ಗುರುತತ್ವವಾಹಿನಿ ಮಾಲಿಕೆ 37.
ಬಂಟ್ವಾಳ : ನಾರಾಯಣ ಗುರುಗಳು ವಿಶ್ವದಲ್ಲಿಯೇ ಸಾಂಸ್ಕೃತಿಕ, ಧಾರ್ಮಿಕ, ಸಾಮಾಜಿಕವಾಗಿ” ಜನತೆಗೆ ಬೇಕಾಗಿದ್ದ ಸುಧಾರಣೆಗಳನ್ನು ತಂದು, ಅವರ ಸಮಸ್ಯೆಗಳನ್ನು ತಾನೇ ಅರಿತು ಅವುಗಳನ್ನು ಪರಿಹರಿಸಿ “ಜೀವನ ಮುಕ್ತ ಕರ್ಮಯೋಗಿ”ಯಾಗಿ ಅತ್ಯಂತ ಉನ್ನತ ಸ್ಥಿತಿಯನ್ನು ತಲುಪಿದರು. ಅವರು ಮಾಡಿದ ಸುಧಾರಣೆಗಳು ಸಹಸ್ರಾರು ವರ್ಷಗಳಿಂದ ಬಂದಿದ್ದ ಸಾಂಪ್ರದಾಯಿಕ ಬುನಾದಿಯನ್ನೇ ಅಲುಗಾಡಿಸಿದವು. ಜನರು ಅವರನ್ನು ದೇವರೆಂದೇ ಪೂಜಿಸುವ ಮಟ್ಟಕ್ಕೆ ಏರಿದರು. ಅವರು ಸಾರಿದ ತತ್ವಗಳು ಸರ್ವಕಾಲಿಕವಾದವು ಎಂದು ಯುವವಾಹಿನಿ ಬಂಟ್ವಾಳ ಘಟಕದ ಅಧ್ಯಕ್ಷ ದಿನೇಶ್ ಸುವರ್ಣ ರಾಯಿ ತಿಳಿಸಿದರು
ಅವರು ಯುವವಾಹಿನಿ ಬಂಟ್ಟಾಳ ಘಟಕದ ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ ನಿರ್ದೇಶಕರಾದ ಕಿರಣ್ ಪೂಂಜರಕೋಡಿ ಇವರ ಮನೆಯಲ್ಲಿ ನಡೆದ ಗುರುತತ್ವವಾಹಿನಿ 37 ಮಾಲಿಕೆಯಲ್ಲಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಯುವವಾಹಿನಿ ಬಂಟ್ವಾಳ ಘಟಕದ ಪ್ರಥಮ ಉಪಾಧ್ಯಕ್ಷರಾದ ನಾರಾಯಣ ಪಲ್ಲಿಕಂಡ, ಸಂಗೀತ ವಾದಕರಾದ ರಾಜೇಶ್ ಅಮ್ಟೂರು ಮತ್ತು ಸಾತ್ವಿಕ್ ದೇರಾಜೆ, ನಿರ್ದೇಶಕರಾದ ಮಹೇಶ್ ಬೊಳ್ಳಾಯಿ, ಧನುಷ್ ಮದ್ವ, ಮಧುಸೂದನ್ ಮಧ್ವ, ಮಾಜಿ ಅಧ್ಯಕ್ಷರಾದ ನಾಗೇಶ್ ಪೊನ್ನೊಡಿ, ಪ್ರೇಮನಾಥ್ ಕರ್ಕೇರ, ಶಿವಾನಂದ ಎಂ, ಅರುಣ್ ಮಹಾಕಾಳಿಬೆಟ್ಟು, ರಾಜೇಶ್ ಸುವರ್ಣ, ಮಹಿಳಾ ಸಂಘಟನ ಕಾರ್ಯದರ್ಶಿ ಶೃಜನಿ ಬೊಳ್ಳಾಯಿ,ಸದಸ್ಯರಾದ ನಾಗೇಶ್ ಏಲಬೆ, ಯಶೋಧರ ಕಡಂಬಲ್ಕೆ, ಅಶ್ವಿನ್ ಕಾರಾಜೆ,ಸುಲತಾ ಸಾಲ್ಯಾನ್, ಹರೀಶ್ ಅಜೆಕಲಾ, ಪ್ರಶಾಂತ್ ಏರಮಲೆ, ರಾಜೇಶ್ ಪೂಂಜರೆಕೋಡಿ, ಸಚಿನ್ ಕೊಡ್ಮಾಣ್,ನವೀನ್ ಲೊರೊಟ್ಟಪದವು, ಚಂದ್ರಶೇಖರ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ನಾರಾಯಣ ಗುರು ತತ್ವ ಪ್ರಚಾರ ಮತ್ತು ಅನುಷ್ಠಾನ ನಿರ್ದೇಶಕ ಪ್ರಜಿತ್ ಅಮೀನ್ ಏರಮಲೆ ಸ್ವಾಗತಿಸಿ, ವಂದಿಸಿದರು.