ವಿಟ್ಲ :ವಿಜ್ಞಾನದ ಬೆಳವಣಿಗೆಯಿಂದ ತಂತ್ರಜ್ಞಾನದ ಮೂಲಕ ದೇಶದ ಭವಿಷ್ಯ ಉಜ್ವಲವಾಗುತ್ತದೆ, ಯಾವುದೇ ವಿಚಾರಗಳ ಸತ್ಯತೆಯನ್ನು ವಿಜ್ಞಾನವು ತಿಳಿಸಿಕೊಡುತ್ತದೆ ಇದರಿಂದ ಮೂಡನಂಬಿಕೆಗಳು ನಾಶವಾಗುತ್ತವೆ ಮತ್ತು ಜೀವನ ಸಾರ್ಥಕತೆಯನ್ನು ಪಡೆದುಕೊಳ್ಳುತ್ತದೆ, ವಿದ್ಯಾರ್ಥಿಗಳು ವೈಜ್ಞಾನಿಕ ದೃಷ್ಟಿಕೋನವನ್ನು ಬೆಳೆಸಿಕೊಳ್ಳಬೇಕು ಎಂದು ಕೇಪು ಕಲ್ಲಂಗಳ ಸರಕಾರಿ ಪ್ರಾಢಶಾಲೆಯ ಶಿಕ್ಷಕ ಲಕ್ಷ್ಮಣ್ ಹೇಳಿದರು.
ಅವರು ಬಂಟ್ವಾಳ ತಾಲೂಕಿನ ದ ಕ ಜಿ ಪ ಹಿ ಪ್ರಾ ಶಾಲೆ ಪಡಿಬಾಗಿಲು ಇಲ್ಲಿ ರಾಷ್ಟ್ರೀಯ ವಿಜ್ಞಾನ ದಿನ ಆಚರಣೆ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿ ಯಾಗಿ ಆಗಮಿಸಿ ಮಾತನಾಡಿದರು.
ಕಾರ್ಯಕ್ರಮದ .ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶ್ರೀ ರಾಘವ ಮೈರ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಜಗಜೀವನರಾಮ್ ಶೆಟ್ಟಿ, ಪ್ರಭಾಕರ್ ಶೆಟ್ಟಿ, ಜಿನಚಂದ್ರ ಜೈನ್, ಸವಿತಾ ಶೆಟ್ಟಿ,ಲಿಂಗಪ್ಪ ಗೌಡ ಶಾಲಾಭಿವೃದ್ಧಿ ಸಮಿತಿಯ ಸದಸ್ಯರು ಪೋಷಕರು ಅಧ್ಯಾಪಕರು, ಮಕ್ಕಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕಲ್ಲಡ್ಕದ ಪ್ರಸಿದ್ದ ಕೆ ಟಿ .ಹೋಟೆಲ್ ಲಕ್ಷ್ಮೀಗಣೇಶ್, ಇದರ ಮಾಲಕರಾದ ಶ್ರೀಮತಿ ಪದ್ಮಾವತಿ ರಾಜೇಂದ್ರ ಎನ್ ಹೊಳ್ಳ ಮತ್ತುಮಕ್ಕಳು ಸುಮಾರು 23,500ಬೆಲೆಬಾಳುವ ಬ್ಯಾಂಡ್ ಸೆಟ್ ಶಾಲೆಗೆ ಕೊಡುಗೆಯಾಗಿ ನೀಡಿದನ್ನು ಶಾಲೆಗೆ ಹಸ್ತಾಂತರಿಸಲಾಯಿತು.
ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಸುಜಾತ ಕೆ ರೈ ಸ್ವಾಗತಿಸಿ, ಶಿಕ್ಷಕಿ ಲಲಿತ ವಂದಿಸಿ, ಶಿಕ್ಷಕಿ ಪುಷ್ಪಾವತಿ ಕಾರ್ಯಕ್ರಮ ನಿರೂಪಿಸಿದರು.