ಕಲ್ಲಡ್ಕ : ಬಂಟ್ವಾಳ ತಾಲೂಕಿನ ವೀರಕಂಭ ಗ್ರಾಮದ ಶ್ರೀ ಶಾರದಾ ಭಜನಾ ಮಂದಿರ ವಿರ ಕಂಬದಲ್ಲಿ 40ನೇ ವರ್ಷದ ಶ್ರೀ ಶಾರದಾ ಮಹೋತ್ಸವ ಅಕ್ಟೋಬರ್ 3 ರಿಂದ ಆರಂಭಗೊಂಡಿದ್ದು ಅಕ್ಟೋಬರ್ 13 ನೇ ತಾರೀಖಿನ ತನಕ ನಡೆಯಲಿರುವುದು.
11-10-2024 ನೇ ಶುಕ್ರವಾರ ಬೆಳಿಗ್ಗೆ ಗಣಹೋಮದ ನಂತರ ಶ್ರೀ ಶಾರದ ಮಾತೆಯ ವಿಗ್ರಹ ಪ್ರತಿಷ್ಠೆ ನೆರವೇರಲಿದ್ದು, ರಾತ್ರಿ 8 ಗಂಟೆ ತನಕ ಅರ್ಥ ಏಕಹ ಭಜನಾ ಕಾರ್ಯಕ್ರಮ ನೆರವೇರಲಿರುವುದು.
ದಿನಾಂಕ 12-10-2024 ಶನಿವಾರ ಸಂಜೆ 5 ಗಂಟೆಗೆ ದುರ್ಗನಮಸ್ಕಾರ ಪೂಜೆ ನೆರವೇರಲಿದ್ದು, ರಾತ್ರಿ 8 ಗಂಟೆಗೆ ಸರಿಯಾಗಿ ಸಾರ್ವಜನಿಕ ಅನ್ನದಾನದ ಬಳಿಕ ಉಸ್ತವ ಸಮಿತಿ ಅಧ್ಯಕ್ಷರಾದ ದಿನೇಶ್ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ಜರಗಲಿದ್ದು,ರಾಮಕೃಷ್ಣ ತಪೋವನ ಪೊಳಲಿಯ ಸ್ವಾಮಿ ವಿವೇಕ ಚೈತನ್ಯಾ ನಂದ ಆಶೀರ್ವಚನ ನೀಡಲಿರುವರು , ಧಾರ್ಮಿಕ ಉಪನ್ಯಾಸವನ್ನು ರಾಧಾಕೃಷ್ಣ ಏರುಂಬು ನೀಡಲಿದ್ದು, ಮುಖ್ಯ ಅತಿಥಿಗಳಾಗಿ ಅಗ್ರಜ ಬಿಲ್ಡರ್ಸ್ ಮಾಲಕರಾದ ಸಂದೇಶ್ ಕುಮಾರ್ ಶೆಟ್ಟಿ ಅರಬೆಟ್ಟು ಭಾಗವಹಿಸಲಿರುವರು.
ಧಾರ್ಮಿಕ ಸಭಾ ಕಾರ್ಯಕ್ರಮದ ಬಳಿಕ ಸ್ಥಳೀಯ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರಗಲಿರುವುದು.
ದಿನಾಂಕ 13-10-2024 ನೇ ಆದಿತ್ಯವಾರ ಮಧ್ಯಾಹ್ನ ರಂಗಪೂಜೆ, ಮಹಾಪೂಜೆ ನಂತರ ಸಾರ್ವಜನಿಕ ಅನ್ನ ಸಂತರ್ಪಣೆ ನಡೆದು ಸಂಜೆ ಗಂಟೆ 4ಕ್ಕೆ ಸರಿಯಾಗಿ ವಿಸರ್ಜನಾ ಪೂಜೆ ನಡೆದು ನಂತರ ಶ್ರೀ ಶಾರದಾ ಮಾತೆಯ ಭವ್ಯ ಶೋಭಯಾತ್ರೆ ನೆರವೇರಲಿರುವುದು.