ಮಂಗಳೂರು :ಯೆನೆಪೋಯ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯದ ದಂತ ವೈದ್ಯರಾದ ಡಾ. ಅಖ್ತರ್ ಹುಸೈನ್ ಅವರಿಗೆ ದಂತ ವೈದ್ಯಕೀಯ ಕ್ಷೇತ್ರದಲ್ಲಿ ಸಲ್ಲಿಸಿರುವ ಜೀವನಮಾನ ಸಾಧನೆ ಮತ್ತು ಅತ್ಯಮೂಲ್ಯ ಕೊಡುಗೆಗಾಗಿ ರಾಯಲ್ ಕಾಲೇಜು ಒಫ್ ಫಿಶಿಷನ್ ಆಂಡ್ ಸರ್ಜನ್ (ಎಫ್ ಡಿ ಎಸ್ ಆರ್ ಸಿ ಪಿ ಎಸ್), ಗ್ಲಾಸ್ಗೋ, ಯುನೈಟೆಡ್ ಕಿಂಗ್ ಡಮ್ ಪದವಿ ಪ್ರದಾನ ಮಾಡಿದೆ.

ಈ ಅತ್ಯುನ್ನತ ಪದವಿಯನ್ನು ಅವರು ದಂತ ವೈದ್ಯಕೀಯ ಕ್ಷೇತ್ರದಲ್ಲಿ ಸಾಧಿಸಿರುವ ಸಾಧನೆ ಮತ್ತು ಅತ್ಯಮೂಲ್ಯ ವೃತ್ತಿ ಸೇವೆಗಾಗಿ ನೀಡಲಾಗಿದೆ.

ಎಫ್ ಡಿ ಎಸ್ ಆರ್ ಸಿ ಪಿ ಎಸ್ ಅತ್ಯುನ್ನತ ಪದವಿಯು  ಆರೋಗ್ಯ ರಕ್ಷಣೆ ಮತ್ತು ದಂತ ಆರೋಗ್ಯದ ಕ್ಷೇತ್ರದಲ್ಲಿ ವ್ಯಕ್ತಿಗತವಾಗಿ ಸಲ್ಲಿಸಲಾಗುವ ವೃತ್ತಿ ನೈಪುಣ್ಯತೆ, ಪರಿಣತಿ ಹಾಗೂ ಬದ್ಧತೆಯನ್ನು ಪರಿಗಣಿಸಿ ನೀಡಲಾಗುವ ಪ್ರತಿಷ್ಟಿತ ಪದವಿಯಾಗಿದೆ.

ಡಾ| ಅಖ್ತರ್ ಹುಸೈನ್ ದಂತ ವೈದ್ಯಕೀಯ ಕ್ಷೇತ್ರದಲ್ಲಿ ದಂತ ರೋಗಿಗಳ ಆರೈಕೆ ಮತ್ತು ಅತ್ಯುನ್ನತ ಶ್ರೇಣಿಯ ಸೇವೆ ಗುರುತಿಸಿ ಪರಿಗಣಿಸಲಾಗಿದೆ.

ಯೆನೆಪೋಯ ಶಿಕ್ಷಣ ಸಂಸ್ಥೆಯಲ್ಲಿ ಅವರು ನಿರಂತರವಾಗಿ  ನಡೆಸಿಕೊಂಡು ಬಂದಿರುವ ಸಾಮಾಜಿಕ ಸೇವೆ , ಶಿಕ್ಷಣ ಹಾಗೂ ಸಂಶೋಧನೆ ಎಲ್ಲರಿಗೂ ಆದರ್ಶಪ್ರಾಯವಾಗಿದೆ.