ಕಲ್ಲಡ್ಕ ಶ್ರೀರಾಮ ಪ್ರಾಥಮಿಕ ಶಾಲೆಯ ಲಕ್ಷ್ಮೀ ನಿವಾಸದಲ್ಲಿ ಯಕ್ಷಗಾನ ತರಬೇತಿಯು ಜೂ.22ರಂದು ಗಣೇಶ್ ಆಚಾರ್ಯ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.
ವೃತ್ತಿಯಲ್ಲಿ ಶಿಲ್ಪಿಯಾಗಿರುವ ಗಣೇಶ್‌ಆಚಾರ್ಯ ಕೊಂದಲಕೋಡಿ ಮಾತನಾಡಿ ಯಕ್ಷಗಾನದ ನೃತ್ಯ ,ಹಾಡುಗಾರಿಕೆ, ಮಾತುಗಾರಿಗೆ, ವೇಷ ಭೂಷಣಗಳನ್ನೊಳಗೊಂಡ ಒಂದು ಸ್ವತಂತ್ರವಾದ ಶಾಸ್ತ್ರೀಯ ಕಲೆ. ಕರ್ನಾಟಕದ ಸಾಂಪ್ರದಾಯಿಕ ಕಲಾ ಪ್ರಕಾರಗಳಲ್ಲಿ ಅತ್ಯಂತ ಪ್ರಮುಖವಾದದ್ದು. ಕರ್ನಾಟಕದ ಕರಾವಳಿ ಜಿಲ್ಲೆಗಳು, ಶಿವಮೊಗ್ಗ, ಚಿಕ್ಕಮಂಗಳೂರು ಮತ್ತು ಕೇರಳದ ಕಾಸರಗೋಡು ಜಿಲ್ಲೆಗಳಲ್ಲಿ ಯಕ್ಷಗಾನವು ಮನೆಮಾತಾಗಿದೆ” ಎಂದರು.
ಈ ಸಂದರ್ಭದಲ್ಲಿ ಸಹಮುಖ್ಯೋಪಾಧ್ಯಾಯರಾದ ಸುಮಂತ್ ಆಳ್ವ ಎಂ. ಉಪಸ್ಥಿತರಿದ್ದರು. ಕಾರ್ಯಕ್ರಮವನ್ನುಅಧ್ಯಾಪಕರಾದ ಹೇಮಲತಾ ಸ್ವಾಗತಿಸಿ, ಬಾಲಕೃಷ್ಣ ವಂದಿಸಿದರು.