ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿ 1ರಿಂದ 7ನೇ ತರಗತಿಯ ಪೋಷಕರ ಸಭೆ ನಡೆಯಿತು.
ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಸಂಸ್ಥಾಪಕರು ಹಾಗೂ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ.ಪ್ರಭಾಕರ್ ಭಟ್ ಕಲ್ಲಡ್ಕ“ಪೋಷಕರು ಮೊಬೈಲ್ ಬಳಕೆ ಕಡಿಮೆ ಮಾಡಿ, ಮಕ್ಕಳ ತಪ್ಪನ್ನುಚಿಕ್ಕದಿನಿಂದಲೇತಿದ್ದಿ. ಶಾಲೆಯ ಜೊತೆ ವಿಶೇಷ ಸಂಪರ್ಕವನ್ನು ಹೊಂದಿರಬೇಕು. ಅನ್ನದಲ್ಲಿಒಂದುತುತ್ತು ಮತ್ತೊಬ್ಬರಿಗೆ ನೀಡುದರಿಂದ ಶ್ರೇಷ್ಠ ಗುಣ ಮಕ್ಕಳಲ್ಲಿ ಬೆಳೆಯುತ್ತದೆ” ಎಂದು ವಿದ್ಯಾರ್ಥಿಯ ಪ್ರಗತಿಯ ಬಗ್ಗೆ ಶಿಕ್ಷಕ ಮತ್ತು ಪೋಷಕರ ಜವಾಬ್ದಾರಿಯನ್ನು ವಿವರಿಸಿದರು.
ವೇದಿಕೆಯಲ್ಲಿಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕರಾದ ವಸಂತ ಮಾಧವ, ಶ್ರೀರಾಮ ವಿದ್ಯಾಕೇಂದ್ರದ ಆಡಳಿತ ಮಂಡಳಿಯ ಸದಸ್ಯರಾದ ಮಲ್ಲಿಕಾಆರ್ ಶೆಟ್ಟಿ, ರಾಷ್ಟ್ರ ಸೇವಿಕಾ ಸಮಿತಿಯ ಕರ್ನಾಟಕದಕ್ಷಿಣ ಪ್ರಾಂತಸದಸ್ಯರು ಡಾ.ಕಮಲಾ ಪ್ರಭಾಕರ್‌ಭಟ್, ಸಹಮುಖ್ಯೋಪಾಧ್ಯಾಯರಾದ ಸುಮಂತ್ ಆಳ್ವ ಎಮ್ ಉಪಸ್ಥಿತರಿದ್ದರು.
ಇದೇ ವೇಳೆ ಶಿಕ್ಷಕರ – ಪೋಷಕರ ಸಂವಾದ ನಡೆಯಿತು.
ಮಾತಾಜಿಯವರಾದ ಶ್ವೇತಾ.ಕೆಸ್ವಾಗತಿಸಿ, ಚೈತ್ರಎನ್ ಕೆ ನಿರೂಪಿಸಿ, ದಿವ್ಯಕೆ ವಂದಿಸಿದರು.