ತಿರುವನಂತಪುರಂ: ಪ್ರಿಯಕರ ಫರ್ಮಾನ್ ಖಾನ್ ಜೊತೆ ಕುಂಭಮೇಳದ (Kumbh Mela) ವೈರಲ್ ತಾರೆ ಮೊನಾಲಿಸಾ ಬೋಂಸ್ಲೆ (Monalisa Bhonsle) ಮದುವೆಯಾಗಿದ್ದಾರೆ.
ಪ್ರೀತಿಗೆ ಪೋಷಕರ ಅಡ್ಡಿ ಹಿನ್ನೆಲೆ ಕೇರಳದ ಪೂವಾರ್ನ ಅರುಮಾನೂರ್ ನೈನಾರ್ ದೇಗುಲದಲ್ಲಿ ಇಂದು ಸಂಜೆ 5:30ರ ಹೊತ್ತಿಗೆ ಇಬ್ಬರು ವಿವಾಹವಾಗಿದ್ದಾರೆ. ಕೇರಳದ ಸಚಿವ ವಿ.ಶಿವನ್ ಕುಟ್ಟಿ, ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂ.ವಿ.ಗೋವಿಂದನ್ ಭಾಗಿಯಾಗಿದ್ದರು. ಇದನ್ನೂ ಓದಿ : ಅಲ್ಲಿಪಾದೆ ಶ್ರೀರಾಮ ಭಜನಾ ಮಂದಿರದಲ್ಲಿ ಉಚಿತ ಆರೋಗ್ಯ ತಪಾಸನ ಶಿಬಿರ

ಮಹಾರಾಷ್ಟ್ರದ ಫರ್ಮಾನ್ ಖಾನ್ ನಟ ಹಾಗೂ ಮಾಡೆಲ್. ಮಧ್ಯಪ್ರದೇಶದ ಮೊನಾಲಿಸಾಗೆ ಒಂದೂವರೆ ವರ್ಷದ ಹಿಂದೆ ಫೇಸ್ಬುಕ್ನಲ್ಲಿ ಪರಿಚಯವಾಗಿದ್ದ. ಪರಿಚಯ ದಿನಕಳೆದಂತೆ ಪ್ರೀತಿಗೆ ತಿರುಗಿತು. ಪೂವಾರ್ನಲ್ಲಿ ಈಗ ಮೊನಾಲಿಸಾ ಅಭಿನಯದ ಚಿತ್ರದ ಶೂಟಿಂಗ್ ನಡೆಯುತ್ತಿದೆ. ಶೂಟಿಂಗ್ ಸ್ಪಾಟ್ನಿಂದಲೇ ತಂಬಾನೂರು ಠಾಣೆಗೆ ಬಂದು ತನ್ನ ತಂದೆ ವಿರುದ್ಧ ಮೊನಾಲಿಸಾ ದೂರು ನೀಡಿದ್ದಳು.
