ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿಗಳ ದೀಪ ಪ್ರದಾನ ಕಾರ್ಯಕ್ರಮವು ಪದವಿ ವಿದ್ಯಾಲಯದ ಆಜಾದ್ ಭವನದಲ್ಲಿ ನಡೆಯಿತು. ಅತಿಥಿ ಅಭ್ಯಾಗತರು ದೀಪ ಪ್ರಜ್ವಲಿಸಿ ಅಗ್ನಿ ಹೋತ್ರಕ್ಕೆಘೃತ ಸಮರ್ಪಣೆ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದ ಆರಂಭದಲ್ಲಿ ವಿದ್ಯಾರ್ಥಿಗಳಿಂದ ಸರಸ್ವತಿ ವಂದನಾ ನಡೆಯಿತು. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರು ಆಗಿರುವ ಡಾ. ಪ್ರಭಾಕರ್ ಭಟ್‌ ಕಲ್ಲಡ್ಕ ಅವರು ಮಾತನಾಡುತ್ತಾ ಶಿಕ್ಷಣದಲ್ಲಿ ಆಧ್ಯಾತ್ಮಿಕ ಶಿಕ್ಷಣವನ್ನು ನೀಡಬೇಕೆಂದು ಶ್ರೀರಾಮ ವಿದ್ಯಾಕೇಂದ್ರದ ಧ್ಯೇಯವಾಗಿತ್ತು, ಶಾಲಾ ಪ್ರಾರಂಭದಲ್ಲಿಯೇ ಪಂಚಮುಖಿ ಶಿಕ್ಷಣದ ಮೂಲಕ ವಿದ್ಯಾರ್ಥಿಗಳನ್ನು ರೂಪಿಸುವ ಪ್ರಯತ್ನ ಶ್ರೀರಾಮ ವಿದ್ಯಾಕೇಂದ್ರ ಮಾಡುತ್ತಾ ಬಂದಿದೆ ಎಂದರು. ಅದೇ ರೀತಿ ಮುಂದಿನ ಪರೀಕ್ಷೆಯಲ್ಲಿ ಆತ್ಮವಿಶ್ವಾಸವನ್ನು ಮೂಡಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಕಾರ್ಯಕ್ರಮದ ಅತಿಥಿಗಳಾಗಿ ಹಿಂದೂ ಸೇವಾ ಪ್ರತಿಷ್ಠಾನದ ಅಧ್ಯಕ್ಷರು ಹಾಗೂ ಬೆಂಗಳೂರು ಮಹಾನಗರದ ಸಂಘಚಾಲಕರು ಶ್ರೀ ಮಿಲಿಂದ ಗೋಖಲೆ, ಚಿತ್ರದುರ್ಗದ ಉದ್ಯಮಿಗಳಾದ ಶಶಿಧರ್, ಶ್ರೀಮತಿ ಐಶ್ವರ್ಯ ನಂದ್ಯಪ್ಪ CWCCI ನ ರಾಷ್ಟ್ರೀಯ ಅಧ್ಯಕ್ಷರು, ಮಡಿಲು ಮಹಿಳಾ ಸಂಸ್ಥೆಯ ನಿರ್ಮಾತೃ, ಮನೋಜ್‌ಕುಮಾರ್, ನಾಸಿಕ್ ಮುಂಬೈಯಉದ್ಯಮಿ, ಶ್ರೀ ಬಾಲಕೃಷ್ಣ ಭಂಡಾರಿ,ಹಾಗೂ ಕ್ಯಾಂಪ್ಕೋಮಾಜಿ ನಿರ್ದೇಶಕರಾದಬಾಲಕೃಷ್ಣ ಡಿ ಬಿ.,ಡಾ. ಕಮಲ ಪ್ರಭಾಕರ್ ಭಟ್, ನಾರಾಯಣ ಸೋಮಯಾಜಿ, ವಸಂತ ಮಾಧವ, ರಮೇಶ್‌ಎನ್, ಶಾಂಭವಿ, ಗೋಪಾಲ್ ಎಂ., ಉಪಸ್ಥಿತರಿದ್ದರು.

ವಿದ್ಯಾರ್ಥಿಗಳು ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿ ಹಿರಿಯರಿಂದ ತಿಲಕಧಾರಣೆಯೊಂದಿಗೆ ಆಶೀರ್ವಾದವನ್ನು ಪಡೆದುಕೊಂಡರು.

ದೀಪ ಪ್ರದಾನ ಕಾರ್ಯಕ್ರಮದಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಗಳು 9ನೇ ತರಗತಿಯ ವಿದ್ಯಾರ್ಥಿಗಳಿಗೆ ದೀಪವನ್ನು ಹಸ್ತಾಂತರಿಸಿರು. ಹಾಗೂ 10ನೇ ತರಗತಿಯ ವಿದ್ಯಾರ್ಥಿಗಳಾದ ನಿಖಿತಾ ಕೆ. ಬಂಗೇರಾ ಮತ್ತು ಭೂಷಣ್‌ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ವಿದ್ಯಾರ್ಥಿಗಳು ನೆನಪಿನ ಉಡುಗೊರೆಯನ್ನುಹಿರಿಯರಿಗೆ ನೀಡಿದರು. ಕಾರ್ಯಕ್ರಮವನ್ನು ಮೋನಿಷಾ ಇಂಗ್ಲೀಷ್ ಭಾಷೆಯಲ್ಲಿ ನಿರೂಪಿಸಿ, ಗಾನವಿ ಇಂಗ್ಲೀಷ್‌ನಲ್ಲಿ ಸ್ವಾಗತಿಸಿ, ಪ್ರಾಣೇಶ್‌ ಹಿಂದಿ ಭಾಷೆಯಲ್ಲಿ ಧನ್ಯವಾದವಿತ್ತರು.