ಬಂಟ್ವಾಳ ಐಸಿರಿ ನ್ಯೂಸ್
  • ಸುದ್ದಿ
  • ಬಂಟ್ವಾಳ
  • ರಾಷ್ಟ್ರೀಯ
  • ರಾಜ್ಯ
  • ಜಿಲ್ಲೆ

Select Page

ವಿದೇಶದಲ್ಲೇ ಕುಳಿತು ಮಂಗಳೂರು ಯುವತಿಯರಿಗೆ ಗಾಳ – ಗಂಡನ ಪ್ರಣಯದಾಟ ಬಿಚ್ಚಿಟ್ಟ ಪತ್ನಿ

Posted by Bantwala Isiri News | Feb 16, 2026 | ಬಂಟ್ವಾಳ | 0 |

ವಿದೇಶದಲ್ಲೇ ಕುಳಿತು ಮಂಗಳೂರು ಯುವತಿಯರಿಗೆ ಗಾಳ – ಗಂಡನ ಪ್ರಣಯದಾಟ ಬಿಚ್ಚಿಟ್ಟ ಪತ್ನಿ

– ಹುಡುಗಿಯರ ಹಣದಲ್ಲೇ ದಿಲ್ದಾರ್‌ ಮಾಡ್ತಿದ್ದ ʻಮಂಗಳೂರು ಮನ್ಮಥʼ
– ಹೆಂಡ್ತಿ ಓಡಿಹೋಗಿದ್ದಾಳೆ ಅಂತ ಅನ್ಯ ಯುವತಿಯರ ಜೊತೆಗೆ ಚಕ್ಕಂದ

ಮಂಗಳೂರು: ಮ್ಯಾಟ್ರಿಮೋನಿಯಲ್ಲಿ (Matrimony) ಪರಿಚಯ ಮಾಡಿಕೊಂಡು ಮದ್ವೆಯಾಗಿ ನಂಬಿಸಿ ಹಣ ವಂಚಿಸಿದ್ದ ಪ್ರಕರಣ ಮಾಸುವ ಮುನ್ನವೇ ಮತ್ತೊಬ್ಬ ʻಮಂಗಳೂರು ಮನ್ಮಥʼನ ಪ್ರಕರಣ ಬೆಳಕಿಗೆ ಬಂದಿದೆ. ಈತ ವಿದೇಶದಲ್ಲೇ ಕುಳಿತು ಮಂಗಳೂರು ಯುವತಿಯರಿಗೆ ಗಾಳ ಹಾಕುತ್ತಿದ್ದ ಅನ್ನೋದು ಗೊತ್ತಾಗಿದೆ.

ಗಂಡನ ಪ್ರೀತಿ, ಪ್ರೇಮ, ಪ್ರಣಯದಾಟವನ್ನ ಸ್ವತಃ ಪತ್ನಿಯೇ ಬಟಾಬಯಲು ಮಾಡಿದ್ದು, ಬಜೆಪೆ ನಿವಾಸಿ ಮನೀಶ್ ವಿರುದ್ಧ ಪತ್ನಿ ಪ್ರೀತಿ ಮಂಗಳೂರು ಮಹಿಳಾ ಪೊಲೀಸ್‌ ಠಾಣೆಗೆ (Mangaluru Women Police Station) ದೂರು ನೀಡಿದ್ದಾರೆ.

ಸಂತ್ರಸ್ತೆ ಪ್ರೀತಿ ಎಂಬಾಕೆಗೆ ಫೇಸ್​​ಬುಕ್​​ನಲ್ಲಿ ಪರಿಚಯವಾಗಿದ್ದ ಆರೋಪಿ ಪತಿ ಮನೀಶ್​​, ಬ್ಲ್ಯಾಕ್​​ಮೇಲ್​​ ಮಾಡಿ ಆಕೆಯನ್ನ ಮದುವೆ ಆಗಿದ್ದನಂತೆ. ಮದುವೆಗೆ ಮೂರು ದಿನ ಬಾಕಿಯಿರುವಾಗಲೇ ಹಣ ಇಲ್ಲ ಅಂತ ಆತ್ಮಹತ್ಯೆ ನಾಟಕವಾಡಿದ್ದಾನೆ. ಇದನ್ನ ನಂಬಿ ಮದ್ವೆಗೆ ಎಲ್ಲ ಖರ್ಚನ್ನ ತಾವೇ ನೋಡಿಕೊಂಡು ಪ್ರೀತಿ (Preeti) ಪೋಷಕರು ವಿವಾಹ ಕಾರ್ಯ ನಡೆಸಿಕೊಟ್ಟಿದ್ದರು. ಅಲ್ಲದೇ 2 ಲಕ್ಷ ಹಣ ಕೊಟ್ಟು ವಿದೇಶದಲ್ಲಿ ಮನೀಶ್​​ಗೆ ಕೆಲಸ ಕೊಡಿಸಲು ಪ್ರೀತಿ ಸಹಾಯ ಮಾಡಿದ್ದರು. ಆದ್ರೆ ದುಬೈಗೆ ಹೋದ ಈತ ಬಹರೇನ್​​ನಲ್ಲಿರೋ ಮಹಿಳೆ ಜೊತೆ ಲವ್ವಿಡವ್ವಿ ಶುರುಮಾಡಿದ್ದಾನೆ.

ವಿಚಾರ ತಿಳಿದ ಪ್ರೀತಿ, ಮನೀಶ್‌ನ ಪುರಾಣ ಕೆದಕಲು ಶುರು ಮಾಡಿದ್ದಾರೆ. ಈ ವೇಳೆ ಮನೀಶ್​​ನ ನಿಜರೂಪ ಬಯಲಾಗಿದೆ. ಮದ್ವೆಗೂ ಮುನ್ನ ಅನೇಕ ಯುವತಿಯರ ಜೊತೆಗೆ ಚಕ್ಕಂದ ಆಡಿರೋದು ಗೊತ್ತಾಗಿದೆ.

ಹೌದು. ಪ್ರೀತಿ ಜೊತೆ ಮದುವೆಗೂ (Marriage) ಮುನ್ನ ಹಲವು ಯುವತಿಯರ ಜೊತೆ ಲವ್ ಅಫೇರ್​​ ಹೊಂದಿದ್ದ ಮನೀಶ್​​, ಅವರ ಬಳಿ ಕೂಡ ಹಣ ಪಡೆದು ಮೋಸ ಮಾಡಿದ್ದ. ಈ ವಿಚಾರವನ್ನ ಆ ಯುವತಿಯರೇ ಪ್ರೀತಿಗೆ ತಿಳಿಸಿದ್ದಾರೆ. ಹಣ ವಾಪಾಸ್ ಕೇಳಿದ್ರೆ ಎಲ್ಲ ಯುವತಿಯರ ಬಳಿ ಒಂದೇ ನಾಟಕ ಆಡಿದ್ದ ಆರೋಪಿ, ತನಗೆ ಬ್ರೈನ್​ ಟ್ಯೂಮರ್ ಇದೆ, ಹಾರ್ಟ್‌ನಲ್ಲಿ ತೂತಿದೆ ಎಂದು ಹೇಳಿ ಹಣ ಕೊಡದೇ ಲವ್ ಬ್ರೇಕ್ ಅಪ್ ಮಾಡಿಕೊಳ್ತಿದ್ದ ಎಂದು ದೂರಿನಲ್ಲಿ ಪ್ರೀತಿ ತಿಳಿಸಿದ್ದಾರೆ.

ಟಿಕ್ ಟಾಕ್ ಮಾಡಿ ಯುವತಿಯರಿಗೆ ಗಾಳ ಹಾಕುವ ಮನೀಶ್ ನಡೆತೆಯಿಂದ ಬೇಸತ್ತ ಪತ್ನಿ ಪ್ರೀತಿ, ಇಂತಹ ಗಂಡ ಬೇಡ. ಈತನ ನಂಬಿ ಮತ್ತೆ ಯಾರು ಮೋಸ ಹೋಗಬಾರದು ಎಂದು ಅಲವತ್ತುಕೊಂಡಿದ್ದಾರೆ.

Share:

Rate:

Previousರೂ.2 ಕೋಟಿ ಅನುದಾನದಲ್ಲಿ ಡಾಮರೀಕರಣಗೊಂಡ ಶ್ರೀ ಕಾರಿಂಜೇಶ್ವರ ದೇವಸ್ಥಾನದ ಸಂಪರ್ಕ ರಸ್ತೆ ಉದ್ಘಾಟನೆ
Nextಅಸ್ಸಾಂನ ದಿಬ್ರುಗಢದಲ್ಲಿ ಈಶಾನ್ಯ ಭಾರತದ ಮೊದಲ ತುರ್ತು ಲ್ಯಾಂಡಿಂಗ್ ಸೌಲಭ್ಯ (ELF) ಉದ್ಘಾಟಿಸಿದ ಪ್ರಧಾನಮಂತ್ರಿ

About The Author

Bantwala Isiri News

Bantwala Isiri News

News Bantwala Isiri News was established on 01 Oct 2023. With a decade of experience in Journalism field, we are providing daily news updates to our readers. News from political corridors, daily events, sports, business, science, technology is published on the website. With an aim to support readers from Karnataka we are providing information about job vacancies in different companies and government departments. WRITE IN BANTWALA ISIRI NEWS Do you have the skill of writing articles, stories, poems, arts? Then we will give an opportunity to publish your writings in Bantwala Isiri News. Send your writings to bantwalaisirinews@gmail.com CONTACT US FOR ADVERTISEMENT Mail us your advertisement, address and phone number to bantwalaisirinews@gmail.com

Related Posts

ಭಾರತ ಸರಕಾರ, ರೈಲ್ವೆ ಸಚಿವಾಲಯ : ಹೊಸ ನೇಮಕಾತಿ ಅಧಿಸೂಚನೆ -2024

ಭಾರತ ಸರಕಾರ, ರೈಲ್ವೆ ಸಚಿವಾಲಯ : ಹೊಸ ನೇಮಕಾತಿ ಅಧಿಸೂಚನೆ -2024

22 September 2024

ಯುದ್ಧದ ಬಿಸಿಗೆ ಬೆದರಿ ಸಾಮೂಹಿಕ ರಾಜೀನಾಮೆ ನೀಡುತ್ತಿದ್ದಾರೆ ಪಾಕ್‌ ಸೈನಿಕರು!

ಯುದ್ಧದ ಬಿಸಿಗೆ ಬೆದರಿ ಸಾಮೂಹಿಕ ರಾಜೀನಾಮೆ ನೀಡುತ್ತಿದ್ದಾರೆ ಪಾಕ್‌ ಸೈನಿಕರು!

28 April 2025

ಶ್ರೀ ವೆಂಕಟರಮಣಸ್ವಾಮಿ ಕಾಲೇಜು, ಬಂಟ್ವಾಳ : ಮತದಾನ ಜಾಗೃತಿ ಕಾರ್ಯಕ್ರಮ

ಶ್ರೀ ವೆಂಕಟರಮಣಸ್ವಾಮಿ ಕಾಲೇಜು, ಬಂಟ್ವಾಳ : ಮತದಾನ ಜಾಗೃತಿ ಕಾರ್ಯಕ್ರಮ

7 April 2024

ಉತ್ತಮ ಆರೋಗ್ಯಕ್ಕಾಗಿ ಕ್ಯಾರೆಟ್‌

ಉತ್ತಮ ಆರೋಗ್ಯಕ್ಕಾಗಿ ಕ್ಯಾರೆಟ್‌

4 January 2025

Leave a reply Cancel reply

Your email address will not be published. Required fields are marked *

ಇತ್ತೀಚಿನ ವರದಿಗಳು

  • ಅಸ್ಸಾಂನ ದಿಬ್ರುಗಢದಲ್ಲಿ ಈಶಾನ್ಯ ಭಾರತದ ಮೊದಲ ತುರ್ತು ಲ್ಯಾಂಡಿಂಗ್ ಸೌಲಭ್ಯ (ELF) ಉದ್ಘಾಟಿಸಿದ ಪ್ರಧಾನಮಂತ್ರಿ
    ಅಸ್ಸಾಂನ ದಿಬ್ರುಗಢದಲ್ಲಿ ಈಶಾನ್ಯ ಭಾರತದ ಮೊದಲ ತುರ್ತು ಲ್ಯಾಂಡಿಂಗ್ ಸೌಲಭ್ಯ (ELF) ಉದ್ಘಾಟಿಸಿದ ಪ್ರಧಾನಮಂತ್ರಿ
  • ವಿದೇಶದಲ್ಲೇ ಕುಳಿತು ಮಂಗಳೂರು ಯುವತಿಯರಿಗೆ ಗಾಳ – ಗಂಡನ ಪ್ರಣಯದಾಟ ಬಿಚ್ಚಿಟ್ಟ ಪತ್ನಿ
    ವಿದೇಶದಲ್ಲೇ ಕುಳಿತು ಮಂಗಳೂರು ಯುವತಿಯರಿಗೆ ಗಾಳ – ಗಂಡನ ಪ್ರಣಯದಾಟ ಬಿಚ್ಚಿಟ್ಟ ಪತ್ನಿ
  • ರೂ.2 ಕೋಟಿ ಅನುದಾನದಲ್ಲಿ ಡಾಮರೀಕರಣಗೊಂಡ ಶ್ರೀ ಕಾರಿಂಜೇಶ್ವರ ದೇವಸ್ಥಾನದ ಸಂಪರ್ಕ ರಸ್ತೆ ಉದ್ಘಾಟನೆ
    ರೂ.2 ಕೋಟಿ ಅನುದಾನದಲ್ಲಿ ಡಾಮರೀಕರಣಗೊಂಡ ಶ್ರೀ ಕಾರಿಂಜೇಶ್ವರ ದೇವಸ್ಥಾನದ ಸಂಪರ್ಕ ರಸ್ತೆ ಉದ್ಘಾಟನೆ
  • ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಉಚಿತ ವಾಟರ್ ಬೆಡ್ ವಿತಣೆ
    ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಉಚಿತ ವಾಟರ್ ಬೆಡ್ ವಿತಣೆ
  • ವಿಜಯನಗರ ಜಿಲ್ಲೆಯ ಹಂಪಿಯಲ್ಲಿ ಆಯೋಜಿಸಿದ್ದ ಐತಿಹಾಸಿಕ ಹಂಪಿ ಉತ್ಸವ – 2026 ಅನ್ನು ಉದ್ಘಾಟಿಸಿದ ಸಿ.ಎಂ.
    ವಿಜಯನಗರ ಜಿಲ್ಲೆಯ ಹಂಪಿಯಲ್ಲಿ ಆಯೋಜಿಸಿದ್ದ ಐತಿಹಾಸಿಕ ಹಂಪಿ ಉತ್ಸವ – 2026 ಅನ್ನು ಉದ್ಘಾಟಿಸಿದ ಸಿ.ಎಂ.
  • International Oral and Maxillofacial Surgeons Day Celebrated at Yenepoya Dental College
    International Oral and Maxillofacial Surgeons Day Celebrated at Yenepoya Dental College
  • ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಶ್ರೀಯುತ Mansukh Mandaviya ಭೇಟಿ
    ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಶ್ರೀಯುತ Mansukh Mandaviya ಭೇಟಿ
  • ಉಜಿರೆ: ಎಸ್‌.ಡಿ.ಎಂ. ಶಾಲಾ ವಿದ್ಯಾರ್ಥಿಗಳಿಗಾಗಿ ರೊಬೋಟ್ “ಶ್ರುತಿ” ಜೊತೆಗೆ ವಿಶೇಷ ಸಂವಹನ ಕಾರ್ಯಕ್ರಮ
    ಉಜಿರೆ: ಎಸ್‌.ಡಿ.ಎಂ. ಶಾಲಾ ವಿದ್ಯಾರ್ಥಿಗಳಿಗಾಗಿ ರೊಬೋಟ್ “ಶ್ರುತಿ” ಜೊತೆಗೆ ವಿಶೇಷ ಸಂವಹನ ಕಾರ್ಯಕ್ರಮ
  • ಕಲ್ಲಡ್ಕ, ಗೋಳ್ತಮಜಲ್ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ
    ಕಲ್ಲಡ್ಕ, ಗೋಳ್ತಮಜಲ್ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ
  • ಹೊಸಕೋಟೆ ಬಳಿ ಬೆಳ್ಳಂಬೆಳಗ್ಗೆ ಭೀಕರ ಸರಣಿ ಅಪಘಾತ – 7 ಜನ ಸ್ಥಳದಲ್ಲೇ ದುರ್ಮರಣ
    ಹೊಸಕೋಟೆ ಬಳಿ ಬೆಳ್ಳಂಬೆಳಗ್ಗೆ ಭೀಕರ ಸರಣಿ ಅಪಘಾತ – 7 ಜನ ಸ್ಥಳದಲ್ಲೇ ದುರ್ಮರಣ

Designed by Elegant Themes | Powered by WordPress

error: Content is protected !!