ಬಂಟ್ವಾಳ ಐಸಿರಿ ನ್ಯೂಸ್
  • ಸುದ್ದಿ
  • ಬಂಟ್ವಾಳ
  • ರಾಷ್ಟ್ರೀಯ
  • ರಾಜ್ಯ
  • ಜಿಲ್ಲೆ

Select Page

ಮಧ್ಯಪ್ರಾಚ್ಯದಲ್ಲಿ ಭಾರೀ ಯುದ್ಧ ವಿಮಾನಗಳ ನಿಯೋಜನೆ – ಇರಾನ್‌ ಮೇಲೆ ಯಾವುದೇ ಸಮಯದಲ್ಲಿ ಅಮೆರಿಕ ದಾಳಿ ಸಾಧ್ಯತೆ

Posted by Bantwala Isiri News | Feb 19, 2026 | ಬಂಟ್ವಾಳ | 0 |

ಮಧ್ಯಪ್ರಾಚ್ಯದಲ್ಲಿ ಭಾರೀ ಯುದ್ಧ ವಿಮಾನಗಳ ನಿಯೋಜನೆ – ಇರಾನ್‌ ಮೇಲೆ ಯಾವುದೇ ಸಮಯದಲ್ಲಿ ಅಮೆರಿಕ ದಾಳಿ ಸಾಧ್ಯತೆ

ವಾಷಿಂಗ್ಟನ್‌: ಇರಾನ್‌ (Iran) ಮೇಲೆ ಅಮೆರಿಕ(USA) ಯಾವುದೇ ಸಮಯದಲ್ಲಿ ದಾಳಿ ನಡೆಸುವ ಸಾಧ್ಯತೆಯಿದೆ. ಅಮೆರಿಕ ತನ್ನ ಬಳಿ ಇರುವ ಅತ್ಯಾಧುನಿಕ ಎಫ್‌-35, ಎಫ್‌-16 ಯುದ್ಧ ವಿಮಾನಗಳನ್ನು (Fighter Jet) ಈಗ ಮಧ್ಯಪ್ರಾಚ್ಯಕ್ಕೆ ಕಳುಹಿಸಿದೆ. ಇದನ್ನೂ ಓದಿ :  ರೂ.2 ಕೋಟಿ ಅನುದಾನದಲ್ಲಿ ಡಾಮರೀಕರಣಗೊಂಡ ಶ್ರೀ ಕಾರಿಂಜೇಶ್ವರ ದೇವಸ್ಥಾನದ ಸಂಪರ್ಕ ರಸ್ತೆ ಉದ್ಘಾಟನೆ

2003ರ ಇರಾಕ್‌(Iraq) ವಿರುದ್ಧ ದಾಳಿಗೆ ನಿಯೋಜನೆಗೊಂಡಿದ್ದಕ್ಕಿಂತಲೂ ಹೆಚ್ಚಿನ ಸಂಖ್ಯೆಯ ಯುದ್ಧ ವಿಮಾನಗಳನ್ನು ಅಮೆರಿಕ ಈಗ ಮಧ್ಯಪ್ರಾಚ್ಯಕ್ಕೆ ಕಳುಹಿಸಿಕೊಟ್ಟಿದೆ. ಯುದ್ಧ ವಿಮಾನಗಳನ್ನು ತುಂಬಿದ ಎರಡನೇ ವಿಮಾನವಾಹಕ ನೌಕೆಯೂ ಈಗ ಈ ಪ್ರದೇಶಕ್ಕೆ ಬರುತ್ತಿದೆ ಎಂದು ಅಮೆರಿಕದ ವಾಲ್‌ಸ್ಟ್ರೀಟ್‌ ಜರ್ನಲ್‌ ವರದಿ ಮಾಡಿದೆ.

ವರದಿಯ ಪ್ರಕಾರ ಅಮೆರಿಕ ದಾಳಿ ನಡೆಸಲು ಸನ್ನದ್ಧ ರೀತಿಯಲ್ಲಿದ್ದು ಅನುಮತಿಗಾಗಿ ಕಾಯುತ್ತಿದೆ. ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ದಾಳಿಗೆ ಅನುಮತಿ ನೀಡಿದರೆ ದಾಳಿ ನಡೆಸಲಿದೆ. ಇರಾನ್ ಮೇಲೆ ದಾಳಿ ಮಾಡಬೇಕೆ ಅಥವಾ ಬೇಡವೇ ಎನ್ನುವುದನ್ನು ಟ್ರಂಪ್‌ ಇನ್ನೂ ನಿರ್ಧಾರ ಮಾಡಿಲ್ಲ. ಅನುಮತಿ ನೀಡಿದರೆ ಹಾನಿಯಾಗಿರುವ ಪರಮಾಣು ಸ್ಥಾವರ ಮತ್ತು ಕ್ಷಿಪಣಿಗಳನ್ನಿ ಸಂಗ್ರಹಿಸಿಟ್ಟಿರುವ ಜಾಗಗಳನ್ನು ನಾಶ ಮಾಡಲಿದೆ. ಕೊನೆಗೆ ಅಲ್ಲಿರುವ ಆಡಳಿತವನ್ನು ಉರುಳಿಸುವ ಸಾಧ್ಯತೆಯಿದೆ.

ಫ್ಲೈಟ್-ಟ್ರ್ಯಾಕಿಂಗ್ ಡೇಟಾದ ಪ್ರಕಾರ ಡಜನ್‌ಗಟ್ಟಲೇ ಯುಎಸ್ ಏರ್ ಫೋರ್ಸ್ ಫೈಟರ್ ಜೆಟ್‌ಗಳು, ಕಾರ್ಗೋ ವಿಮಾನಗಳು ಮತ್ತು ಹಲವು ಬೆಂಬಲ ವಿಮಾನಗಳು ಜೋರ್ಡಾನ್‌ನ ಮುವಾಫಾಕ್ ಸಾಲ್ಟಿ ವಾಯುನೆಲೆ ಮತ್ತು ಸೌದಿ ಅರೇಬಿಯಾದ ಪ್ರಿನ್ಸ್ ಸುಲ್ತಾನ್ ವಾಯುನೆಲೆಗೆ ಸ್ಥಳಾಂತರಗೊಂಡಿರುವುದನ್ನು ತೋರಿಸುತ್ತದೆ.

ಈ ಪೈಕಿ ಕೆಲವೊಂದು ಸಾಗುವ ದಾರಿಯಲ್ಲಿದೆ. ಮುಖ್ಯವಾಗಿ F-35s, F-15s, F-16s, F-22 ರಾಪ್ಟರ್ ಸ್ಟೆಲ್ತ್ ಫೈಟರ್ ಜೆಟ್‌ಗಳು, E-3 ಏರ್‌ಬೋರ್ನ್ ವಾರ್ನಿಂಗ್ ಮತ್ತು ಕಂಟ್ರೋಲ್ ಸಿಸ್ಟಮ್ ಮತ್ತು E-11 ಬ್ಯಾಟಲ್‌ಫೀಲ್ಡ್ ಏರ್‌ಬೋರ್ನ್ ಕಮ್ಯುನಿಕೇಷನ್ಸ್ ನೋಡ್ ವಿಮಾನಗಳು ಈಗ ಆಕಾಶದಲ್ಲಿ ಸಾಗುತ್ತಿವೆ.

ಅಮೆರಿಕದ ನೌಕಾಪಡೆಯು ಮಧ್ಯಪ್ರಾಚ್ಯ ಮತ್ತು ಪೂರ್ವ ಮೆಡಿಟರೇನಿಯನ್ ಸಮುದ್ರದಲ್ಲಿ 13 ಹಡಗುಗಳನ್ನು ನಿಯೋಜಿಸಿದೆ ಎಂದು ವರದಿಯಾಗಿದೆ. ಯುಎಸ್ಎಸ್ ಅಬ್ರಹಾಂ ಲಿಂಕನ್ ವಿಮಾನವಾಹಕ ನೌಕೆ ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿಗಳ ವಿರುದ್ಧ ರಕ್ಷಿಸುವ ಸಾಮರ್ಥ್ಯವಿರುವ ಒಂಬತ್ತು ವಿಧ್ವಂಸಕ ನೌಕೆಗಳು ಸೇರಿವೆ. ಎರಡನೇ ವಿಮಾನವಾಹಕ ನೌಕೆ ಯುಎಸ್ಎಸ್ ಜೆರಾಲ್ಡ್ ಆರ್. ಫೋರ್ಡ್ ಮತ್ತು ನಾಲ್ಕು ವಿಧ್ವಂಸಕ ನೌಕೆಗಳು ಸಹ ಈ ಪ್ರದೇಶಕ್ಕೆ ತೆರಳುತ್ತಿವೆ.

Share:

Your Rating:

Star Star Star Star Star
Previousಫಾಲ್ಗುಣಿ ನದಿಗೆ ಕೈಗಾರಿಕಾ ವಿಷಕಾರಿ ತ್ಯಾಜ್ಯ ಸೇರ್ಪಡೆ : ಜನವಸತಿ ಪ್ರದೇಶಗಳಲ್ಲಿ ಆರೋಗ್ಯದ ಆತಂಕ – ತಕ್ಷಣ ಕ್ರಮ ಕೈಗೊಳ್ಳುವಂತೆ ‘ಸುರಾಜ್ಯ ಅಭಿಯಾನ’ದಿಂದ ಜಿಲ್ಲಾಧಿಕಾರಿಗಳಿಗೆ ಮನವಿ

About The Author

Bantwala Isiri News

Bantwala Isiri News

News Bantwala Isiri News was established on 01 Oct 2023. With a decade of experience in Journalism field, we are providing daily news updates to our readers. News from political corridors, daily events, sports, business, science, technology is published on the website. With an aim to support readers from Karnataka we are providing information about job vacancies in different companies and government departments. WRITE IN BANTWALA ISIRI NEWS Do you have the skill of writing articles, stories, poems, arts? Then we will give an opportunity to publish your writings in Bantwala Isiri News. Send your writings to bantwalaisirinews@gmail.com CONTACT US FOR ADVERTISEMENT Mail us your advertisement, address and phone number to bantwalaisirinews@gmail.com

Related Posts

ಇಂದು ಸರ್ಕಾರಿ, ಖಾಸಗಿ ಆಸ್ಪತ್ರೆಗಳ ಓಪಿಡಿ ಬಂದ್ – ಹೊರರೋಗಿಗಳಿಗಿಲ್ಲ ಚಿಕಿತ್ಸೆ

ಇಂದು ಸರ್ಕಾರಿ, ಖಾಸಗಿ ಆಸ್ಪತ್ರೆಗಳ ಓಪಿಡಿ ಬಂದ್ – ಹೊರರೋಗಿಗಳಿಗಿಲ್ಲ ಚಿಕಿತ್ಸೆ

17 August 2024

ಆಂಧ್ರಪ್ರದೇಶದ ಪುಟ್ಟಪರ್ತಿಯ ಲೇಪಾಕ್ಷಿಯಲ್ಲಿರುವ ವೀರಭದ್ರ ದೇವಸ್ಥಾನದಲ್ಲಿ ಪ್ರಧಾನಮಂತ್ರಿ ದರ್ಶನ ಮತ್ತು ಪೂಜೆ ನೆರವೇರಿಸಿದರು

ಆಂಧ್ರಪ್ರದೇಶದ ಪುಟ್ಟಪರ್ತಿಯ ಲೇಪಾಕ್ಷಿಯಲ್ಲಿರುವ ವೀರಭದ್ರ ದೇವಸ್ಥಾನದಲ್ಲಿ ಪ್ರಧಾನಮಂತ್ರಿ ದರ್ಶನ ಮತ್ತು ಪೂಜೆ ನೆರವೇರಿಸಿದರು

16 January 2024

1 ಲಕ್ಷಕ್ಕೂ ಹೆಚ್ಚು ನೇಮಕಾತಿ ಪತ್ರಗಳನ್ನು ವಿತರಿಸಿದ ಪ್ರಧಾನಿ

1 ಲಕ್ಷಕ್ಕೂ ಹೆಚ್ಚು ನೇಮಕಾತಿ ಪತ್ರಗಳನ್ನು ವಿತರಿಸಿದ ಪ್ರಧಾನಿ

12 February 2024

ಜೂ. 11 ರಂದು ಆಕಾಶದಲ್ಲಿ ಗೋಚರಿಸಲಿದ್ದಾನೆ “ಸ್ಟ್ರಾಬೆರಿ ಚಂದ್ರ”

ಜೂ. 11 ರಂದು ಆಕಾಶದಲ್ಲಿ ಗೋಚರಿಸಲಿದ್ದಾನೆ “ಸ್ಟ್ರಾಬೆರಿ ಚಂದ್ರ”

10 June 2025

Leave a reply Cancel reply

Your email address will not be published. Required fields are marked *

ಇತ್ತೀಚಿನ ವರದಿಗಳು

  • ಮಧ್ಯಪ್ರಾಚ್ಯದಲ್ಲಿ ಭಾರೀ ಯುದ್ಧ ವಿಮಾನಗಳ ನಿಯೋಜನೆ – ಇರಾನ್‌ ಮೇಲೆ ಯಾವುದೇ ಸಮಯದಲ್ಲಿ ಅಮೆರಿಕ ದಾಳಿ ಸಾಧ್ಯತೆ
    ಮಧ್ಯಪ್ರಾಚ್ಯದಲ್ಲಿ ಭಾರೀ ಯುದ್ಧ ವಿಮಾನಗಳ ನಿಯೋಜನೆ – ಇರಾನ್‌ ಮೇಲೆ ಯಾವುದೇ ಸಮಯದಲ್ಲಿ ಅಮೆರಿಕ ದಾಳಿ ಸಾಧ್ಯತೆ
  • ಫಾಲ್ಗುಣಿ ನದಿಗೆ ಕೈಗಾರಿಕಾ ವಿಷಕಾರಿ ತ್ಯಾಜ್ಯ ಸೇರ್ಪಡೆ : ಜನವಸತಿ ಪ್ರದೇಶಗಳಲ್ಲಿ ಆರೋಗ್ಯದ ಆತಂಕ – ತಕ್ಷಣ ಕ್ರಮ ಕೈಗೊಳ್ಳುವಂತೆ ‘ಸುರಾಜ್ಯ ಅಭಿಯಾನ’ದಿಂದ ಜಿಲ್ಲಾಧಿಕಾರಿಗಳಿಗೆ ಮನವಿ
    ಫಾಲ್ಗುಣಿ ನದಿಗೆ ಕೈಗಾರಿಕಾ ವಿಷಕಾರಿ ತ್ಯಾಜ್ಯ ಸೇರ್ಪಡೆ : ಜನವಸತಿ ಪ್ರದೇಶಗಳಲ್ಲಿ ಆರೋಗ್ಯದ ಆತಂಕ – ತಕ್ಷಣ ಕ್ರಮ ಕೈಗೊಳ್ಳುವಂತೆ ‘ಸುರಾಜ್ಯ ಅಭಿಯಾನ’ದಿಂದ ಜಿಲ್ಲಾಧಿಕಾರಿಗಳಿಗೆ ಮನವಿ
  • ನರೇಗಾದಲ್ಲಿರುವ ಕುಂದುಕೊರತೆ ನಿವಾರಿಸಿ ಯೋಜನೆ ಪರಿಷ್ಕರಿಸಲಾಗಿದೆ -ಶಾಸಕ ರಾಜೇಶ್‌ ನಾಯ್ಕ್‌
    ನರೇಗಾದಲ್ಲಿರುವ ಕುಂದುಕೊರತೆ ನಿವಾರಿಸಿ ಯೋಜನೆ ಪರಿಷ್ಕರಿಸಲಾಗಿದೆ -ಶಾಸಕ ರಾಜೇಶ್‌ ನಾಯ್ಕ್‌
  • ಭಾರತಕ್ಕೆ ಆಗಮಿಸಿದ ಫ್ರಾನ್ಸ್ ಅಧ್ಯಕ್ಷರನ್ನು ಸ್ವಾಗತಿಸಿದ ಪ್ರಧಾನಮಂತ್ರಿ, ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವ ಪ್ರಸ್ತಾಪ
    ಭಾರತಕ್ಕೆ ಆಗಮಿಸಿದ ಫ್ರಾನ್ಸ್ ಅಧ್ಯಕ್ಷರನ್ನು ಸ್ವಾಗತಿಸಿದ ಪ್ರಧಾನಮಂತ್ರಿ, ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವ ಪ್ರಸ್ತಾಪ
  • ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯ ಭಾರತ ಮಂಟಪದಲ್ಲಿ ಇಂಡಿಯಾ ಎಐ ಇಂಪ್ಯಾಕ್ಟ್ ಎಕ್ಸ್‌ ಪೋ 2026 ಅನ್ನು ಉದ್ಘಾಟಿಸಿದರು.
    ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯ ಭಾರತ ಮಂಟಪದಲ್ಲಿ ಇಂಡಿಯಾ ಎಐ ಇಂಪ್ಯಾಕ್ಟ್ ಎಕ್ಸ್‌ ಪೋ 2026 ಅನ್ನು ಉದ್ಘಾಟಿಸಿದರು.
  • ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಹಾಗೂ ಮಂಗಳೂರು ನಗರ ಪೊಲೀಸ್‌ ಅಧಿಕಾರಿ ಮತ್ತು ಸಿಬ್ಬಂದಿಗಳಿಗಾಗಿ  ನಿರ್ಮಿಸಲಾದ 12 ಪೊಲೀಸ್ ವಸತಿ ಗೃಹಗಳ ಉದ್ಘಾಟನೆ ಹಾಗೂ 54 ವಸತಿಗೃಹಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ
    ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಹಾಗೂ ಮಂಗಳೂರು ನಗರ ಪೊಲೀಸ್‌ ಅಧಿಕಾರಿ ಮತ್ತು ಸಿಬ್ಬಂದಿಗಳಿಗಾಗಿ ನಿರ್ಮಿಸಲಾದ 12 ಪೊಲೀಸ್ ವಸತಿ ಗೃಹಗಳ ಉದ್ಘಾಟನೆ ಹಾಗೂ 54 ವಸತಿಗೃಹಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ
  • ಭಾರತದಲ್ಲಿನ ಅಮೆರಿಕನ್ ರಾಯಭಾರಿ ಸರ್ಜಿಯೊ ಗೋರ್ ಅವರು  ಸಿ.ಎಂ.ಭೇಟಿ
    ಭಾರತದಲ್ಲಿನ ಅಮೆರಿಕನ್ ರಾಯಭಾರಿ ಸರ್ಜಿಯೊ ಗೋರ್ ಅವರು ಸಿ.ಎಂ.ಭೇಟಿ
  • ರೈತ ಸಂಘಟನೆಗಳ ಮುಖಂಡರು ಮತ್ತು ಕೃಷಿ ಸಂಸ್ಥೆಗಳ ಪ್ರತಿನಿಧಿಗಳ ಜೊತೆ ಸಿ.ಎಂ. ಸಭೆ
    ರೈತ ಸಂಘಟನೆಗಳ ಮುಖಂಡರು ಮತ್ತು ಕೃಷಿ ಸಂಸ್ಥೆಗಳ ಪ್ರತಿನಿಧಿಗಳ ಜೊತೆ ಸಿ.ಎಂ. ಸಭೆ
  • ಅಸ್ಸಾಂನ ದಿಬ್ರುಗಢದಲ್ಲಿ ಈಶಾನ್ಯ ಭಾರತದ ಮೊದಲ ತುರ್ತು ಲ್ಯಾಂಡಿಂಗ್ ಸೌಲಭ್ಯ (ELF) ಉದ್ಘಾಟಿಸಿದ ಪ್ರಧಾನಮಂತ್ರಿ
    ಅಸ್ಸಾಂನ ದಿಬ್ರುಗಢದಲ್ಲಿ ಈಶಾನ್ಯ ಭಾರತದ ಮೊದಲ ತುರ್ತು ಲ್ಯಾಂಡಿಂಗ್ ಸೌಲಭ್ಯ (ELF) ಉದ್ಘಾಟಿಸಿದ ಪ್ರಧಾನಮಂತ್ರಿ
  • ವಿದೇಶದಲ್ಲೇ ಕುಳಿತು ಮಂಗಳೂರು ಯುವತಿಯರಿಗೆ ಗಾಳ – ಗಂಡನ ಪ್ರಣಯದಾಟ ಬಿಚ್ಚಿಟ್ಟ ಪತ್ನಿ
    ವಿದೇಶದಲ್ಲೇ ಕುಳಿತು ಮಂಗಳೂರು ಯುವತಿಯರಿಗೆ ಗಾಳ – ಗಂಡನ ಪ್ರಣಯದಾಟ ಬಿಚ್ಚಿಟ್ಟ ಪತ್ನಿ

Designed by Elegant Themes | Powered by WordPress

error: Content is protected !!