ಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಎ ಎಫ್ ಎಸ್ ಆದಂಪುರಕ್ಕೆ ಭೇಟಿ ನೀಡಿ ನಮ್ಮ ವೀರ ವಾಯು ಯೋಧರು ಮತ್ತು ಸೈನಿಕರನ್ನು ಭೇಟಿಯಾದರು. “ಧೈರ್ಯ, ದೃಢತೆ ಮತ್ತು ನಿರ್ಭೀತಿಯನ್ನು ಸಾರುವ ಜನರೊಂದಿಗೆ ಇರುವುದು ಬಹಳ ವಿಶೇಷ ಅನುಭವವಾಗಿತ್ತು” ಎಂದು ಶ್ರೀ ಮೋದಿ ಹೇಳಿದರು.

ಪ್ರಧಾನಮಂತ್ರಿಯವರು X ನಲ್ಲಿ  ಪೋಸ್ಟ್ ಮಾಡಿದ್ದಾರೆ;

“ಇಂದು ಬೆಳಿಗ್ಗೆ ನಾನು ಎ ಎಫ್ ಎಸ್ ಆದಂಪುರಕ್ಕೆ ಭೇಟಿ ನೀಡಿ ನಮ್ಮ ವೀರ ವಾಯು ಯೋಧರು ಮತ್ತು ಸೈನಿಕರನ್ನು ಭೇಟಿಯಾದೆ. ಧೈರ್ಯ, ದೃಢತೆ ಮತ್ತು ನಿರ್ಭಯತೆಯನ್ನು ಸಾರುವ ಜನರೊಂದಿಗೆ ಇರುವುದು ಬಹಳ ವಿಶೇಷ ಅನುಭವವಾಗಿತ್ತು. ನಮ್ಮ ದೇಶಕ್ಕಾಗಿ ನಮ್ಮ ಸಶಸ್ತ್ರ ಪಡೆಗಳು ಮಾಡುವ ಕೆಲಸಗಳಿಗೆ ಭಾರತ ಯಾವಾಗಲೂ ಕೃತಜ್ಞವಾಗಿರುತ್ತದೆ.”