ಅಯೋಧ್ಯೆಯಿಂದ ಬಂದ ಪವಿತ್ರ ಮಂತ್ರಾಕ್ಷತೆಯನ್ನು ಮನೆ ಮನೆಗೆ ವಿತರಿಸಲು ಪಂಜಿಕಲ್ಲು ಗ್ರಾಮದ ಬಾಲೇಶ್ವರ ಬ್ರಹ್ಮಶ್ರೀ ನಾರಾಯಣಗುರು ಸೇವಾ ಮಂದಿರದಲ್ಲಿ ಅರ್ಚಕ ಪುರುಷೋತ್ತಮ ಚಾಲನೆ ನೀಡಿದರು. ಪಂಜಿಕಲ್ಲು ವಾರ್ಡ್ 57ರ ಬಾಲೇಶ್ವರ, ಪುಂಚೋಡಿ, ಐಸ್ರಗೋಳಿ, ಗಾನದಕೊಟ್ಯ, ಬುರಲ್, ಪಾಂಗಲ, ಪಾರೊಟ್ಟು, ಬುಡೋಳಿ ಗ್ರಾಮದ ಶ್ರೀ ರಾಮ ಭಕ್ತರು ಹಿಂದೂ ಮನೆಗಳಿಗೆ ತೆರಳಿ ಕರಪತ್ರ , ಆಯೋಧ್ಯ ರಾಮ ಮಂದಿರದ ಭಾವಚಿತ್ರ ಹಾಗೂ ರಾಮನ ಪವಿತ್ರ ಮಂತ್ರಾಕ್ಷತೆಯನ್ನು ಮನೆಮನೆಗೆ ಹಂಚಿದರು.
ಮಂತ್ರಾಕ್ಷತೆ ರೂಪದಲ್ಲಿ ದೇವರೇ ಮನೆ ಬಾಗಿಲಿಗೆ ಬರಲಿದ್ದಾನೆ ಅದನ್ನು ಜಾಗರೂಕವಾಗಿರಿಸಿ ಪೂಜೆ ಮಾಡುವ ಪ್ರತಿಜ್ಞೆ ಮಾಡಬೇಕು. ಜ.22ರಂದು ಪ್ರತೀ ಗ್ರಾಮದಲ್ಲಿ ಹರೇ ರಾಮ ಭಜನೆ ಹಾಡುಗಳನ್ನು ಹಾಡಬೇಕು. ಸಂಜೆ.5 ಗಂಟೆಗೆ ಜ್ಯೋತಿ ಬೆಳಗಿ ಉತ್ತರ ದಿಕ್ಕಿಗೆ ಆರತಿ ಬೆಳಗುವ ಮೂಲಕ ಅವಿಸ್ಮರಣೀಯ ದಿನವನ್ನಾಗಿಸಬೇಕು.