ಕಲ್ಲಡ್ಕ : ಬಂಟ್ವಾಳ ತಾಲೂಕಿನ ವೀರಕಂಭ ಗ್ರಾಮದ ಓಂಕಾರ ಫ್ರೆಂಡ್ಸ್ ವೀರಕಂಭ ವತಿಯಿಂದ 3 ನೇ ವರ್ಷದ ಕೆಸರ್‌ದ್ದ ಕಂಡೋಡು ಕುಸಲ್ದ ಗೊಬ್ಬು -2024 ಕಾರ್ಯಕ್ರಮ ವೀರಕಂಭ ಗ್ರಾಮದ ಕುಮೇರು ದಿವಂಗತ ಬಾಬು ಪೂಜಾರಿಯವರ ಗದ್ದೆಯಲ್ಲಿ ಜರಗಿತು.

ಕೆಸರುದ್ದ ಕಂಡೋಡು ಕುಸಲ್ದ ಗೊಬ್ಬು -2024 ಕಾರ್ಯಕ್ರಮ

ವೀರಕಂಭ ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ರಾಮಚಂದ್ರ ಪ್ರಭು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಗ್ರಾಮ ಪಂಚಾಯತ್ ಉಪಾಧ್ಯಕ ಜನಾರ್ಧನ ಪೂಜಾರಿ ಕ್ರೀಡಾ ಕೂಟದ ಗದ್ದೆಗೆ ಹಾಲು ಏರೆದು ಫಲ ಪುಷ್ಪ ಸಮರ್ಪಿಸಿದರು.

ವೇದಿಕೆಯಲ್ಲಿ ಹಿರಿಯರಾದ ಉವಪ್ಪ ನಾಯ್ಕ್, ಮಜಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಕೊರಗಪ್ಪ ನಾಯ್ಕ್, ಮಾತೃಶ್ರೀ ಸೌಂಡ್ಸ್ ಮಾಲಕ ಸುಧಾಕರ್ ವಿ, ಓಂಕಾರ ಫ್ರೆಂಡ್ಸ್ ಅಧ್ಯಕ್ಷ ಕೀರ್ತನ್ ಉಪಸ್ಥಿತರಿದ್ದರು.

ಮಕ್ಕಳಿಗೆ, ಮಹಿಳೆಯರಿಗೆ, ಪುರುಷರಿಗೆ ವಿವಿಧ ರೀತಿಯ ವೈಯಕ್ತಿಕ ಹಾಗೂ ಸಾಮೂಹಿಕ ಕ್ರೀಡಾ ಸ್ಪರ್ಧೆಗಳನ್ನು ಮಾಡಿ ವಿಜೇತರಿಗೆ ಬಹುಮಾನ ನೀಡಲಾಯಿತು.

ಮಜಿ ಶಾಲಾ ಶಿಕ್ಷಕಿ ಸಂಗೀತ ಶರ್ಮ ಪಿ. ಜಿ. ಕಾರ್ಯಕ್ರಮ ನಿರೂಪಿಸಿದರು.