ಇಟಾನಗರ: ಅರುಣಾಚಲ ಪ್ರದೇಶದ (Arunachal Pradesh) ಪಾಸಿಘಾಟ್‌ನ ಮೆಬೊ ಮತ್ತು ಸಿಗರ್ ಪ್ರದೇಶಗಳಲ್ಲಿ ಭಾರೀ ಪ್ರಮಾಣದ ಕಾಡ್ಗಿಚ್ಚು (Arunachal Forest Fire) ಕಾಣಿಸಿಕೊಂಡಿದ್ದು, ಬೆಂಕಿ ನಂದಿಸಲು ಭಾರತೀಯ ವಾಯುಪಡೆ (Indian Air Force) 66,000 ಲೀಟರ್ ನೀರನ್ನು ಬಳಸಿದೆ.  ಇದನ್ನೂ ಓದಿ : ಯೆನೆಪೊಯ ( ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯ), ದೇರಳಕಟ್ಟೆ, ಮಂಗಳೂರಿನಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ 

ಬೆಂಕಿ ನಂದಿಸಲು ಭಾರತೀಯ ವಾಯುಪಡೆ (ಐಎಎಫ್) ಮಂಗಳವಾರ ಮಿ -17 ವಿ 5 ಹೆಲಿಕಾಪ್ಟರ್‌ನ್ನು ನಿಯೋಜಿಸಿತ್ತು. ಬೆಂಕಿ ನಂದಿಸುವ ಕಾರ್ಯಾಚರಣೆಯ ಫೋಟೋ ಹಾಗೂ ವಿಡಿಯೋವನ್ನು ವಾಯುಪಡೆ ಎಕ್ಸ್‌ನಲ್ಲಿ ಹಂಚಿಕೊಂಡಿದೆ.

Mi-17 V5 ಹೆಲಿಕಾಪ್ಟರ್‌ ಬೆಂಕಿ ನಂದಿಸುವ ಕಾರ್ಯಾಚರಣೆಯ ವೀಡಿಯೋವನ್ನು ವಾಯುಪಡೆ ಹಂಚಿಕೊಂಡಿದ್ದು, ಹೆಲಿಕಾಪ್ಟರ್‌ನ ಸಾಮರ್ಥ್ಯ ಹಾಗೂ ನಿಖರವಾದ ಕಾರ್ಯವನ್ನು ಅದರಲ್ಲಿ ನೋಡಬಹುದಾಗಿದೆ. ಹಲವಾರು ಬಾರಿ ಹಾರಾಟ ನಡೆಸಿದ Mi-17 V5 ಹೆಲಿಕಾಪ್ಟರ್‌ ಬೆಂಕಿ ಹೊತ್ತಿದ್ದ ಸ್ಥಳದಲ್ಲಿ ಸುಮಾರು 66,000 ಲೀಟರ್‌ ನೀರನ್ನು ಸುರಿದಿದೆ.

ಇತ್ತೀಚೆಗೆ ಅರುಣಾಚಲ ಪ್ರದೇಶದ ವಾಲೋಂಗ್‌ನಲ್ಲಿ, ಐಎಎಫ್ ಹೆಲಿಕಾಪ್ಟರ್‌ಗಳು ಬೆಂಕಿ ಹೊತ್ತಿಕೊಂಡ ಪ್ರದೇಶದ ಮೇಲೆ 139,800 ಲೀಟರ್ ನೀರನ್ನು ಹರಿಸುವ ಮೂಲಕ ಯಶಸ್ವಿಯಾಗಿ ನಂದಿಸಿದ್ದವು. ಅಸ್ಪಷ್ಟ ಗೋಚರತೆ ಮತ್ತು ಗಾಳಿಯಿಂದಾಗಿ ಈ ವೈಮಾನಿಕ ಕಾರ್ಯಾಚರಣೆ ಸವಾಲಿನಿಂದ ಕೂಡಿತ್ತು ಎಂದು ಅಧಿಕಾರಿಗಳು ಹೇಳಿದ್ದರು.
ಶುಷ್ಕ ಹವಾಮಾನ ಪರಿಸ್ಥಿತಿಗಳು ಮತ್ತು ಬೆಟ್ಟದ ಬುಡಕಟ್ಟು ಜನಾಂಗದವರು ಬಳಸುವ ಸಾಂಪ್ರದಾಯಿಕ ಜುಮ್ ಕೃಷಿ ಪದ್ಧತಿ ಈಶಾನ್ಯ ರಾಜ್ಯಗಳಲ್ಲಿ ಕಾಡ್ಗಿಚ್ಚಿಗೆ ಕಾರಣವಾಗಿದೆ ಎಂದು ಗುವಾಹಟಿಯಲ್ಲಿರುವ ರಕ್ಷಣಾ ವಕ್ತಾರರು ತಿಳಿಸಿದ್ದಾರೆ.