ಬಂಟ್ವಾಳ ತಾಲೂಕಿನ ಬಾಳ್ತಿಲ ಗ್ರಾಮದ ಕೋರ್ಯ ಮೊಟ್ಟಿಕಲ್ಲು ಪ್ರಗತಿಪರ ಕೃಷಿಕ ಶೀನಪ್ಪ ಪೂಜಾರಿ(107) ಜು.15ರಂದು ಸ್ವಗೃಹದಲ್ಲಿ ನಿಧನ ಹೊಂದಿದರು.
ಪಾವೂರು ಭಂಡಾರ ಮನೆ ಕೋಟ್ಯಾನ್ ಕುಟುಂಬದ ಹಿರಿಯ ಕೊಂಡಿ ಶತಾಯುಶಿ ಆಗಿದ್ದ ಶೀನಪ್ಪ ಪೂಜಾರಿ ವಯೋ ಸಹಜವಾಗಿ ನಿಧನರಾಗಿದ್ದಾರೆ.
ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಇವರು ಬಾಳ್ತಿಲ ಗ್ರಾಮದ ಮಾಜಿ ಮಂಡಲ ಪ್ರಧಾನರಾಗಿದ್ದರು. ಮೃತರು ಎರಡು ಪುತ್ರ ರನ್ನು ನಾಲ್ಕು ಪುತ್ರಿಯರನ್ನು ಹಾಗೂ ಅಪಾರ ಬಂದು ಮಿತ್ರರನ್ನು ಅಗಲಿದ್ದಾರೆ.