ನೀರುನಾಯಿಗಳ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಮೇ 27 ರಂದು “ವಿಶ್ವ ನೀರುನಾಯಿ ದಿನ” ವನ್ನು ಆಚರಿಸಲಾಗುತ್ತದೆ. ಈ ಆಕರ್ಷಕ ಮತ್ತು ಕ್ಷೀಣಿಸುತ್ತಿರುವ ಜೀವಿಗಳನ್ನು ಇಂದು ಆಚರಿಸೋಣ ಹಾಗು ಸಂರಕ್ಷಣೆಗೆ ಜಾಗೃತಿ ಮೂಡಿಸೋಣ. ವಿಶ್ವದಲ್ಲಿ 13 ಜಾತಿಯ ನೀರು ನಾಯಿಗಳಿವೆ. ಕೆಲವು ದೇಶಗಳಲ್ಲಿ ನೀರು ನಾಯಿಯನ್ನು ಸಾಕಿ ಮೀನು ಹಿಡಿಯಲು ಬಳಸುತ್ತಾರೆ.

ನಿಮಗಿದು ಗೊತ್ತೇ ?
ಸಮುದ್ರದ ನೀರು ನಾಯಿಗಳು ಒಮ್ಮೆಗೆ 5 ನಿಮಿಷಗಳಿಗಿಂತ ಹೆಚ್ಚುಕಾಲ ನೀರಿನಲ್ಲಿ ಮುಳುಗಿರಬಲ್ಲವು, ಹಾಗೆ ನದಿ ನೀರು ನಾಯಿಗಳು ತಮ್ಮ ಉಸಿರನ್ನು 8 ನಿಮಿಷಗಳವರೆಗೆ ಹಿಡಿದಿಟ್ಟುಕೊಳ್ಳಬಹುದು.

ಉದ್ದದೇಹ,ಗಿಡ್ಡ ಕಾಲು, ಬಾಲದ ಬುಡದಲ್ಲಿ ವಾಸನಾ ಗ್ರಂಥಿ ಅಭಿವೃದ್ಧಿ ಹೊಂದಿದ ಮಾಂಸದ ಹಲ್ಲುಗಳು ಈ ಕುಟುಂಬದ ಪ್ರಾಣಿಗಳ ಲಕ್ಷಣಗಳಾಗಿವೆ. ನಮ್ಮ ದೇಶದಲ್ಲಿ 3 ಜಾತಿಯ ನೀರು ನಾಯಿಗಳನ್ನು ಗುರುತಿಸಲಾಗಿದೆ.

ನದಿ ಕೆರೆಗಳಂತಹ ನೀರಿನ ಮೂಲಗಳಲ್ಲಿ ನೀರುನಾಯಿಗಳ ಇರುವಿಕೆ, ಅಲ್ಲಿನ ನೀರಿನ ಶುದ್ಧತೆಯ ಸಂಕೇತ, ನೀರುನಾಯಿಗಳು ಶುದ್ಧ ಸಿಹಿನೀರಿನ ತಾಣಗಳಲ್ಲಿ ಮಾತ್ರ ವಾಸಿಸುತ್ತವೆ. ಇವುಗಳ ಪ್ರಮುಖ ಆಹಾರ ಮೀನುಗಳು.

ಕರ್ನಾಟಕದಲ್ಲಿ ಕಾವೇರಿ ಕಬಿನಿ, ತುಂಗಭದ್ರ ನದಿಳಲ್ಲಿ ಅವುಗಳಿಗೆ ಹತ್ತಿರದ ಕೆರೆ ಕಟ್ಟೆಗಳಲ್ಲಿ ಇವು ಸಾಕಷ್ಟು ಸಂಖ್ಯೆಯಲ್ಲಿ ಕಂಡು ಬರುತ್ತಿದ್ದವು, ಆದರೆ ಇತ್ತೀಚಿನ ದಿನಗಳಲ್ಲಿ ಸಂರಕ್ಷಿತ ಅರಣ್ಯ ಪ್ರದೇಶಗಳ ವ್ಯಾಪ್ತಿ ಬಿಟ್ಟು ಉಳಿದೆಡೆ ನದಿಗಳಲ್ಲಿ ಡೈನಮೆಟ್ ಬಳಸಿ ಮೀನು ಹಿಡಿಯುವ ಚಟುವಟಿಕೆಗಳು , ಜಲಮಾಲಿನ್ಯ, ಅಕ್ರಮ ಮರಳುಗಾರಿಕೆ ಸೇರಿ ಹಲವು ಕಾರಣಗಳಿಂದ ಇವುಗಳ ಸಂತತಿ ದೊಡ್ಡ ಮಟ್ಟದಲ್ಲಿ ನಶಿಶುತ್ತಿದೆ.
ಕೇವಲ 2 ರಿಂದ 12 ಕೆ.ಜಿ. ತೂಕದ ಇವು ಗುಂಪಿನಲ್ಲಿ ವಾಸಿಸುವ ಕಾರಣ ನಿಷ್ಣಾತ ಬೇಟೆಗಾರ ಎನಿಸಿವೆ. ಹೆಸರು ನಾಯಿಯೊಂದಿಗೆ ಸೇರಿದ್ದರೂ ನಾಯಿಗೂ ಇವುಗಳಿಗೂ ಜೈವಿಕ ಸಂಬಂಧ ಇಲ್ಲ, ಬಹುಶಃ ಇವುಗಳ ಧ್ವನಿಯಿಂದ ಇವುಗಳಿಗೆ ನಾಯಿಯ ಹೆಸರಿನ ನಂಟು ಬಂದಿರಬಹುದು. ಅತಿಯಾದ ಮೀನುಗಾರಿಕೆ, ನದಿ ಕೆರೆಗಳ ಮಾಲಿನ್ಯ ಜವುಗು ಪ್ರದೇಶಗಳ ನಾಶ ಕಳ್ಳಬೇಟೆ ನೀರು ನಾಯಿಗಳನ್ನು ಅಪಾಯದಂಚಿಗೆ ತರುತ್ತಿವೆ.