ಲಕ್ನೋ: ಕೆಮ್ಮಿನ ಸಿರಪ್ ಅಕ್ರಮ ವ್ಯಾಪಾರ ಪ್ರಕರಣದ ಆರೋಪಿಗಳು ಸಮಾಜವಾದಿ ಪಕ್ಷದೊಂದಿಗೆ ಸಂಪರ್ಕ ಹೊಂದಿದ್ದಾರೆ. ನಾವು ಯಾರನ್ನೂ ಬಿಡುವುದಿಲ್ಲ, ಸಮಯ ಬಂದಾಗ ಬುಲ್ಡೋಜರ್ ಕಾರ್ಯಾಚರಣೆ ಕೂಡ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ :“ರಾಷ್ಟ್ರೀಯ ಲಸಿಕಾ ದಿನ”ವನ್ನು ಮಕ್ಕಳಿಗೆ ಪಲ್ಸ್ ಪೋಲಿಯೊ ಲಸಿಕೆ ಹಾಕುವ ಮೂಲಕ ಉದ್ಘಾಟಿಸಿದ – ಸಿ.ಎಂ
ವಿಧಾನಸಭೆಯಲ್ಲಿ ಮಾತನಾಡಿದ ಅವರು, ಕೆಮ್ಮಿನ ಸಿರಪ್ ಪ್ರಕರಣ ಸಂಬಂಧ ಈಗಾಗಲೇ 78 ಜನರನ್ನು ಬಂಧಿಸಲಾಗಿದ್ದು, 134 ಕಡೆ ದಾಳಿ ನಡೆಸಲಾಗಿದೆ. ಡಿಜಿಪಿ ದರ್ಜೆಯ ಅಧಿಕಾರಿ ನೇತೃತ್ವದ ವಿಶೇಷ ತನಿಖಾ ತಂಡ (SIT) ರಚಿಸಲಾಗಿದೆ. ಸಮಾಜವಾದಿ ಪಕ್ಷಕ್ಕೆ (Socialist Party) ಸಂಬಂಧಿಸಿದವರು ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಅವರ ವಿರುದ್ಧವೂ ಬುಲ್ಡೋಜರ್ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಇನ್ನೂ ಉತ್ತರ ಪ್ರದೇಶದಲ್ಲಿ ಕೆಮ್ಮಿನ ಸಿರಪ್ ಉತ್ಪಾದನೆ ನಡೆಯುವುದಿಲ್ಲ, ಇದು ಮಧ್ಯಪ್ರದೇಶ ಮತ್ತು ಹಿಮಾಚಲ ಪ್ರದೇಶದಲ್ಲಿ ಉತ್ಪಾದನೆಯಾಗಿ, ಅಕ್ರಮವಾಗಿ ತರಲಾಗುತ್ತಿದೆ. ಅಲ್ಲದೇ ಈ ಸಿರಪ್ ಅನ್ನು ನಕಲಿ ಬಿಲ್‌ಗಳ ಮೂಲಕ ಬಾಂಗ್ಲಾದೇಶ ಮತ್ತು ನೇಪಾಳಕ್ಕೆ ಕಳ್ಳಸಾಗಾಣಿಕೆ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
