ಕಠ್ಮಂಡು: ಬುಧವಾರ ಕಠ್ಮಂಡುವಿನ ತ್ರಿಭವನ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಶೌರ್ಯ ಏರ್‌ಲೈನ್ಸ್‌ ವಿಮಾನವೊಂದು ಟೇಕಾಫ್‌ ಆಗುವ ವೇಳೆ ಪತನಗೊಂಡಿದೆ. ಅಪಘಾತಕ್ಕೀಡಾದ ವಿಮಾನದಲ್ಲಿ 19 ಪ್ರಯಾಣಿಕರಿದ್ದರು.

ನೇಪಾಲ ವಿಮಾಣ ಅಪಘಾತ; 19 ಪ್ರಯಾಣಿಕರಿದ್ದ ವಿಮಾನ ಟೇಕಾಫ್‌ ವೇಳೆ ಪತನ

ಪೋಖರಾಗೆ ತೆರಳುತ್ತಿದ್ದ ವಿಮಾನ ಬೆಳಗ್ಗೆ 11 ಗಂಟೆ ಸುಮಾರಿಗೆ ಅಪಘಾತಕ್ಕೀಡಾಗಿದೆ. ವಿಮಾನ ಸಿಬ್ಬಂದಿ ಸೇರಿದಂತೆ ಹತ್ತೊಂಬತ್ತು ಮಂದಿ ವಿಮಾನದಲ್ಲಿದ್ದರು ಎಂದು ಟಿಐಎ ವಕ್ತಾರ ಪ್ರೇಮನಾಥ್ ಠಾಕೂರ್ ತಿಳಿಸಿದ್ದಾರೆ.

ಅಪಘಾತ ಸ್ಥಳದಲ್ಲಿ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಅಪಘಾತಕ್ಕೆ ಕಾರಣ ತಿಳಿದುಬಂದಿಲ್ಲ. ಗಾಯಾಳುಗಳ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಪತನಗೊಂಡ ವಿಮಾನದಿಂದ ಐವರ ಮೃತದೇಹ ಪತ್ತೆಯಾಗಿದೆ. ಟೇಕಾಫ್ ವೇಳೆ ರನ್‌ವೇಯಿಂದ ಸ್ಕಿಡ್‌ ಆಗಿ ವಿಮಾನವು ಬೆಂಕಿಗೆ ಆಹುತಿಯಾಗಿದೆ ಎಂದು ವಿಮಾನ ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ.

2023 ರಲ್ಲಿ, ಯೇತಿ ಏರ್‌ಲೈನ್ಸ್ ವಿಮಾನವು ಪೋಖರಾದಲ್ಲಿ ಪತನಗೊಂಡು ಐವರು ಭಾರತೀಯರು ಸೇರಿದಂತೆ ಎಲ್ಲಾ 72 ಜನರನ್ನು ಬಲಿ ಪಡೆದಿತ್ತು.