||”ಅನಂತಂ ವಾಸುಕಿಂ ಶೇಷಂ ಪದ್ಮನಾಭಂ ಚ ಕಂಬಲಮ್| ಶಂಖಪಾಲಂ ಧೃತರಾಷ್ಟ್ರಂ ತಕ್ಷಕಂ, ಕಾಲಿಯಂ ತಥಾ”||

ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿ ದಿನ ನಾಗರ ಪಂಚಮಿ ಹಬ್ಬವನ್ನು ಆಚರಿಸಲಾಗುತ್ತದೆ. ಅನಂತ, ವಾಸುಕೀ, ಶೇಷ, ಪದ್ಮನಾಭ, ಕಂಬಲ, ಶಂಖಪಾಲ, ಧೃತರಾಷ್ಟ್ರ, ತಕ್ಷಕ ಮತ್ತು ಕಾಲಿಯಾ ಹೀಗೆ ಒಂಭತ್ತು ಜಾತಿಯ ನಾಗಗಳ ಆರಾಧನೆಯನ್ನು ಮಾಡುತ್ತಾರೆ.

ಇಂದು ಅ.9 ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ನಾಗರಕಟ್ಟೆ ಹಾಗೂ ದೇಗುಲಗಳಲ್ಲಿ ಭಕ್ತರು ವಿಶೇಷ ಪೂಜೆ ಸಲ್ಲಿಸಿ ನಾಗರ ವಿಗ್ರಹಗಳಿಗೆ ಹಾಲೆರೆದು ನಾಗರ ಪಂಚಮಿ ಆಚರಣೆ ಮಾಡುತ್ತಿದ್ದಾರೆ. ನಾಗರ ಪಂಚಮಿಯನ್ನು ಕರಾವಳಿಯಲ್ಲಿ ಜನರು ವಿಶೇಷವಾಗಿ ಆಚರಿಸುತ್ತಾರೆ. ನಾಗದೇವರನ್ನು ಆರಾಧಿಸುವ ಈ ಹಬ್ಬದ ದಿನ ಹಾಲು, ಎಳನೀರು, ಹೂವು, ಸಿಂಗಾರದೊಂದಿಗೆ ನಾಗಬನಗಳಲ್ಲಿ ಭಕ್ತರ ದಂಡು ಕಾಣಿಸುತ್ತಿದೆ.

ಶೇಷನಾಗನು ಪಾತಾಳದಲ್ಲಿ ವಾಸಿಸುತ್ತಾನೆ. ಅವನು ತನ್ನ ಹೆಡೆಯ ಮೇಲೆ ಪೃಥ್ವಿಯನ್ನು ಧರಿಸಿದ್ದಾನೆ. ಅವನಿಗೆ ಸಹಸ್ರ ಹೆಡೆಗಳಿವೆ. ಪ್ರತಿಯೊಂದು ಹೆಡೆಯ ಮೇಲೆ ಒಂದು ಮಾಣಿಕ್ಯವಿದೆ. ಅವನು ಶ್ರೀವಿಷ್ಣುವಿನ ತಮೋಗುಣದಿಂದ ಉತ್ಪನ್ನವಾಗಿದ್ದಾನೆ. ಪ್ರತಿಯೊಂದು ಕಲ್ಪದ ಅಂತ್ಯದಲ್ಲಿ ಶ್ರೀವಿಷ್ಣು ಮಹಾಸಾಗರದಲ್ಲಿ ಶೇಷಾಸನದ ಮೇಲೆ ಪವಡಿಸಿರುತ್ತಾನೆ.

ಇಂದು ಅ.9 ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ನಾಗರಕಟ್ಟೆ ಹಾಗೂ ದೇಗುಲಗಳಲ್ಲಿ ಭಕ್ತರು ವಿಶೇಷ ಪೂಜೆ ಸಲ್ಲಿಸಿ ನಾಗರ ವಿಗ್ರಹಗಳಿಗೆ ಹಾಲೆರೆದು ನಾಗರ ಪಂಚಮಿ ಆಚರಣೆ ಮಾಡುತ್ತಿದ್ದಾರೆ. ನಾಗರ ಪಂಚಮಿಯನ್ನು ಕರಾವಳಿಯಲ್ಲಿ ಜನರು ವಿಶೇಷವಾಗಿ ಆಚರಿಸುತ್ತಾರೆ. ನಾಗದೇವರನ್ನು ಆರಾಧಿಸುವ ಈ ಹಬ್ಬದ ದಿನ ಹಾಲು, ಎಳನೀರು, ಹೂವು, ಸಿಂಗಾರದೊಂದಿಗೆ ನಾಗಬನಗಳಲ್ಲಿ ಭಕ್ತರ ದಂಡು ಕಾಣಿಸುತ್ತಿದೆ.

ನಾಗಕುಲವೇ ನಾಶವಾಗುವ ಸಂದರ್ಭದಲ್ಲಿ ಆಸ್ತಿಕ ಬಂದು ಈ ಸರ್ಪ ಯಜ್ಞವನ್ನು ತಡೆದದ್ದು ಶ್ರಾವಣ ಮಾಸದ ಐದನೇ ದಿನ. ಆಸ್ತಿಕ ನಾಗಯಜ್ಞ ನಿಲ್ಲಿಸಿ ನಾಗಗಳ ಕುಲವನ್ನು ಉಳಿಸಿದ ದಿನವನ್ನೇ ನಾಗರ ಪಂಚಮಿಯಾಗಿ ಆಚರಿಸಲಾಗುತ್ತದೆ.

ಪ್ರತಿ ಕುಟುಂಬದ ಮನೆಯ ನಾಗ ಬನದಲ್ಲಿ ಭಕ್ತರು ನಾಗಾರಾಧನೆ ನಡೆಸುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಗಾರಾಧನೆಗೆ ಪ್ರಸಿದ್ದಿ ಪಡೆದಿರುವ ಹಲವು ದೇವಸ್ಥಾನಗಳಿವೆ. ದಕ್ಷಿಣ ಭಾರತದ ಪ್ರಮುಖ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಾಗಾರಾಧನೆ ಮಾಡಲಾಗುತ್ತದೆ. ಅದೇ ರೀತಿ ಮಂಗಳೂರು ಹೊರ ವಲಯದಲ್ಲಿರುವ ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿಯೂ ನಾಗರಾಧನೆ ಮಾಡಲಾಗುತ್ತದೆ. ನಾಗರ ಪಂಚಮಿ ದಿನ ಇಲ್ಲಿಗೆ ಭಕ್ತ ಸಾಗರವೇ ಹರಿದು ಬರುತ್ತದೆ.

ನಾಗರ ಪಂಚಮಿ ವಿಶೇಷ ಮತ್ತು ಅದರ ಹಿನ್ನೆಲೆ

ಅಭಿಮನ್ಯುವಿನ ಪುತ್ರ ಪರೀಕ್ಷಿತನ ಮಗನಾದ ಜನಮೇಜಯ ವೈಶಂಪಾಯ ಮಹರ್ಷಿಯಿಂದ ಮಹಾಭಾರತದ ಕಥೆಯನ್ನು ಕೇಳುತ್ತಾನೆ. ತನ್ನ ತಂದೆ ಪರೀಕ್ಷಿತನು ಸರ್ಪ ರಾಜ ತಕ್ಷಕನಿಂದ ಕಚ್ಚಿ ಮೃತಪಟ್ಟಿದ್ದನ್ನು ತಿಳಿದು ಸರ್ಪಗಳ ಮೇಲೆ ಸೇಡು ತೀರಿಸಲು ಮುಂದಾಗುತ್ತಾನೆ. ನನ್ನ ತಂದೆಯನ್ನು ಕಚ್ಚಿದ ಸರ್ಪಗಳು ಲೋಕದಲ್ಲೇ ಇರಬಾರದು ಎಂದು ಸಂಕಲ್ಪ ಮಾಡಿ ದೊಡ್ಡ ಸರ್ಪಯಾಗಕ್ಕೆ ಮುಂದಾಗುತ್ತಾನೆ.

ಪರೀಕ್ಷಿತನು ತಕ್ಷಕನಿಂದ ಸಾವನ್ನಪ್ಪಲು ಕಾರಣವಿದೆ. ಕುರುಕ್ಷೇತ್ರ ಯುದ್ಧ ಮುಗಿದು ಕೆಲ ವರ್ಷ ಆಡಳಿತ ನಡೆಸಿದ ಪಾಂಡವರು ಸಶರೀರ ಸ್ವರ್ಗಾರೋಹಣಕ್ಕೆ ತೆರಳಿದರು. ಪಾಂಡವರ ನಂತರ ಅಭಿಮನ್ಯು – ಉತ್ತರೆಯ ಮಗ ಪರೀಕ್ಷಿತ ಹಸ್ತಿನಾವತಿಯ ಅರಸನಾದ. ಪರೀಕ್ಷಿತ ಒಮ್ಮೆ ಕಾಡಿಗೆ ಬೇಟೆಗೆಂದು ಹೋದಾಗ ಬಾಯಾರಿಕೆ ಆಗುತ್ತದೆ. ಈ ವೇಳೆ ಆತ ಶಮಿಕ ಮುನಿಯ ಆಶ್ರಮವನ್ನು ಪ್ರವೇಶಿಸುತ್ತಾನೆ. ಮುನಿ ಧ್ಯಾನಸ್ಥನಾಗಿದ್ದ ಕಾರಣ ಪರೀಕ್ಷಿತನನ್ನು ಸರಿಯಾಗಿ ಸತ್ಕರ ಮಾಡಿರಲಿಲ್ಲ. ಇದರಿಂದ ಕೋಪಗೊಂಡ ಪರೀಕ್ಷಿತ ಅಲ್ಲೇ ಸತ್ತು ಬಿದ್ದಿದ್ದ ಒಂದು ಹಾವನ್ನು ಮುನಿಯ ಕೊರಳಿಗೆ ಹಾಕಿ ಹೊರಟುಹೋಗುತ್ತಾನೆ. ನಂತರ ಮುನಿಪುತ್ರ ಶೃಂಗಿ ಆಶ್ರಮಕ್ಕೆ ಬಂದು ತಂದೆಯ ಕೊರಳಿನಲ್ಲಿ ಹಾವು ಇರುವುದನ್ನು ಕಂಡು ಸಿಟ್ಟಾಗುತ್ತಾನೆ. ಅಷ್ಟೇ ಅಲ್ಲದೇ ನನ್ನ ತಂದೆಯ ಕೊರಳಿಗೆ ಸತ್ತ ಹಾವನ್ನು ಹಾಕಿ ಅವಮಾನ ಮಾಡಿದವನು 7 ದಿನದ ಒಳಗಡೆ ಸರ್ಪ ಕಡಿದು ಸಾವನ್ನಪ್ಪಲಿ ಎಂದು ಶಪಿಸುತ್ತಾನೆ. ಈ ಶಾಪಕ್ಕೆ ತುತ್ತಾಗಿದ್ದ ಪರೀಕ್ಷಿತ ತಕ್ಷಕನಿಂದ ಸಾವನ್ನಪ್ಪುತ್ತಾನೆ.

ತಂದೆಯ ಸಾವಿಗೆ ತಕ್ಷಕ ಕಾರಣ ಎಂದು ತಿಳಿದ ಜನಮೇಜ ದೊಡ್ಡ ಸರ್ಪಯಾಗ ಮಾಡುವಂತೆ ಋತ್ವಿಜರಿಗೆ ಸೂಚಿಸುತ್ತಾನೆ. ಸರ್ಪ ಯಾಗದಲ್ಲಿ ಋತ್ವಿಜರು ಒಂದೊಂದೇ ಸರ್ಪದ ಹೆಸರು ಹೇಳಿ ಆವಾಹನೆ ಮಾಡುತ್ತಿದ್ದರು. ಸರ್ಪವು ಪ್ರಜ್ವಲಿಸಿ ಉರಿಯುತಿದ್ದ ಯಾಗ ಕುಂಡದೊಳಗೆ ಬಿದ್ದು ಒದ್ದಾಡಿ ಬೆಂದುಹೋಗುತ್ತಿದ್ದವು.

ಎಲ್ಲಾ ಹಾವುಗಳ ದಹನವಾಗಬೇಕೆಂಬ ಪ್ರತಿಜ್ಞೆ ಈಡೇರಬೇಕೆಂದು ಜನಮೇಜಯ ಪಣ ತೊಟ್ಟಿದ್ದ. ತನ್ನ ಸಂತತಿಯವರು ಎಲ್ಲರೂ ಬಲಿಯಾಗುತ್ತಿರುವುದನ್ನು ಕಂಡು ತಕ್ಷಕ ದೇವೇಂದ್ರನ ಮೊರೆ ಹೋಗಿ ರಕ್ಷಿಸುವಂತೆ ಕೇಳಿಕೊಳ್ಳುತ್ತಾನೆ. ಆಗ ದೇವೇಂದ್ರ ನನ್ನನ್ನು ಗಟ್ಟಿಯಾಗಿ ಹಿಡಿದಿಕೋ ಯಾವುದೇ ಯಾಗಗಳು ನಿನ್ನನ್ನು ಸೆಳೆಯಲು ಸಾಧ್ಯವಾಗುವುದಿಲ್ಲ ಎಂದು ಅಭಯ ನೀಡುತ್ತಾನೆ. ಇಂದ್ರನ ಮಾತಿನಂತೆ ತಕ್ಷಕ ಆತನನ್ನು ಗಟ್ಟಿ ಹಿಡಿದುಕೊಳ್ಳುತ್ತಾನೆ.

ಸರ್ಪಯಾಗದ ತೀವ್ರತೆಗೆ ಬೆದರಿದ ಸರ್ಪಗಳು ತಮ್ಮ ಜರತ್ಕಾರುವಿನ ಮೊರೆ ಹೋಗುತ್ತವೆ. ಸರ್ಪಗಳ ಪ್ರಾರ್ಥನೆಗೆ ಒಗೊಟ್ಟ ಜರತ್ಕಾರು ತನ್ನ ಪುತ್ರನಾದ ಆಸ್ತಿಕ ಋಷಿಯನ್ನು ಜನಮೇಜಯನಲ್ಲಿಗೆ ಕಳುಹಿಸುತ್ತಾಳೆ. ಬ್ರಹ್ಮಚಾರಿಯಾದ ಆಸ್ತಿಕ ಜನಮೇಜಯ ನಡೆಸುತ್ತಿದ್ದ ಯಾಗಶಾಲೆಗೆ ಬರುತ್ತಾನೆ. ಇಂದ್ರ ಸಹಿತವಾಗಿ ತಕ್ಷಕ ಯಾಗಕ್ಕೆ ಬೀಳುವ ಸಮಯದಲ್ಲಿ ಯಾಗ ಶಾಲೆ ಪ್ರವೇಶಿಸಿದ ತಕ್ಷಕ ಬ್ರಹ್ಮಚಾರಿಗೆ ದಕ್ಷಿಣೆ ನೀಡದೇ ಯಾಗ ಹೇಗೆ ನಡೆಸುತ್ತೀರಿ ಎಂದು ಪ್ರಶ್ನಿಸುತ್ತಾನೆ.
ಈ ವೇಳೆ ಇಕ್ಕಟ್ಟಿಗೆ ಸಿಲುಕಿದ ಜನಮೇಜಯ, ನಿನಗೆ ಏನು ಬೇಕೋ ಕೇಳು. ಅದನ್ನು ನಾನು ನೀಡುತ್ತೇನೆ ಎಂದು ಹೇಳುತ್ತಾನೆ. ತಕ್ಷನಿಂದ ಈ ಮಾತು ಬಂದ ಕೂಡಲೇ ಈಗಲೇ ಸರ್ಪಯಾಗ ನಿಲ್ಲಿಸು. ಇದೇ ನೀನು ನನಗೆ ನೀಡುವ ದಕ್ಷಿಣೆ ಎಂದು ಆಸ್ತಿಕ ಹೇಳುತ್ತಾನೆ. ಆಸ್ತಿಕ ಕೇಳಿದ ಈ ದಕ್ಷಿಣೆಯಿಂದ ಏನು ಮಾಡಬೇಕು ಎಂದು ತೋಚದೇ ಕೊನೆಗೆ ಕೊಟ್ಟ ಮಾತಿನಂತೆ ಯಾಗವನ್ನು ನಿಲ್ಲಿಸಿದ. ತನ್ನ ತಂದೆಯ ಸಾವಿಗೆ ಕಾರಣನಾದ ತಕ್ಷಕ ಕಣ್ಣೆದುರೇ ಇದ್ದರೂ ಜನಮೇಜಯ ಏನು ಮಾಡುವಂತಿರಲಿಲ್ಲ.

ಯಾಗ ನಿಂತ ಬಳಿಕ ಆಸ್ತಿಕ, ಪ್ರಾಣಿ ಹಿಂಸೆ ಮಾಡಬಾರದು ಜನಮೇಜಯನಿಗೆ ಎಂದು ಬುದ್ಧಿ ಹೇಳುತ್ತಾನೆ. ನಂತರ ಇಂದ್ರ ಶೃಂಗಿಯ ಶಾಪದಿಂದ ನಿನ್ನ ತಂದೆ ಪರೀಕ್ಷಿತ ಮೃತಪಡುತ್ತಾನೆ. ಇದರಲ್ಲಿ ತಕ್ಷಕನ ಪಾತ್ರ ಏನಿಲ್ಲ ಎಂದು ತಿಳಿಹೇಳುತ್ತಾನೆ. ಇಂದ್ರನ ಹೇಳಿದ ಕಥೆಯಿಂದ ಜನಮೇಜಯನಿಗೆ ಸರ್ಪಗಳ ಮೇಲಿದ್ದ ಸಿಟ್ಟು ಕಡಿಮೆಯಾಗುತ್ತದೆ.

ನಾಗಕುಲವೇ ನಾಶವಾಗುವ ಸಂದರ್ಭದಲ್ಲಿ ಆಸ್ತಿಕ ಬಂದು ಈ ಸರ್ಪ ಯಜ್ಞವನ್ನು ತಡೆದದ್ದು ಶ್ರಾವಣ ಮಾಸದ ಐದನೇ ದಿನ. ಆಸ್ತಿಕ ನಾಗಯಜ್ಞ ನಿಲ್ಲಿಸಿ ನಾಗಗಳ ಕುಲವನ್ನು ಉಳಿಸಿದ ದಿನವನ್ನೇ ನಾಗರ ಪಂಚಮಿಯಾಗಿ ಆಚರಿಸಲಾಗುತ್ತದೆ.