ಬಂಟ್ವಾಳ ತಾಲೂಕಿನ ಅಳಿಕೆ ಗ್ರಾಮದ ಮೂವಾಜೆಯ ಶ್ರೀ ಧೂಮಾವತಿ ದೈವಸ್ಥಾನದ ಜೀರ್ಣೋದ್ಧಾರ ಕಾರ್ಯದ ಬಗ್ಗೆ “ವಿಜ್ಞಾಪನ ಪತ್ರದ ಬಿಡುಗಡೆ” ಕಾರ್ಯಕ್ರಮ ಕಾಂತಿಲ ಸುಬ್ಬಣ್ಣ ಭಟ್ ಅಧ್ಯಕ್ಷತೆಯಲ್ಲಿ ನಡೆಯಿತು.

ಈ ಕಾರ್ಯಕ್ರಮದಲ್ಲಿ ಉದ್ಯಮಿಗಳು ಪತ್ರಕರ್ತರು ಆಗಿರುವ ಮೈಸೂರಿನ ರಾಕೇಶ್, ಅಳಿಕೆ ಗ್ರಾಮ ಪಂಚಾಯತ್ ಅಧ್ಯಕ್ಷ ಪದ್ಮನಾಭ ಪೂಜಾರಿ, ಕಾನ ಮನೆತನದ ಹಿರಿಯರಾದ ಶಾರದಾ ಭಟ್, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಅಳಿಕೆ ವಲಯ ಅಧ್ಯಕ್ಷರಾದ ರವೀಶ್ ಕೆ, ಕಾನ ಕೃಷ್ಣ ಭಟ್,ಕಾನ ಈಶ್ವರ ಭಟ್,ವೇದಮೂರ್ತಿ ಗಿರೀಶ್ ಭಟ್ ಅಮೈ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ವಿಜ್ಞಾಪನಾ ಪತ್ರದ ಬಿಡುಗಡೆ, ಸೇವಾ ರಶೀದಿ, ಕಾಣಿಕೆ ಹುಂಡಿಯನ್ನು ವಿತರಿಸಲಾಯಿತು.

ಕುಮಾರಿ ಭಾಗ್ಯಶ್ರೀ ಪ್ರಾರ್ಥಿಸಿ, ಕಾನ ಈಶ್ವರ ಭಟ್ ಸ್ವಾಗತಿಸಿ, ಕಾನ ಸುಂದರ ಭಟ್ ಪ್ರಾಸ್ತಾವಿಕ ಭಾಷಣ ಮಾಡಿ, ಕಾನ ವಿಶ್ವನಾಥ ಭಟ್ ವಂದಿಸಿದರು. ಶಿಕ್ಷಕ ತಿಮ್ಮಪ್ಪ ನಾಯ್ಕ್ ಕಾರ್ಯಕ್ರಮ ನಿರೂಪಿಸಿದರು. ಚಂದ್ರಹಾಸ ರೈ ಮತ್ತು ಜಿ. ಕೆ. ನಾಯಕ್ ಸಹಕರಿಸಿದರು.