ಇಂದು ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಇಲಾಖೆಯು ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ Games, animation and visual effects conference (GAFX) ನ 7ನೇ ಆವೃತ್ತಿಗೆ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು   ಚಾಲನೆ ನೀಡಿ, ಶುಭ ಹಾರೈಸಿದರು. ಇದನ್ನೂ ಓದಿ : ಶಿವಮೊಗ್ಗದಲ್ಲಿ ಸ್ಪೆಷಲ್ ಕ್ಲಾಸ್ ಬಳಿಕ ಸಹಪಾಠಿಯನ್ನ ಕೊಂದ ಅನ್ಯಕೋಮಿನ ಮೂವರು ವಿದ್ಯಾರ್ಥಿಗಳು
ಬಳಿಕ ಮಾತನಾಡಿ ಬೆಂಗಳೂರು ಕೇವಲ ಭಾರತದ ತಂತ್ರಜ್ಞಾನ ರಾಜಧಾನಿ ಮಾತ್ರವಲ್ಲ. ಇಲ್ಲಿ ಕಲ್ಪನೆ ಮತ್ತು ಇಂಜಿನಿಯರಿಂಗ್ ನ ಸಂಗಮವಲ್ಲದೇ, ಕಲೆ ಮತ್ತು ಅಲ್ಗಾರಿದಮ್ಗಳ ಸಂಗಮವಿದೆ. ಸೃಜನಶೀಲತೆಯಿಂದ ಬಂಡವಾಳವರಗೆ , ಸಾಫ್ಟ್ ವೇರ್ ನಿಂದ ಬಾಹ್ಯಾಕಾಶ ಸಂಶೋಧನೆವರೆಗೆ, ಬಯೋಟೆಕ್ ನಿಂದ ಡೀಪ್‌ ಟೆಕ್ ವರೆಗೆ, ಪ್ರತಿಯೊಂದು ಕ್ರಾಂತಿಯಲ್ಲಿಯೂ ಬೆಂಗಳೂರು ಸದಾ ಮುಂಚೂಣಿಯಲ್ಲಿದೆ.
ಇಂದು GAFX ಮುಂದಿನ ಮಹತ್ವದ ಕ್ಷೇತ್ರವಾಗಿದ್ದು, ಗೇಮ್ಸ್, ಅನಿಮೇಶನ್ ಮತ್ತು ವಿಶುವಲ್ ಎಫೆಕ್ಟ್ಸ್ ಕ್ಷೇತ್ರವು ಸಣ್ಣಮಟ್ಟದ ಸೃಜನಾತ್ಮಕ ಉದ್ಯಮವಾಗಿ ಉಳಿದಿಲ್ಲ. ಡಿಜಿಟಲ್ ಕ್ರಾಂತಿ, ಇಮರ್ಸಿವ್ ಮೀಡಿಯಾ, ಸ್ಟ್ರೀಮಿಂಗ್ ವೇದಿಕೆಗಳು, ಇ-ಸ್ಪೋರ್ಟ್ಸ್ ಮತ್ತು ಎಕ್ಸ್ಟೆಂಡೆಡ್ ರಿಯಾಲಿಟಿ ಯುಗದಲ್ಲಿ, ಇಂದು ಮಾನವನ ಕಥೆ, ಸಂಸ್ಕೃತಿ, ಶಿಕ್ಷಣ ಮತ್ತು ಆಡಳಿತದ ಅನುಭವಗಳನ್ನು GAFX ರೂಪಿಸುತ್ತಿದೆ ಎಂದರು.
ಸಮಾರಂಭದಲ್ಲಿ ಸಚಿವರಾದ ಪ್ರಿಯಾಂಕ್ ಖರ್ಗೆ, ಐಡಿಜಿಎಸ್‌ನ ಅಧ್ಯಕ್ಷರಾದ ರಾಜನ್ ನವನಿ, ಫ್ರಾನ್ಸ್ ದೇಶದ ಕಾನ್ಸುಲ್ ಜನರಲ್ ಮಾರ್ಕ್ ಲ್ಯಾಮಿ, ಆಸ್ಟ್ರೇಲಿಯಾದ ಕಾನ್ಸುಲ್ ಜನರಲ್ ಹಿಲರಿ ಮೆಕ್ ಗೀಚಿ, ಬ್ರಿಟಿಷ್ ಡೆಪ್ಯುಟಿ ಹೈಕಮಿಷನರ್ ಚಂದ್ರು ಐಯ್ಯರ್, ಅಸ್ತ್ರ ಸ್ಟುಡಿಯೋಸ್‌ನ ಸ್ಥಾಪಕರಾದ ಬಿರೆನ್ ಗೋಸ್, ಪುನರ್‌ಯುಗ ಆರ್ಟ್ ವಿಸನ್‌ ಪ್ರೈ.ಲಿಮಿಟೆಡ್‌ನ ಸ್ಥಾಪಕರಾದ ಆಶಿಶ್ ಕುಲಕರ್ಣಿ ಸೇರಿದಂತೆ ವಿವಿಧ ಕಂಪನಿಗಳ ಪ್ರತಿನಿಧಿಗಳು, ಟೆಕ್ ದಿಗ್ಗಜರು, ತಂತ್ರಜ್ಞರು ಉಪಸ್ಥಿತರಿದ್ದರು.