ಭ್ರಷ್ಟ ಕಾಂಗ್ರೆಸ್ ಸರ್ಕಾರದ ಹಗರಣಗಳ ವಿರುದ್ಧದ ಮೈಸೂರು ಚಲೋ 2 ನೇ ದಿನದ ಪಾದಯಾತ್ರೆಯು ಬಿಡದಿಯಿಂದ ಆರಂಭಗೊಂಡಿತು.

ಮೈಸೂರು ಚಲೋ 2 ನೇ ದಿನದ ಪಾದಯಾತ್ರೆಯು ಬಿಡದಿಯಿಂದ ಆರಂಭ
ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಕಾರ್ಯಕರ್ತರಲ್ಲಿ ಕಿಂಚಿತ್ತೂ ಬತ್ತದ ಉತ್ಸಾಹ, ಹೋರಾಟದ ಕಿಚ್ಚು ಗುರಿ ಮುಟ್ಟುವ ಸಂಕಲ್ಪದ ವಿಶ್ವಾಸ ಹೆಚ್ಚಿಸಿತು. ಬನ್ನಿ, ದೀನದಲಿತರು, ಪರಿಶಿಷ್ಟ ಜಾತಿ, ಪಂಗಡದ ಪರವಾಗಿ, ಬಡ ಜನರ ನ್ಯಾಯಕ್ಕಾಗಿ ಭ್ರಷ್ಟರನ್ನು ಶಿಕ್ಷಿಸಲು ಹೆಜ್ಜೆ ಹಾಕೋಣ.
ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರು ಹಾಗೂ ಕೇಂದ್ರ ಸಚಿವರಾದ ಶ್ರೀ @hd_kumaraswamy, ಮಾಜಿ ಉಪಮುಖ್ಯಮಂತ್ರಿ ಶ್ರೀ @drashwathcn, ವಿಧಾನ ಪರಿಷತ್ ವಿರೋಧ ಪಕ್ಷ ನಾಯಕರಾದ ಶ್ರೀ ಛಲವಾದಿ ನಾರಾಯಣ ಸ್ವಾಮಿ, ಸಂಸದರಾದ ಶ್ರೀ @DrCNManjunath, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾದ ಶ್ರೀ ಸಿ.ಬಿ.ಸುರೇಶ್ ಬಾಬು, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀ ಸುನೀಲ್ ಕುಮಾರ್, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರಾದ ಶ್ರೀ ನಿಖಿಲ್ ಕುಮಾರಸ್ವಾಮಿ, ಶಾಸಕರಾದ ಶ್ರೀ ಎಂ ಕೃಷ್ಣಪ್ಪ, ಶ್ರೀ ಸತೀಶ್ ರೆಡ್ಡಿ, ಮಾಜಿ ಸಚಿವರಾದ ಬಿ.ಶ್ರೀರಾಮುಲು, ಶ್ರೀ ಕೆ.ಗೋಪಾಲಯ್ಯ, ಶ್ರೀ ಎನ್. ಮಹೇಶ್, ಮಾಜಿ ಸಂಸದರಾದ ಶ್ರೀ ಮುನಿಸ್ವಾಮಿ, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಸಂಸದರು, ಶಾಸಕರು, ಮುಖಂಡರು, ಪದಾಧಿಕಾರಿಗಳು ಹಾಗೂ ಸಹಸ್ರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಿದ್ದರು.