ಬಂಟ್ವಾಳ ಐಸಿರಿ ನ್ಯೂಸ್
  • ಸುದ್ದಿ
  • ಬಂಟ್ವಾಳ
  • ರಾಷ್ಟ್ರೀಯ
  • ರಾಜ್ಯ
  • ಜಿಲ್ಲೆ

Select Page

ಹಾರ್ಮುಜ್ ಜಲಸಂಧಿ ಬುಡಕ್ಕೆ ಬಾಂಬ್ ಇಟ್ಟ ಅಮೆರಿಕ – 5,000 ಪೌಂಡ್ ಬಂಕರ್ ಬಸ್ಟರ್ ಬಾಂಬ್ ಸುರಿಮಳೆ

Posted by Bantwala Isiri News | Mar 18, 2026 | ಬಂಟ್ವಾಳ | 0 |

ಹಾರ್ಮುಜ್ ಜಲಸಂಧಿ ಬುಡಕ್ಕೆ ಬಾಂಬ್ ಇಟ್ಟ ಅಮೆರಿಕ – 5,000 ಪೌಂಡ್ ಬಂಕರ್ ಬಸ್ಟರ್ ಬಾಂಬ್ ಸುರಿಮಳೆ

ಇರಾನ್‌ನ ಕರಾವಳಿಯುದ್ದಕ್ಕೂ ಗುರಿಯಾಗಿಸಿ ಯುಎಸ್ ದಾಳಿ

ಟೆಹ್ರಾನ್: ಇರಾನ್‌-ಇಸ್ರೇಲ್‌, ಅಮೆರಿಕ ಯುದ್ಧ 19ನೇ ದಿನಕ್ಕೆ ಕಾಲಿಟ್ಟಿದೆ. ಇರಾನ್‌ ಹಿಡಿತದಲ್ಲಿದ್ದ ಜಗತ್ತಿನ ಪ್ರಮುಖ ಹಾರ್ಮುಜ್‌ ಜಲಸಂಧಿ ಬಳಿ ಅಮೆರಿಕ ತೀವ್ರ ದಾಳಿ ನಡೆಸಿದೆ. ಜಲಮಾರ್ಗದ ಬಳಿಕ ಇರಾನಿನ ಕ್ಷಿಪಣಿ ತಾಣಗಳನ್ನು ಹೊಡೆದುರುಳಿಸಿರುವುದಾಗಿ ಅಮೆರಿಕ ಸೇನೆ ತಿಳಿಸಿದೆ. ಇದನ್ನೂ ಓದಿ : ಪತಿಯನ್ನ ಅರೆಸ್ಟ್ ಮಾಡಿ ಪತ್ನಿಯನ್ನ ಮಂಚಕ್ಕೆ ಕರೀತಿದ್ದ ಕೇಸ್ – ಇನ್ಸ್‌ಪೆಕ್ಟರ್‌ ಸಂದೇಶ್ ಸಸ್ಪೆಂಡ್

ಹಾರ್ಮುಜ್‌ ಜಲಸಂಧಿ ಬಳಿಯ ಇರಾನ್‌ನ ಕರಾವಳಿಯುದ್ದಕ್ಕೂ ಇದ್ದ ಕ್ಷಿಪಣಿ ತಾಣಗಳ ಮೇಲೆ ಅಮೆರಿಕ 5,000 ಪೌಂಡ್ ಬಂಕರ್ ಬಸ್ಟರ್ ಬಾಂಬ್ ಸುರಿಮಳೆ ಸುರಿಸಿದೆ. ನಿರ್ಣಾಯಕ ಜಲಮಾರ್ಗವನ್ನು ಮತ್ತೆ ತೆರೆಯುವ ಉದ್ದೇಶದಿಂದ ಅಮೆರಿಕ ಶಸ್ತ್ರಗಾರದಲ್ಲಿರುವ ಕೆಲವು ಶಕ್ತಿಶಾಲಿ ಬಾಂಬ್‌ಗಳ ದಾಳಿ ನಡೆಸಿದೆ.

ಈ ತಾಣಗಳಲ್ಲಿರುವ ಇರಾನಿನ ಹಡಗು ವಿರೋಧಿ ಕ್ರೂಸ್ ಕ್ಷಿಪಣಿಗಳು ಜಲಸಂಧಿಯಲ್ಲಿ ಅಂತರರಾಷ್ಟ್ರೀಯ ಹಡಗು ಸಾಗಣೆಗೆ ಅಪಾಯವನ್ನುಂಟುಮಾಡಿದವು. ಹೀಗಾಗಿ, ಅವುಗಳನ್ನು ಹೊಡೆದುರುಳಿಸಲಾಗಿದೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ ತಿಳಿಸಿದೆ.

ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಯುದ್ಧಕ್ಕೆ ಪ್ರತೀಕಾರವಾಗಿ, ವಿಶ್ವದ ಐದನೇ ಒಂದು ಭಾಗದಷ್ಟು ತೈಲ ಪೂರೈಕೆಯಾಗುವ ಹಾರ್ಮುಜ್ ಜಲಸಂಧಿಯನ್ನು ಇರಾನ್ ಮುಚ್ಚಿತ್ತು. ಇದರಿಂದ ಹಲವು ರಾಷ್ಟ್ರಗಳಲ್ಲಿ ತೈಲ ಬಿಕ್ಕಟ್ಟು ಶುರುವಾಯಿತು. ಪ್ರಮುಖ ಮಾರ್ಗವನ್ನು ಓಪನ್‌ ಮಾಡುವುದಕ್ಕಾಗಿ ಈ ಬಾಂಬ್ ದಾಳಿ ನಡೆದಿದೆ.

ಹಾರ್ಮುಜ್ ಜಲಸಂಧಿಯನ್ನು ಸುರಕ್ಷಿತಗೊಳಿಸಲು, ಈ ಪ್ರದೇಶದ ತೈಲ ರಫ್ತಿನ ಮೇಲಿರುವ ದಿಗ್ಬಂಧನ ಸಡಿಲಿಸಲು ಸಹಾಯ ಮಾಡುವಂತೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕರೆ ನೀಡಿದ್ದರು. ಆದರೆ, ನ್ಯಾಟೋ ಸೇರಿದಂತೆ ಅಮೆರಿಕದ ಮಿತ್ರರಾಷ್ಟ್ರಗಳು ಈ ಕರೆಯನ್ನು ತಿರಸ್ಕರಿಸಿದ್ದವು. ಜಗತ್ತು ನಮ್ಮ ಪ್ರಯತ್ನಗಳನ್ನು ಮೆಚ್ಚದಿದ್ದರೂ ಸಹ, ನಾವು ವಿಶ್ವದ ಒಳಿತಿಗಾಗಿ ಯುದ್ಧವನ್ನು ನಡೆಸುತ್ತಿದ್ದೇನೆ ಎಂದು ಟ್ರಂಪ್ ಒತ್ತಿ ಹೇಳಿದರು. ಆ ಬೆನ್ನಲ್ಲೇ ಅಮೆರಿಕ ದಾಳಿ ಮಾಡಿದೆ.

Share:

Rate:

Previousಪತಿಯನ್ನ ಅರೆಸ್ಟ್ ಮಾಡಿ ಪತ್ನಿಯನ್ನ ಮಂಚಕ್ಕೆ ಕರೀತಿದ್ದ ಕೇಸ್ – ಇನ್ಸ್‌ಪೆಕ್ಟರ್‌ ಸಂದೇಶ್ ಸಸ್ಪೆಂಡ್
Nextತುಮಕೂರು ವಿಶ್ವವಿದ್ಯಾಲಯ ಕ್ಯಾಂಪಸ್‌ನಲ್ಲಿ ನೂತನವಾಗಿ ನಿರ್ಮಿಸಲಾದ ಬಾಸ್ಕೆಟ್ ಬಾಲ್ ಅಂಕಣದ ಉದ್ಘಾಟನೆ

About The Author

Bantwala Isiri News

Bantwala Isiri News

News Bantwala Isiri News was established on 01 Oct 2023. With a decade of experience in Journalism field, we are providing daily news updates to our readers. News from political corridors, daily events, sports, business, science, technology is published on the website. With an aim to support readers from Karnataka we are providing information about job vacancies in different companies and government departments. WRITE IN BANTWALA ISIRI NEWS Do you have the skill of writing articles, stories, poems, arts? Then we will give an opportunity to publish your writings in Bantwala Isiri News. Send your writings to bantwalaisirinews@gmail.com CONTACT US FOR ADVERTISEMENT Mail us your advertisement, address and phone number to bantwalaisirinews@gmail.com

Related Posts

ಯಾರೂ ಕಬ್ಬಿಣವನ್ನು ನಾಶಮಾಡಲು ಸಾಧ್ಯವಿಲ್ಲ. ಆದರೆ ಅದರ ಅದರ ತುಕ್ಕು ಅದನ್ನೇ ನಾಶ ಮಾಡಬಹುದು – ರತನ್‌ ಟಾಟಾ ಪ್ರಸಿದ್ಧ ಅಣಿಮುತ್ತು

ಯಾರೂ ಕಬ್ಬಿಣವನ್ನು ನಾಶಮಾಡಲು ಸಾಧ್ಯವಿಲ್ಲ. ಆದರೆ ಅದರ ಅದರ ತುಕ್ಕು ಅದನ್ನೇ ನಾಶ ಮಾಡಬಹುದು – ರತನ್‌ ಟಾಟಾ ಪ್ರಸಿದ್ಧ ಅಣಿಮುತ್ತು

10 October 2024

ಶಿಕ್ಷಣ ಮತ್ತು ಸಂಸ್ಕಾರದ ಮಹತ್ವ ನಾರಾಯಣಗುರುಗಳ ಸಂದೇಶದ ಸಾರ : ಜಯರಾಮ ಪೂಜಾರಿ

ಶಿಕ್ಷಣ ಮತ್ತು ಸಂಸ್ಕಾರದ ಮಹತ್ವ ನಾರಾಯಣಗುರುಗಳ ಸಂದೇಶದ ಸಾರ : ಜಯರಾಮ ಪೂಜಾರಿ

27 April 2025

ಬೆಂಕಿ ಹಚ್ಚಿಕೊಂಡು ವಿದ್ಯಾರ್ಥಿನಿ ಆತ್ಮಹತ್ಯೆ ಕೇಸ್‌ – ಒಡಿಶಾ ವಿಧಾನಸೌಧ ಬಳಿ ಭುಗಿಲೆದ್ದ ಆಕ್ರೋಶ

ಬೆಂಕಿ ಹಚ್ಚಿಕೊಂಡು ವಿದ್ಯಾರ್ಥಿನಿ ಆತ್ಮಹತ್ಯೆ ಕೇಸ್‌ – ಒಡಿಶಾ ವಿಧಾನಸೌಧ ಬಳಿ ಭುಗಿಲೆದ್ದ ಆಕ್ರೋಶ

16 July 2025

ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವಿರೇಂದ್ರ ಹೆಗ್ಗಡೆ ಅವರಿಂದ ಕಾಳಿ ಸರೋವರಕ್ಕೆ ಬಾಗಿನ ಅರ್ಪಣೆ

ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವಿರೇಂದ್ರ ಹೆಗ್ಗಡೆ ಅವರಿಂದ ಕಾಳಿ ಸರೋವರಕ್ಕೆ ಬಾಗಿನ ಅರ್ಪಣೆ

9 May 2025

Leave a reply Cancel reply

Your email address will not be published. Required fields are marked *

ಇತ್ತೀಚಿನ ವರದಿಗಳು

  • ತುಮಕೂರು ವಿಶ್ವವಿದ್ಯಾಲಯ ಕ್ಯಾಂಪಸ್‌ನಲ್ಲಿ ನೂತನವಾಗಿ ನಿರ್ಮಿಸಲಾದ ಬಾಸ್ಕೆಟ್ ಬಾಲ್ ಅಂಕಣದ ಉದ್ಘಾಟನೆ
    ತುಮಕೂರು ವಿಶ್ವವಿದ್ಯಾಲಯ ಕ್ಯಾಂಪಸ್‌ನಲ್ಲಿ ನೂತನವಾಗಿ ನಿರ್ಮಿಸಲಾದ ಬಾಸ್ಕೆಟ್ ಬಾಲ್ ಅಂಕಣದ ಉದ್ಘಾಟನೆ
  • ಹಾರ್ಮುಜ್ ಜಲಸಂಧಿ ಬುಡಕ್ಕೆ ಬಾಂಬ್ ಇಟ್ಟ ಅಮೆರಿಕ – 5,000 ಪೌಂಡ್ ಬಂಕರ್ ಬಸ್ಟರ್ ಬಾಂಬ್ ಸುರಿಮಳೆ
    ಹಾರ್ಮುಜ್ ಜಲಸಂಧಿ ಬುಡಕ್ಕೆ ಬಾಂಬ್ ಇಟ್ಟ ಅಮೆರಿಕ – 5,000 ಪೌಂಡ್ ಬಂಕರ್ ಬಸ್ಟರ್ ಬಾಂಬ್ ಸುರಿಮಳೆ
  • ಪತಿಯನ್ನ ಅರೆಸ್ಟ್ ಮಾಡಿ ಪತ್ನಿಯನ್ನ ಮಂಚಕ್ಕೆ ಕರೀತಿದ್ದ ಕೇಸ್ –  ಇನ್ಸ್‌ಪೆಕ್ಟರ್‌ ಸಂದೇಶ್ ಸಸ್ಪೆಂಡ್
    ಪತಿಯನ್ನ ಅರೆಸ್ಟ್ ಮಾಡಿ ಪತ್ನಿಯನ್ನ ಮಂಚಕ್ಕೆ ಕರೀತಿದ್ದ ಕೇಸ್ – ಇನ್ಸ್‌ಪೆಕ್ಟರ್‌ ಸಂದೇಶ್ ಸಸ್ಪೆಂಡ್
  • ಶಿವಮೊಗ್ಗ | ವ್ಯಕ್ತಿಯ ಸಜೀವ ದಹನ – ಇಬ್ಬರಿಗೆ ಜೀವಾವಧಿ ಶಿಕ್ಷೆ
    ಶಿವಮೊಗ್ಗ | ವ್ಯಕ್ತಿಯ ಸಜೀವ ದಹನ – ಇಬ್ಬರಿಗೆ ಜೀವಾವಧಿ ಶಿಕ್ಷೆ
  • ನಾವು ಪ್ರತಿಯೊಂದು ಹಡಗಿನ ಜೊತೆ ಸಂಪರ್ಕದಲ್ಲಿದ್ದೇವೆ, ನಾಳೆ ಬರುತ್ತೆ 81 ಸಾವಿರ ಟನ್‌ ಕಚ್ಚಾ ತೈಲ: ಕೇಂದ್ರ
    ನಾವು ಪ್ರತಿಯೊಂದು ಹಡಗಿನ ಜೊತೆ ಸಂಪರ್ಕದಲ್ಲಿದ್ದೇವೆ, ನಾಳೆ ಬರುತ್ತೆ 81 ಸಾವಿರ ಟನ್‌ ಕಚ್ಚಾ ತೈಲ: ಕೇಂದ್ರ
  • ಗಂಡನನ್ನು ಅರೆಸ್ಟ್‌ ಮಾಡಿ ಹೆಂಡತಿನ ಮಂಚಕ್ಕೆ ಕರಿತಿದ್ದ ಇನ್ಸ್‌ಪೆಕ್ಟರ್‌ – ನೊಂದ ಮಹಿಳೆಯಿಂದ ಸಿಎಂಗೆ ದೂರು
    ಗಂಡನನ್ನು ಅರೆಸ್ಟ್‌ ಮಾಡಿ ಹೆಂಡತಿನ ಮಂಚಕ್ಕೆ ಕರಿತಿದ್ದ ಇನ್ಸ್‌ಪೆಕ್ಟರ್‌ – ನೊಂದ ಮಹಿಳೆಯಿಂದ ಸಿಎಂಗೆ ದೂರು
  • ಯುವವಾಹಿನಿ ಡೆನ್ನಾನ ಡೆನ್ನನ 2026 – ಡೆನ್ನಾನ ಡೆನ್ನನ ಲೋಗೋ ಅನಾವರಣ ಹಾಗೂ ಆಮಂತ್ರಣ ಬಿಡುಗಡೆ
    ಯುವವಾಹಿನಿ ಡೆನ್ನಾನ ಡೆನ್ನನ 2026 – ಡೆನ್ನಾನ ಡೆನ್ನನ ಲೋಗೋ ಅನಾವರಣ ಹಾಗೂ ಆಮಂತ್ರಣ ಬಿಡುಗಡೆ
  • ಪಿ.ಲಂಕೇಶ್ ಅವರ ಟೀಕೆ ಟಿಪ್ಪಣಿ 3 ಭಾಗಗಳ ಪುಸ್ತಕ ಹಾಗೂ ಲಂಕೇಶರ ಕಥೆಗಳ ಆಡಿಯೊ ಬುಕ್ ಬಿಡುಗಡೆಗೊಳಿಸಿದ – ಸಿ.ಎಂ.
    ಪಿ.ಲಂಕೇಶ್ ಅವರ ಟೀಕೆ ಟಿಪ್ಪಣಿ 3 ಭಾಗಗಳ ಪುಸ್ತಕ ಹಾಗೂ ಲಂಕೇಶರ ಕಥೆಗಳ ಆಡಿಯೊ ಬುಕ್ ಬಿಡುಗಡೆಗೊಳಿಸಿದ – ಸಿ.ಎಂ.
  • ಬೆಂಗಳೂರಲ್ಲಿ ವಿವಾಹಿತೆ ಅನುಮಾನಾಸ್ಪದ ಸಾವು – ಪತಿ ವಿರುದ್ಧ ಕೊಲೆ ಆರೋಪ
    ಬೆಂಗಳೂರಲ್ಲಿ ವಿವಾಹಿತೆ ಅನುಮಾನಾಸ್ಪದ ಸಾವು – ಪತಿ ವಿರುದ್ಧ ಕೊಲೆ ಆರೋಪ
  • ಎರಡು ಬೈಕ್ ಗಳ ನಡುವೆ ಭೀಕರ ಅಪಘಾತ; ಯುವ ಛಾಯಾಗ್ರಾಹಕ ಸಾ*ವು
    ಎರಡು ಬೈಕ್ ಗಳ ನಡುವೆ ಭೀಕರ ಅಪಘಾತ; ಯುವ ಛಾಯಾಗ್ರಾಹಕ ಸಾ*ವು

Designed by Elegant Themes | Powered by WordPress

error: Content is protected !!