ಬಂಟ್ವಾಳ ತಾಲೂಕಿನ ಬೊಂಡಾಲ ದ. ಕ.ಜಿ. ಪಂ. ಹಿ. ಪ್ರಾ. ಶಾಲೆಯಲ್ಲಿ ಶಿಕ್ಷಾ ಸಪ್ತ ಪೌಷ್ಟಿಕ ಆಹಾರ ದಿನ ಆಟಿದ ಗಮ್ಮತ್ತು ಕಾರ್ಯಕ್ರಮಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಜನಾರ್ದನ ಕುಲಾಲ್ ಅವರ ಅಧ್ಯಕ್ಷತೆಯಲ್ಲಿ ಜು.27ರಂದು ಜರಗಿತು.
ಪೋಷಕರು ತಮ್ಮ ತಮ್ಮ ಮನೆಯಲ್ಲಿ ಪೌಷ್ಟಿಕ ಆಹಾರ ತಯಾರಿಸಿ ತಂದಂತಹ ಆಹಾರಗಳ ಮಹತ್ವವನ್ನು ತಿಳಿಸಿ ಎಲ್ಲ ಮಕ್ಕಳಿಗೆ ಹಾಗೂ ಪೋಷಕರಿಗೆ ಸಾಂಪ್ರದಾಯದಂತೆ ಬಾಲೆ ಎಲೆಯಲ್ಲಿ ಉಣಬಡಿಸಲಾಯಿತು.
ಶಾಲಾ ಮಕ್ಕಳಿಂದ ಆಟಿ ತಿಂಗಳಲ್ಲಿ ನಡೆಯುವ ಸಾಂಪ್ರದಾಯಿಕ ನೃತ್ಯ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ವಿನೋದ್ ಶೆಟ್ಟಿ ಬೊಂಡಾಲ, ಶಾಲಾಭಿವೃದ್ಧಿ ಸಮಿತಿಯ ಸದಸ್ಯರು, ಮಕ್ಕಳ ಪೋಷಕರು, ಹಿರಿಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪ್ರಭಾರ ಮುಖ್ಯ ಶಿಕ್ಷಕಿ ರೇಖಾ ಸಿ.ಎಚ್. ಸ್ವಾಗತಿಸಿ, ಶಿಕ್ಷಕಿ ಲಾವಣ್ಯ ವಂದಿಸಿ, ಶಿಕ್ಷಕಿ ಸೌಮ್ಯ ಕಾರ್ಯಕ್ರಮ ನಿರೂಪಿಸಿದರು. ಭವ್ಯ, ಕಿಶೋರಿ ಸಹಕರಿಸಿದರು.