ಮಂಗಳೂರು: ಯೆನೆಪೊಯ ( ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯ), ದೇರಳಕಟ್ಟೆ, ಮಂಗಳೂರಿನಲ್ಲಿಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಮಾರ್ಚ್ 9, 2026 ರಂದು ಯೆಂಡ್ಯೂರನ್ಸ್ ಸಭಾಂಗಣದಲ್ಲಿ ಜೆಂಡರ್ ಸೆನ್ಸಿಟೈಸೇಶನ್ ಸೆಲ್(ಲಿಂಗ ಸಂವೇದನಾ ಘಟಕ) ವತಿಯಿಂದ ಆಚರಿಸಲಾಯಿತು. ಈ ವರ್ಷದ ವಿಷಯ“ಗಿವ್ ಟು ಗೇನ್ (ಸಹಕಾರದಿಂದ ಅಭಿವೃದ್ಧಿ)” ಆಗಿತ್ತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಕೆ. ಎಸ್. ಗಂಗಾಧರ ಸೋಮಯಾಜಿ ಉಪಸ್ಥಿತರಿದ್ದು, ಮಹಿಳೆಯರ ಸಬಲೀಕರಣ, ಸಮಾಜದಲ್ಲಿ ಮಹಿಳೆಯರ ಪಾತ್ರ ಹಾಗೂ ಪರಸ್ಪರ ಸಹಕಾರದ ಮಹತ್ವದ ಕುರಿತುಮಾತನಾಡಿದರು. ಗೌರವಅತಿಥಿಯಾಗಿಉಪಸ್ಥಿತರಿದ್ದ ಶ್ರೀಮತಿ ಜೈಬುನ್ನಿಸಾ ಹಿರಿಯ ಸಿವಿಲ್ ನ್ಯಾಯಾಧೀಶರು’ ಹಾಗು ಸದಸ್ಯ ಕಾರ್ಯದರ್ಶಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ದಕ್ಷಿಣ ಕನ್ನಡ, ಇವರು ಮಹಿಳೆಯರ ಹಕ್ಕುಗಳು ಮತ್ತು ಕಾನೂನು ರಕ್ಷಣೆ ಕುರಿತು ವಿವರಿಸಿದರು. ಇದನ್ನೂ ಓದಿ : ಶ್ರೀ ವೆಂಕಟರಮಣ ಸ್ವಾಮೀ ಸಮೂಹ ವಿದ್ಯಾಸಂಸ್ಥೆ ವಿದ್ಯಾಗಿರಿ, ಬಂಟ್ವಾಳ – ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ

ಯೆನೆಪೊಯ ( ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯ), ದೇರಳಕಟ್ಟೆ, ಮಂಗಳೂರಿನಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ
ಮಹಿಳೆಯರು ತಮ್ಮಹಕ್ಕುಗಳನ್ನುಅರಿತುಕೊಂಡು ಕಾನೂನು ಸೌಲಭ್ಯಗಳನ್ನು ಬಳಸಿಕೊಳ್ಳುವ ಅಗತ್ಯವನ್ನು ಅವರು ಒತ್ತಿ ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯೆನೆಪೋಯ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರು ಹಾಗೂ ಜೆಂಡರ್ ಸೆನ್ಸಿಟೈಸೇಶನ್ ಸೆಲ್ (ಲಿಂಗ ಸಂವೇದನಾ ಘಟಕ) ಸಂಯೋಜಕಿಯಾದ ಡಾ. ಲೀನಾ ಕೆ. ಸಿ. ಅವರು ವಹಿಸಿದ್ದರು. ಘಟಕದ ಕಾರ್ಯದರ್ಶಿಯಾದ ಡಾ. ಗ್ಲಾಡಿಸ್ ಕೊಲಾಸೋ ಕಾರ್ಯಕ್ರಮದಲ್ಲಿಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಮಹಿಮಾ, ಸ್ವಾಗತಿಸಿ, ಫಾತಿಮಾ ವಂದಿಸಿದರು.
ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಸಿಬ್ಬಂದಿಯಾದ ಶ್ರೀಮತಿ ಮಮತಾ ಜೆ ಶೆಟ್ಟಿ ಅವರನ್ನುಉತ್ತಮ ಉದ್ಯೋಗಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸುಮಾರು 300 ಮಂದಿ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
