ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಶ್ರೀ ನಾಡಪ್ರಭು ಕೆಂಪೇಗೌಡರ ಜಯಂತಿಯಂದು ಅವರಿಗೆ ಗೌರವ ನಮನ ಸಲ್ಲಿಸಿದರು. ಶ್ರೀ ನಾಡಪ್ರಭು ಕೆಂಪೇಗೌಡರು ಆರ್ಥಿಕ ಹಿತಚಿಂತನೆ, ಕೃಷಿ, ನೀರಾವರಿ ಮುಂತಾದವುಗಳಿಗೆ ಉತ್ತೇಜನ ನೀಡುವಲ್ಲಿ ಮುಂಚೂಣಿಯಲ್ಲಿದ್ದರು ಎಂದು ಶ್ರೀ ಮೋದಿ ಹೇಳಿದರು.
ಪ್ರಧಾನ ಮಂತ್ರಿ X ನಲ್ಲಿ ಪೋಸ್ಟ್ ಮಾಡಿದ್ದಾರೆ;
ಶ್ರೀ ನಾಡಪ್ರಭು ಕೆಂಪೇಗೌಡರ ಜಯಂತಿಯಂದು ಅವರಿಗೆ ಗೌರವ ನಮನಗಳು. ಅವರು ದೂರದೃಷ್ಟಿ ಮತ್ತು ಆಡಳಿತಾತ್ಮಕ ಕೌಶಲ್ಯಗಳಿಗೆ ಹೆಸರುವಾಸಿಯಾದ ದಾರ್ಶನಿಕರಾಗಿದ್ದರು. ಆರ್ಥಿಕ ಹಿತಚಿಂತನೆ, ಕೃಷಿ, ನೀರಾವರಿ ಮುಂತಾದವುಗಳ ಸುಧಾರಣೆಯಲ್ಲಿ ಅವರು ಮುಂಚೂಣಿಯಲ್ಲಿದ್ದರು. ಅವರು ಕಟ್ಟಿದ ಬೆಂಗಳೂರು ನಗರ ತನ್ನ ಚಲನಶೀಲತೆ, ಹುರುಪು ಮತ್ತು ನಾವೀನ್ಯತೆಗಾಗಿ ಜಾಗತಿಕವಾಗಿ ಮೆಚ್ಚುಗೆ ಪಡೆದಿದೆ. ಸಮಾಜದ ಬಗ್ಗೆ ಕೆಂಪೇಗೌಡರ ದೂರದೃಷ್ಟಿಯನ್ನು ನನಸಾಗಿಸಲು ಮತ್ತು ಅವರು ಪೋಷಿಸಿದ ಮೌಲ್ಯಗಳನ್ನು ಎತ್ತಿಹಿಡಿಯಲು ನಮ್ಮ ಸರ್ಕಾರ ಕೆಲಸ ಮಾಡುತ್ತಲೇ ಇರುತ್ತದೆ. 2022ರಲ್ಲಿ ನನಗೆ ಉದ್ಘಾಟನೆ ಭಾಗ್ಯ ದೊರೆತ ‘ಸಮೃದ್ಧಿ ಪ್ರತಿಮೆ’ಯ ಚಿತ್ರಗಳನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.”