ಉಡುಪಿ ಮುಲ್ಕಿಯಲ್ಲಿ ಮಾ.10ರಂದು ನಡೆಯುವ ಅಖಿಲ ಭಾರತ ಬಿಲ್ಲವ ಮಹಾಮಂಡಲದ ಬೆಳ್ಳಿಹಬ್ಬದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಕಟಪಾಡಿ ವಿಶ್ವನಾಥ ಕ್ಷೇತ್ರದಲ್ಲಿ ನಡೆಯಿತು.

ಅಧ್ಯಕ್ಷರಾದ ರಾಜ್ ಶೇಖರ್ ಕೋಟ್ಯಾನ್ ಆಮಂತ್ರಣ ಬಿಡುಗಡೆ ಮಾಡಿ, ಕಾರ್ಯಕ್ರಮದ ರೂಪುರೇಷೆಯ ಬಗ್ಗೆ ಚರ್ಚಿಸಿ, ಸಲಹೆ ಸೂಚನೆಗಳು ನೀಡಿದರು.

ಕಾರ್ಯಕ್ರಮದಲ್ಲಿ ಕಾಪು ಬಿಲ್ಲವ ಮಹಿಳಾ ಮಂಡಲದ ಅಧ್ಯಕ್ಷೆ ಗೀತಾಂಜಲಿ ಸುವರ್ಣ ಅವರನ್ನು ಉಡುಪಿ ಜಿಲ್ಲಾ ಬಿಲ್ಲವ ಮಂಡಲದ ಅಧ್ಯಕ್ಷರು ಪದ್ಮ ರತ್ನಕರ್ ಸಮ್ಮಾನಿಸಿದರು.

ಬಳಿಕ ಮಾತನಾಡಿ ಈ ಭಾಗದಲ್ಲಿ ಸಮಾಜಕ್ಕೆ ತನ್ನನ್ನು ಅರ್ಪಿಸಿಕೊಂಡು, ಸದಾ ಸಾರ್ವಜನಿಕರ ಸೇವೆ ಮಾಡುತ್ತಿರುವ ನಿಮ್ಮನ್ನು ಗೌರವಿಸುದು ನಮ್ಮ ಸೌಭಾಗ್ಯ ಮುಂದಕ್ಕೂ ನಿಮ್ಮ ಸಾಮಾಜಿಕ ಕಾರ್ಯದಲ್ಲಿ ನಾವು ನಿಮ್ಮ ಜೊತೆಗೆ ಇದ್ದೇವೆ ಎಂದರು.

ಈ ಸಂದರ್ಭದಲ್ಲಿ ನವೀನ್ ಅಮೀನ್, ಶಂಕರ್ ಪುರಾ, ಸತ್ಯಜಿತ್ ಸುರತ್ಕಲ್, ಗಣೇಶ್ ಮೂಡು ಪೇರರಾ, ಆನಂದ್ ಮಾಭಿಯಾನ ಮತ್ತು ಗಂಗಾಧರ ಪೂಜಾರಿ ಉಪಸ್ಥಿತರಿದ್ದರು.