ಮಕ್ಕಳಿಗೆ ಜೀವನ ಶಿಕ್ಷಣ ನೀಡಿ, ಸಂಸ್ಕಾರ ಕಲಿಸುವಲ್ಲಿ ತಾಯಿ ಪಾತ್ರ ಬಹಳಮುಖ್ಯ, ಕುಟುಂಬದ ಅಳಿವು ಉಳಿವು ಮಹಿಳೆ ಕೈಯಲ್ಲಿದೆ ಎಂದು ಕೊಡಪದವು ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕಿ ಆರತಿ ದಾಸಪ್ಪ ಹೇಳಿದರು.
ಅವರು ಮಾ.8 ರಂದು ಮಾಣಿ ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ ಯುವವಾಹಿನಿ (ರಿ.)ಮಾಣಿ ಘಟಕ ಹಾಗೂ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ (ರಿ.) ಮಾಣಿ ಇವುಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ “ಮಾತೆಯ ಮಡಿಲು” ವಿಚಾರ ವಿನಿಮಯ ಕಾರ್ಯಕ್ರಮದಲ್ಲಿ ಅತಿಥಿ ಯಾಗಿ ಭಾಗವಹಿಸಿ ಮಾತಾಡಿದರು.
ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ( ರಿ.)ಮಾಣಿ ಯ ಮಹಿಳಾ ಅಧ್ಯಕ್ಷೆ ಹರಿನಾಕ್ಷಿ ಮುರುವ ಕಾರ್ಯಕ್ರಮದ ಉದ್ಘಾಟನೆ ನೆರೆವೇರಿಸಿದರು.
ಯುವವಾಹಿನಿ (ರಿ.) ಮಾಣಿ ಘಟಕದ ಅಧ್ಯಕ್ಷರಾದ ನಾಗೇಶ್ ಪೂಜಾರಿ ಕೊಂಕಣಪದವು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದ ಸಂಚಾಲಕಿ ಡಾ. ತ್ರಿವೇಣಿ ರಮೇಶ್ ಮುಜಲ ಕಾರ್ಯಕ್ರಮದ ಪ್ರಸ್ತಾವಿಕ ಮಾಡಿದರು.
ಸಂಪನ್ಮೂಲ ವ್ಯಕ್ತಿಗಳಾಗಿ “ಸ್ವಸ್ಥ ಮಹಿಳೆ- ಸ್ವಸ್ಥ ಮನೆ” ಎಂಬ ವಿಚಾರವಾಗಿ ವಿಟ್ಲ ಸುರಕ್ಷಾ ಹೆಲ್ತ್ ಸೆಂಟರ್ ಡಾಕ್ಟರ್ ಗಾಯತ್ರಿ ಜಿ. ಪ್ರಕಾಶ್ ಮಹಿಳೆಯರಿಗೆ ಆಗುವ ಅರೋಗ್ಯ ಸಮಸ್ಯೆ ಬಗ್ಗೆ ಮಾಹಿತಿ ನೀಡಿ, ಮಹಿಳೆಯರೊಂದಿಗೆ ಮುಕ್ತವಾಗಿ ಚರ್ಚಿಸಿದರು.
“ಕಾನೂನಿನ ಸಂರಕ್ಷಣೆಯಲ್ಲಿ ಮಹಿಳೆ “ಎಂಬ ವಿಷಯದ ಬಗ್ಗೆ ನ್ಯಾಯವಾದಿ ಶೋಭಾಲತಾ ಸುವರ್ಣ ವಿಚಾರ ವಿನಿಮಯ ಮಾಡಿ ಕಾನೂನನ್ನು ದುರುಪಯೋಗವಾಗದೆ ಸದುಪಯೋಗ ಪಡೆದುಕೊಳ್ಳಬೇಕು, ನಮ್ಮನ್ನು ಮೊದಲು ನಾವು ಅರ್ಥ ಮಾಡಿಕೊಳ್ಳಬೇಕು,ಸಂಸ್ಕಾರ ಯುಕ್ತವಾಗಿ ಜೀವನ ಸಾಗಿಸಿದರೆ ಯಾವ ಕಾನೂನಿನ ರಕ್ಷಣೆ ಅಗತ್ಯವಿಲ್ಲ ಎಂದರು.
ಮುಖ್ಯ ಅತಿಥಿಗಳಾಗಿ ಯುವವಾಹಿನಿ (ರಿ.) ಕೇಂದ್ರ ಸಮಿತಿ ಮಂಗಳೂರಿನ ಮಹಿಳಾ ಸಂಘಟನಾ ನಿರ್ದೇಶಕಿ ನಯನ ಸುರೇಶ, ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ (ರಿ.)ಮಾಣಿಯ ಅಧ್ಯಕ್ಷರಾದ ಸುರೇಶ್ ಸೂರ್ಯ, ಯುವವಾಹಿನಿ( ರಿ.) ಮಾಣಿ ಘಟಕದ ಮಹಿಳಾ ನಿರ್ದೇಶಕರಾದ ಶಕೀಲಾ ಕೃಷ್ಣ ಮಿತ್ತಕೋಡಿ, ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಂಘದ 10 ಗ್ರಾಮಗಳ ಮಹಿಳಾ ಅಧ್ಯಕ್ಷರುಗಳನ್ನು, ಮಾಜಿ ಅಧ್ಯಕ್ಷರುಗಳನ್ನು, ಪಂಚಾಯತ್ ಸದಸ್ಯೆರುಗಳನ್ನು ಅಭಿನಂದಿಸಾಲಾಯಿತು, ಸಂಘದ ಸದಸ್ಯೆ ಭಾರತೀ ಪ್ರಾರ್ಥಿಸಿ,ಯುವವಾಹಿನಿ(ರಿ.) ಮಾಣಿ ಘಟಕದ ಕಾರ್ಯದರ್ಶಿ ಶಾಲಿನಿ ಸ್ವಾಗತಿಸಿ, ಸದಸ್ಯೆಯಾದ ಶುಭ ಪೆರ್ನೆ ವಂದಿಸಿದರು.
ಮಾಣಿ ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಕಿ ಉಷಾ ದಿನಕರ್ ಹಾಗೂ ಘಟಕದ ಸದಸ್ಯ ರಾಜೇಶ್ ಬಲ್ಯ ಕಾರ್ಯಕ್ರಮ ನೀರೂಪಿಸಿದರು.