ಪ್ರತಿ ವರ್ಷ ಮೇ 29 ರಂದು ಅಂತಾರಾಷ್ಟ್ರೀಯ ಎವರೆಸ್ಟ್ ದಿನವನ್ನು ಆಚರಿಸಲಾಗುತ್ತದೆ. ಈ ದಿನವು ನ್ಯೂಜಿಲೆಂಡ್‌ನ ಸರ್ ಎಡ್ಮಂಡ್ ಹಿಲರಿ ಮತ್ತು ನೇಪಾಳದ ತೇನ್ಸಿಂಗ್ ನಾರ್ಗೆ ಶೆರ್ಪಾ ಮೌಂಟ್ ಎವರೆಸ್ಟ್ ಶಿಖರವನ್ನು ಮೊದಲ 1953 ರಲ್ಲಿ ಏರಿದರು. ಈ ದಿನದಂದು ಅವರಿಬ್ಬರ ಈ ಸಾಧನೆಯನ್ನು ನೆನಪಿಸಲಾಗುತ್ತದೆ. ಇದನ್ನೂ ಓದಿ: World Otter Day ಮೇ 27 ವಿಶ್ವ ನೀರುನಾಯಿ ದಿನ

ಮೌಂಟ್ ಎವರೆಸ್ಟ್‌ನ ದಕ್ಷಿಣ ಭಾಗ ನೇಪಾಳಕ್ಕೆ ಹಾಗೂ ಉತ್ತರ ಭಾಗ ಚೀನಾಗೆ ಸೇರಿದೆ. ಎವರೆಸ್ಟ್ ಎತ್ತರ 8,848.86 ಮೀಟರ್ ಆಗಿದೆ. ಹವಾಯಿನ ಮೌನಕೀ ಪರ್ವತ 10,210 ಮೀ. ಎತ್ತರದಲ್ಲಿದೆ. ಈ ಪರ್ವತವು ಸಮುದ್ರ ಮಟ್ಟದಿಂದ ಕೇವಲ 4205 ಮೀ ಎತ್ತರದಲ್ಲಿದೆ. ಎವರೆಸ್ಟ್‌ನ ಎಂಟು ಸಾವಿರ ಮೀಟರ್ ಸಾವಿನ ವಲಯ ಎಂದು ಕರೆಯಲಾಗಿದೆ. ಮೌಂಟ್ ಎವರೆಸ್ಟ್ ಪ್ರತಿ ನೂರು ವರ್ಷಕ್ಕೆ 40 ಸೆಂ.ಮೀ. ಬೆಳೆಯುತ್ತದೆ. ಮೌಂಟ್ ಎವರೆಸ್ಟ್ 60 ದಶಲಕ್ಷ ವರ್ಷಗಳಷ್ಟು ಹಳೆಯದಾದ ಪರ್ವತವಾಗಿದೆ. ಮೌಂಟ್ ಎವರೆಸ್ಟ್‌ನ ತುದಿಯಲ್ಲಿ ಜೀವಿಸಲು ಸಾಧ್ಯವಿಲ್ಲ ಮತ್ತು ಎವರೆಸ್ಟ್ ಪರ್ವತವನ್ನು ಏರಿ ತುತ್ತತುದಿ ತಲುಪಲು 10 ವಾರ ಬೇಕಾಗುತ್ತದೆ. ಹತ್ತಲು ತಗಲುವ ವೆಚ್ಚವು ಬರೋಬ್ಬರಿ 22 ಲಕ್ಷ ರೂಪಾಯಿ ಆಗಿದೆ.

ಕಣ್ಣು ಕೋರೈಸುವ ಶ್ವೇತ ಹಿಮ, ಕೃಷ್ಣ ಶಿಲೆಯ ಒತ್ತು ಗೋಡೆಗಳು, 3347ಮೀ ಗಳಿಗಿಂತಲೂ ಎತ್ತರವಾದ ಕಡಿದಾದ ಶಿಲಾಪ್ರಪಾತಗಳು ಈ ಶಿಖರಪೀಠವನ್ನು ಚಿತ್ತಾಕರ್ಷಕವಾಗಿ ಮಾಡಿವೆ. ಶಿಖರದ ಸುತ್ತಮುತ್ತಣ ಪ್ರದೇಶದಲ್ಲಿ 4550ಮೀ ಗಳ ವರೆಗೆ ಅತ್ಯಂತ ಕಡಿಮೆ ಪ್ರಮಾಣದಲ್ಲಿನ ವ್ಯವಸಾಯ, ಪಶುಪಾಲನೆ ಸಾಧ್ಯ. ವರ್ಷದಲ್ಲಿ ಹೆಚ್ಚು ಕಾಲ ಹಿಮಾಚ್ಛಾದಿತವಾದ ಈ ಪ್ರದೇಶದಲ್ಲಿ ಜನಜೀವನ ಬಲು ಕಷ್ಟಕರವಾದುದು. ಈವರೆಗೆ ಸುಮಾರು 2,800ಕ್ಕೂ ಹೆಚ್ಚು ಪರ್ವತಾರೋಹಿಗಳು ಶಿಖರವನ್ನು ಏರಿದ್ದರೆ, ಈ ಸಾಹಸದಲ್ಲಿ ಅಸು ನೀಗಿದವರು 180ಕ್ಕೂ ಹೆಚ್ಚು. ಎವರೆಸ್ಟ್ ಏರಲು ಮುಖ್ಯವಾಗಿ ನಾರ್ತ್ಕೋಲ್ ಮತ್ತು ಸೌತ್ಕೋಲ್ ಮಾರ್ಗಗಳಾಗಿದ್ದರೂ, ಒಟ್ಟು 15 ಕಡೆಯಿಂದ ಶಿಖರಾರೋಹಣ ಮಾಡಲಾಗಿದೆ.

ನೇಪಾಳದ ಅಪಾ ಶೆರ್ಪಾ 2002-2011ರ ಅವಧಿಯಲ್ಲಿ ವರ್ಷ ಬಿಟ್ಟು ವರ್ಷದಂತೆ 10 ಬಾರಿ ಎವರೆಸ್ಟ್ ಶಿಖರವನ್ನು ಏರಿದ್ದಾನೆ. ನೇಪಾಳದ ಪೆಮ್ ದೋರ್ಕಿ ತಳಭಾಗದ ಕ್ಯಾಂಪ್ ಸ್ಥಳದಿಂದ ಮೇ 21, 2004ರಂದು ಅತ್ಯಂತ ವೇಗವಾಗಿ, ಅಂದರೆ ಕೇವಲ ಎರಡು ಗಂಟೆ ಹತ್ತು ನಿಮಿಷಗಳ ಅವಧಿಯಲ್ಲಿ ಎವರೆಸ್ಟ್ ಏರಿದ್ದಾನೆ. ಮೇ 25, 2014ರಂದು ಎವರೆಸ್ಟ್ ಏರಿ ಭಾರತದ 13 ವಯಸ್ಸಿನ ಹದಿಹರೆಯದ ಮಲವತ್ ಪುರ್ಣ ಈ ಸಾಹಸಕ್ಕೆ ಕೈಹಾಕಿದ ಅತ್ಯಂತ ಕಡಿಮೆ ವಯಸ್ಸಿನ ಬಾಲಕಿ. ಏಪ್ರಿಲ್ 21, 2013ರಂದು ಅಮೆರಿಕೆಯ ಲಿಜಿ ಹಾಕರ್ ಎವರೆಸ್ಟಿನ ತಳಮಟ್ಟದಿಂದ ಅತ್ಯಂತ ವೇಗವಾಗಿ, ಅಂದರೆ ಸುಮಾರು 63 ಗಂಟೆಗಳಲ್ಲೇ ಕೆ.ಟಿ.ಎಮ್.ಗೆ ಓಡಿದ ಮೊದಲ ವ್ಯಕ್ತಿ.