ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂತ ಕಬೀರ ದಾಸ ಅವರ ಜನ್ಮ ವಾರ್ಷಿಕೋತ್ಸವದ ಅಂಗವಾಗಿ ಇಂದು ಅವರಿಗೆ ಗೌರವ ನಮನ ಸಲ್ಲಿಸಿದರು. ಸಾಮಾಜಿಕ ಸಾಮರಸ್ಯ ಮತ್ತು ಸುಧಾರಣೆಗೆ ಕಬೀರದಾಸರು ತಮ್ಮ ಜೀವನ ಮುಡಿಪಾಗಿಟ್ಟಿದ್ದರು ಎಂದು ಪ್ರಧಾನಮಂತ್ರಿ ಸ್ಮರಿಸಿದ್ದಾರೆ. ಇದನ್ನೂ ಓದಿ :ಎಸಿ ಬಳಕೆಗೆ ಹೊಸ ನಿಯಮ – ದೇಶಕ್ಕೆ 18,000 ಕೋಟಿ ಉಳಿತಾಯ
ಶ್ರೀ ಮೋದಿ ಅವರು ಎಕ್ಸ್ ಪೋಸ್ಟ್ ನಲ್ಲಿ ಹೀಗೆ ಹೇಳಿದ್ದಾರೆ:
“ಸಾಮಾಜದಲ್ಲಿ ಸಾಮರಸ್ಯಕ್ಕಾಗಿ ಸಂತ ಕಬೀರ ದಾಸರು ತಮ್ಮ ಜೀವನ ಸಮರ್ಪಿಸಿದ್ದು ಅವರ ಜಯಂತಿಯಂದು ಅವರಿಗೆ ನನ್ನ ಅನಂತಾನಂತ ಪ್ರಣಾಮಗಳು. ಅವರ ದೋಹೆ (ದ್ವಿಪದಿ)ಗಳಲ್ಲಿನ ಪದಗಳು ಸರಳವಾಗಿದ್ದರೂ, ಭಾವನೆಗಳು ಆಳವಾಗಿವೆ. ಹೀಗಾಗಿ ಇಂದಿಗೂ ಅವರು ಭಾರತೀಯರ ಜನಮಾನಸದ ಮೇಲೆ ಆಳವಾದ ಪ್ರಭಾವ ಬೀರಿದ್ದಾರೆ. ಸಮಾಜದಲ್ಲಿ ಪ್ರಚಲಿತದಲ್ಲಿರುವ ದುಷ್ಕೃತ್ಯಗಳನ್ನು ತೊಡೆದು ಹಾಕುವಲ್ಲಿ ಅವರ ಕೊಡುಗೆಯನ್ನು ಸದಾ ಶ್ರದ್ಧೆಯಿಂದ ಸ್ಮರಿಸಲಾಗುತ್ತದೆ.” ಇದನ್ನೂ ಓದಿ :International Lynx Day ಜೂ.11 ಅಂತರಾಷ್ಟ್ರೀಯ ಲಿಂಕ್ಸ್ (ಕಾಡು ಬೆಕ್ಕು) ದಿನ