ಮೈಸೂರು ತಾಲ್ಲೂಕಿನ ಜಯಪುರದ ಕೆ.ಸಾಲುಂಡಿ ಗ್ರಾಮದಲ್ಲಿ ಕಲುಷಿತ ನೀರು ಕುಡಿದು ಮೃತಪಟ್ಟ ಕಾಂತರಾಜು ಅವರ ನಿವಾಸಕ್ಕೆ ಸಿ.ಎಂ. ಸಿದ್ಧರಾಮಯ್ಯ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಬಳಿಕ ರಾಜ್ಯ ಸರ್ಕಾರದ ವತಿಯಿಂದ ಮೃತರ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ಹಾಗೂ ಮೃತ ಕಾಂತರಾಜು ಅವರ ಸಹೋದರ ರವಿಗೆ ಉದ್ಯೋಗ ನೀಡಲಾಗುವುದು ಎಂದರು.
ಮೈಸೂರಿನ ಕೆ.ಸಾಲುಂಡಿ ಗ್ರಾಮದಲ್ಲಿ ಕಲುಷಿತ ನೀರು ಕುಡಿದು ಅಸ್ವಸ್ಥಗೊಂಡು ಚಿಕಿತ್ಸೆ ಪಡೆಯುತ್ತಿರುವ ಮಹೇಶ್ ಕಾಳೇಗೌಡ ಅವರನ್ನು ಸಿ.ಎಂ. ಸಿದ್ಧರಾಮಯ್ಯ ಭೇಟಿಯಾಗಿ ಆರೋಗ್ಯ ವಿಚಾರಿಸಿ, ಶೀಘ್ರ ಗುಣಮುಖರಾಗುವಂತೆ ಹಾರೈಸಿದರು.
ಮೈಸೂರು ಯರಗನಹಳ್ಳಿಯಲ್ಲಿ ಸಿಲಿಂಡರ್ ಸೋರಿಕೆಯಿಂದ ಇಡೀ ಕುಟುಂಬ ದುರಂತ ಸಾವಿಗೀಡಾಗಿತ್ತು. ನಿಜಕ್ಕೂ ಈ ಘಟನೆ ದುಃಖಕರವಾದುದ್ದು.
ಇಂದು ಮೃತರ ಸಂಬಂಧಿಗಳನ್ನು ಸಿ.ಎಂ. ಸಿದ್ಧರಾಮಯ್ಯ ಅವರು ಭೇಟಿಮಾಡಿ ಸಾಂತ್ವನ ಹೇಳಿದರು. ಮೃತರಿಗೆ ತಲಾ 3 ಲಕ್ಷ ರೂ.ನಂತೆ ನತದೃಷ್ಟ ಕುಟುಂಬಕ್ಕೆ 12 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದರು.