತು ಯೆನೆಪೊಯ ಫಿಸಿಯೋಥೆರಪಿ ಕಾಲೇಜಿನ ಹೆಮ್ಮೆಯ ಹಳೆಯ ವಿದ್ಯರ‍್ಥಿ, ಕೇರಳದ ಫೋಟ್‌ಬಾಲ್‌ನ ಹೆಡ್ ಫಿಸಿಯೋಥೆರಪಿಸ್ಟ್ಶ್ರೀ ಮುಹಮ್ಮದ್ ಅಧೀಬ್, ಯೆನೆಪೊಯ ಅಲೈಡ್ ಮತ್ತು ಹೆಲ್ತ್‌ಕೇರ್ ಪ್ರೊಫೆಶನ್ಸ್ ಡೀನ್ ಮತ್ತು ಆಸ್ಟ್ರಾ ೨.೦ ರ ಸಂಘಟನಾ ಅಧ್ಯಕ್ಷರಾದ ಡಾ. ಸುನೀತಾ ಸಲ್ಡಾನ್ಹಾ ಮತ್ತು ಸಂಘಟನಾ ಸಹ-ಅಧ್ಯಕ್ಷರಾದ ಯೆನೆಪೋಯ ಫಿಸಿಯೋಥೆರಪಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಲರ‍್ಧುರಾಜ್ ಐ ಉಪಸ್ಥಿತರಿದ್ದರು.

ಯೆನೆಪೊಯ ಸ್ಕೂಲ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್‌ನ ಸಂಘಟನಾ ಕಾರ್ಯದರ್ಶಿ ಮತ್ತು ಸಹಾಯಕ ಪ್ರಾಧ್ಯಾಪಕರಾದ ಶ್ರೀ ಮೊಹಿದೀನ್ ರ‍್ಫಾನ್ ಎಸ್.ಎ ಸ್ವಾಗತಿಸಿ, ಸಂಘಟನಾ ಕಾರ್ಯದರ್ಶಿ ಅಕ್ಷಿತಾ ದೇವಾಡಿಗ ವಂದಿಸಿದರು. ಸಮಾರಂಭವು ರಾಷ್ಟ್ರಗೀತೆಯೊಂದಿಗೆ ಮುಕ್ತಾಯವಾಯಿತು.