ಬಂಟ್ವಾಳ ತಾಲೂಕಿನ ವೀರಕಂಭ ಗ್ರಾಮ ಪಂಚಾಯತ್ ನ 2024-25 ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮ ಸಭೆ ಮಂಗಳಪದವು ಪರಿಸರದಲ್ಲಿ ಕಾರ್ಯನಿರ್ವಹಿಸುತ್ತಿರುವ ಅನಧಿಕೃತ ಅಂಗಡಿಗಳಿಂದ ಆಪ್ತ ವಸೂಲಿ ಆರೋಪದಿಂದಾಗಿ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಗ್ರಾಮಸ್ಥರ ವಾಗ್ವಾದ ದಿಂದಾಗಿ ಸಭೆಯನ್ನು ಅರ್ಧದಲ್ಲಿ ರದ್ದು ಮಾಡಲಾಯಿತು.

ಗ್ರಾಮ ಸಭೆಯ ಮಾರ್ಗದರ್ಶಿ ಅಧಿಕಾರಿಯಾಗಿ ಆಗಮಿಸಿದ್ದ ವಿಟ್ಲ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಭಾಸ್ಕರ್ ಜೆ. ಸಭೆ ಸಭೆಯನ್ನು ರದ್ದುಪಡಿಸಿದರು.

ವೀರಕಂಭ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಲಲಿತಾ ರವರ ಅಧ್ಯಕ್ಷತೆಯಲ್ಲಿ ಸರಕಾರಿ ಪ್ರಾಥಮಿಕ ಶಾಲೆ ಮಜಿ ವೀರಕಂಭ ಇಲ್ಲಿ ಆರಂಭವಾದ ಗ್ರಾಮ ಸಭೆಯ ಮಾರ್ಗದರ್ಶಿ ಅಧಿಕಾರಿಯಾಗಿ ಆಗಮಿಸಿದ್ದ ವಿಟ್ಲ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಭಾಸ್ಕರ್ ಜೆ. ಸಭೆ ಸಭೆಯನ್ನು ರದ್ದುಪಡಿಸಿದರು.

ಮಜಿ ಶಾಲಾ ಮಕ್ಕಳ ನಾಡಗೀತೆಯಿಂದ ಪ್ರಾರಂಭವಾದ ಗ್ರಾಮ ಸಭೆಯು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪುಷ್ಪ ರವರ ಸ್ವಾಗತದ ಬಳಿಕ ಪಂಚಾಯತ್ ಕಾರ್ಯದರ್ಶಿ ಸವಿತಾ ರವರು ಪಂಚಾಯಿತನ ಜುಲೈ ತಿಂಗಳ 2024ರಗಿನ ಜಮ ಹಾಗೂ ಖರ್ಚಿನ ವರದಿ ಯಾಚಿಸಿದ ಬಳಿಕ ಗ್ರಾಮಸ್ಥರು ಹಾಗೂ ಪಂಚಾಯತ್ ಸದಸ್ಯರುಗಳ ಮಧ್ಯೆ ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಅನಧಿಕೃತ ಅಂಗಡಿಗನ್ನು ತೆರವು ಮಾಡುವ ವಿಚಾರದಲ್ಲಿ ವಾಗ್ವಾದ ಉಂಟಾಯಿತು. ಹಾಗೂ ಪಂಚಾಯತಿನ ಮೇಲೆ ಆಪ್ತ ವಸೂಲಿ ಅಪವಾದವನ್ನು ಮಾಡಿದ್ದು, ಪರಸ್ಪರ ವಾಗ್ವದ್ವಕ್ಕೆ ಕಾರಣವಾಯಿತು.

ವೀರಕಂಭ ಗ್ರಾಮ ಪಂಚಾಯತ್ ನ 2024-25 ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮ ಸಭೆ

ಗ್ರಾಮ ಸಭೆಗೆ ಹೆಚ್ಚಿನ ಎಲ್ಲಾ ಇಲಾಖೆಯ ಅಧಿಕಾರಿಗಳು ಆಗಮಿಸಿದ್ದು ಸಭೆಯು ಅರ್ಧದಲ್ಲೇ ಮೊಟಕುಗೊಂಡ ಕಾರಣ ಯಾವುದೇ ಇಲಾಖೆ ಅವರು ಮಾಹಿತಿ ನೀಡಲು ಸಾಧ್ಯವಾಗಲಿಲ್ಲ.