ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನ ಮಂದಿರದಲ್ಲಿ ೨೬ನೇ ವರ್ಷದಕಾರ್ಗಿಲ್ ಸಂಸ್ಮರಣೆಯನ್ನು ನಿವೃತ್ತ ಸೈನಿಕರೊಂದಿಗೆ ಆಚರಿಸಲಾಯಿತು.
ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಪ್ರಭಾಕರ್ ಭಟ್ ಕಲ್ಲಡ್ಕಮಾತನಾಡಿ,“ಈ ದಿನ ವಿಶೇಷವಾಗಿ ನೆನಪಿನಲ್ಲಿಡಬೇಕಾದ ದಿನ.ದೇಶಕ್ಕೋಸ್ಕರ ತನ್ನನ್ನು ತಾನು ಸಮರ್ಪಿಸಿಕೊಂಡು ದೇಶದರಕ್ಷಣೆ ನಮ್ಮ ಜವಾಬ್ದಾರಿ ಎಂದು ನಂಬಿದವರು ನಮ್ಮ ಸೈನಿಕರು. ನಮ್ಮದೇಶದ ಸೈನಿಕರ ಬದುಕುಚೆನ್ನಾಗಿದ್ದರೆ, ನಮ್ಮ ಬದುಕು ಚೆನ್ನಾಗಿರುತ್ತದೆ. ಮನೆಯಲ್ಲಿ ಮಕ್ಕಳನ್ನು ತಂದೆ-ತಾಯಿ ಹೇಗೆ ರಕ್ಷಣೆ ಮಾಡುತ್ತಾರೋ ಹಾಗೆಯೇ ದೇಶದಲ್ಲಿ ಸೈನಿಕರು ತ್ಯಾಗ, ಬಲಿದಾನ, ಹೋರಾಟದೊಂದಿಗೆ ನಮ್ಮ ದೇಶವನ್ನು ರಕ್ಷಣೆ ಮಾಡುವರು. ಅವರನ್ನು ದಿನಾ ಸ್ಮರಿಸಿಕೊಳ್ಳುವುದು ನಮ್ಮಕರ್ತವ್ಯ. ನೀವೂ ಕೂಡ ಮುಂದಿನ ದಿನಗಳಲ್ಲಿ ಸೈನ್ಯಕ್ಕೆ ಸೇರಿ, ನಾನು ದೇಶಕ್ಕೋಸ್ಕರ ರಕ್ಷಣೆ ಕೆಲಸವನ್ನು ಮಾಡುತ್ತೇನೆ ಎಂಬ ಧೃಡ ಸಂಕಲ್ಪವನ್ನು ಮಾಡಿ, ಪರಾಕ್ರಮ, ಧೈರ್ಯ, ದೇಶಕ್ಕೋಸ್ಕರ ತ್ಯಾಗ ಇದರಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ.”ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಮೊದಲಿಗೆ ನಿವೃತ್ತ ಸೈನಿಕರಿಂದ ದೀಪಪ್ರಜ್ವಲನೆ ಹಾಗೂ ಭಾರತ ಮಾತೆಗೆ ಪುಷ್ಪಾರ್ಚನೆ ನಡೆಯಿತು. ನಂತರ ವಿದ್ಯಾರ್ಥಿನಿಯರು ಸಮೂಹ ಗೀತೆ ಹಾಡಿದರು. ತಬಲದಲ್ಲಿ ವಿಘ್ನೇಶ್ ಸಹಕರಿಸಿದರು.
ಸಿಕಂದರಬಾದ್, ಬೆಂಗಳೂರು, ಶ್ರೀನಗರ, ಝಾನ್ಸಿ ಮೊದಲಾದ ಕಡೆಗಳಲ್ಲಿ ೨೪ ವರ್ಷಗಳ ಕಾಲ ಸೇನೆಯಲ್ಲಿಸೇವೆ ಸಲ್ಲಿಸಿ ನಿವೃತ್ತರಾದ ರಾಮಕೃಷ್ಣ.ಕೆ ಅವರು ಮಾತನಾಡಿ, “ಕಷ್ಟವನ್ನು ಎದುರಿಸಿ ಮುಂದೆ ನಡೆಯುವವನೇ ಸಿಪಾಯಿ. ದೇಶಕ್ಕಾಗಿ ಹೋರಾಡುವುದನ್ನು ಗುರಿಯನ್ನಾಗಿಸಿ, ದೇಶಕ್ಕಾಗಿ, ದೇಶ ಸೇವೆಗಾಗಿ ಸಂತೋಷದಿಂದ ಹೆಜ್ಜೆಯಿಡಿ. ಸೇನೆಗೆ ಸೇರುವ ಅವಕಾಶ ಸಿಕ್ಕರೆ ಅದನ್ನುಸದುಪಯೋಗಪಡಿಸಿಕೊಳ್ಳಿ.”ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ನಿವೃತ್ತಯೋಧರಿಗೆ ಶ್ರೀರಾಮ ವಿದ್ಯಾಕೆಂದ್ರದ ಸಂಸ್ಥಾಪಕಡಾ| ಪ್ರಭಾಕರ್ ಭಟ್‌ಕಲ್ಲಡ್ಕ ಶಾಲು ಹೊದಿಸಿ, ಭಾರತ ಮಾತೆಯ ಸ್ಮರಣಿಕೆ ನೀಡಿಗೌರವ ಸಮರ್ಪಿಸಿದರು.ಅಧ್ಯಾಪಕ ವೃಂದದವರು ಆರತಿ ಬೆಳಗಿ, ತಿಲಕವನ್ನಿಟ್ಟು ಆರ್ಶೀವಾದ ಪಡೆದುಕೊಂಡರು.
ಕಾರ್ಯಕ್ರಮದ ವೇದಿಕೆಯಲ್ಲಿ ನಿವೃತ್ತ ಸೈನಿಕ ರಾಮಕೃಷ್ಣ.ಕೆ ಅವರ ಧರ್ಮಪತ್ನಿಶಾಂತಿ ರಾಮಕೃಷ್ಣ.ಕೆ, ಆರ್ಮಿಯಟ್ರೆöಯಿನಿಂಗ್‌ಕೇರ್‌ನ ತಾಂತ್ರಿಕ ವಿಭಾಗದಲ್ಲಿ ಸೇವೆ ಸಲ್ಲಿಸಿದ ರಂಗನಾಥರೈ ಬೆಳಿಯಾರುಗುತ್ತು, ಆಗ್ರಾ, ಸಿಕ್ಕಿಂ, ಪಶ್ಚಿಮ ಬಂಗಾಳ, ರಾಜಸ್ಥಾನ, ಮಣಿಪುರ, ನಾಗಾಲ್ಯಾಂಡ್ ಮೊದಲಾದ ಸ್ಥಳಗಳಲ್ಲಿ ೧೬ ವರ್ಷಗಳ ಕಾಲ ಸೇವೆ ಸಲ್ಲಿಸಿದ ಮಾಜಿ ಸೈನಿಕ ದಯಾನಂದ.ಕೆ.ನಾಯಕ್, ಆರ್ಮಿ ಫೈಟಿಂಗ್ ವೆಹಿಕಲ್‌ನಲ್ಲಿ ಸೇವೆ ಸಲ್ಲಿಸಿದ ಉದಯ್‌ಕುಮಾರ್‌ರಾವ್, ಕಾರ್ಗಿಲ್‌ಯುದ್ದದ ಸಂದರ್ಭದಲ್ಲಿ ಜಮ್ಮುವಿನಲ್ಲಿಕರ್ತವ್ಯ ನಿರತರಾಗಿದ್ದ ರಾಮಕೃಷ್ಣ ಶಾಸ್ತ್ರಿ, ಸೇನೆಯಲ್ಲಿಟ್ರೆöÊನಿಂಗ್‌ಇನ್ಸ್ಪೆಕ್ಟರಾಗಿ, ಪ್ರಸ್ತುತ ಪೋಲೀಸ್‌ಇಲಾಖೆಯಲ್ಲಿಕರ್ತವ್ಯ ನಿರ್ವಹಿಸುತ್ತಿರುವ ಉದಯಶಂಕರ ಮಾಣಿ- ಶ್ರುತಿ ದಂಪತಿಗಳು, ಮಾಜಿ ನಿವೃತ್ತ ಸೈನಿಕರಾದ ದಿನೇಶ್‌ಕುಮಾರ್ ಅವರ ಪತ್ನಿ ಪದ್ಮಾವತಿ, ಕಾರ್ಗಿಲ್‌ಯುದ್ದದಲ್ಲಿ ಭಾಗವಹಿಸಿ ನಿವೃತ್ತರಾಗಿ ಪ್ರಸ್ತುತ ಪಾಂಡೇಶ್ವರದಯೂನಿಯನ್ ಬ್ಯಾಂಕ್‌ನಲ್ಲಿಕತವ್ಯ ನಿರ್ವಹಿಸುತ್ತಿರುವ ವಿಶ್ವನಾಥ ಪೂಜಾರಿ, ದೇವಿದಾಸ್ ಶೆಟ್ಟಿ ಪಾಲ್ತಾಜೆ, ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕ ವಸಂತ ಮಾಧವ, ಸಹಸಂಚಾಲಕ ರಮೇಶ್ ಎನ್, ಹಾಗೂ ಮುಖ್ಯೋಪಾಧ್ಯಾಯ ರವಿರಾಜ್ ಕಣಂತೂರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ಪ್ರಾಪ್ತಿ ಸ್ವಾಗತಿಸಿ, ಧನ್ಯಾ.ಆರ್ ನಿರೂಪಿಸಿ ವಚನಾ ವಂದಿಸಿದರು.