ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ.)ಬಂಟ್ವಾಳ ಇದರ ವಗ್ಗ ವಲಯದ ಮಧ್ವ ಕಾರ್ಯ ಕ್ಷೇತ್ರದ ದೀಪಾ ಶ್ರೀ ಸಂಘದ ಸದಸ್ಯರಾದ ಖತೀಜಮ್ಮ ಅವರ ಮನೆಗೆ ವಿದ್ಯುತ್ ತಗಲಿ ಮನೆಗೆ ಹಾನಿಯಾಗಿದ್ದು, ಈ ನಿಮಿತ್ತ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಪರಿಹಾರ ಸಹಾಯಧನ ಮಂಜೂರಾಗಿದು ಅದರ ಚೆಕ್ ಹಸ್ತಾಂತರ ಮಾಡಲಾಯಿತು.

ಈ ಸಂದರ್ಭದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಬಂಟ್ವಾಳ ತಾಲೂಕು ಯೋಜನಾಧಿಕಾರಿ ಬಾಲಕೃಷ್ಣ, ವಲಯ ಮೇಲ್ವಿಚಾರಕಿ ಸವಿತಾ, ಮಧ್ವ ಒಕ್ಕೂಟದ ಅಧ್ಯಕ್ಷರಾದ ಪವಿತ್ರ, ಸೇವಾ ಪ್ರತಿನಿಧಿ ಸುಮಿತ್ರ, ಹಾಗು ಶೌರ್ಯ ವಿಪತ್ತು ನಿರ್ವಹಣಾ ಘಟಕ ಮಾಸ್ಟರ್ ಪ್ರಕಾಶ್  ಉಪಸ್ಥಿತರಿದ್ದರು.