ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಿರುವ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯನ್ನು ಕೇಂದ್ರ ಸಚಿವರಾದ ಭೂಪೇಂದ್ರ ಯಾದವ್, ಕೇಂದ್ರ ಸಂಸದೀಯ ಮಂಡಳಿ ಹಾಗೂ ಚುನಾವಣಾ ಸಮಿತಿ ಸದಸ್ಯರಾದ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರುಗಳ ನೇತೃತ್ವದಲ್ಲಿ ಉದ್ಘಾಟಿಸಲಾಯಿತು.
ರಾಷ್ಟ್ರ ತತ್ವದ ಉದಾತ್ತ ಉದ್ದೇಶದಿಂದ ಜನ್ಮ ತಾಳಿದ ಬಿಜೆಪಿ ಪಕ್ಷ ಸಂಘಟನೆಗೆ ಅನೇಕ ಹಿರಿಯರು, ಕಾರ್ಯಕರ್ತರು ತ್ಯಾಗ ಬಲಿದಾನಗಳನ್ನು ಮಾಡಿದ್ದಾರೆ, ಅವರೆಲ್ಲರ ಹೋರಾಟದ ಫಲ ಇವತ್ತು ಜಗತ್ತಿನಲ್ಲೇ ಬಲಿಷ್ಠ ರಾಜಕೀಯ ಪಕ್ಷವಾಗಿ ಸಂಘಟನೆಗೊಂಡಿದೆ.
ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಬಡವರ, ಹಿಂದುಳಿದವರ ಕಲ್ಯಾಣದ ಮೂಲಕ ಭಾರತ ಜಗತ್ತಿನಲ್ಲಿ ನಂಬರ್ 1 ಸ್ಥಾನಕ್ಕೆ ತಲುಪುತ್ತಿದೆ. ಸದೃಢ ಭಾರತ ನಿರ್ಮಾಣವಾಗಲು ಈ ಬಾರಿ ಮಗದೊಮ್ಮೆ ನರೇಂದ್ರ ಮೋದಿಯವರನ್ನು ಪ್ರಧಾನಿಯಾಗಿಸುವುದರ ಸಂಕಲ್ಪ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ, ಜಗದೀಶ್ ಶೆಟ್ಟರ್, ವಿರೋಧ ಪಕ್ಷ ನಾಯಕ ಆರ್. ಆಶೋಕ, ಮಾಜಿ ಉಪಮುಖ್ಯಮಂತ್ರಿಗಳಾದ ಈಶ್ವಪ್ಪ , ಗೋವಿಂದ ಕಾರಜೋಳ್, , ಶ್ರೀ @drashwathcn, ನಿಕಟಪೂರ್ವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, BJP , ಕೇಂದ್ರದ ರಾಜ್ಯ ಖಾತೆ ಸಚಿವರುಗಳಾದ ಶ್ರೀ @bhagwantkhuba, ಶ್ರೀ @Rajeev_GoI , ವಿಧಾನ ಪರಿಷತ್ ವಿರೋಧ ಪಕ್ಷ ನಾಯಕರಾದ ಶ್ರೀ @KotasBJP, ಪಕ್ಷದ ಪದಾಧಿಕಾರಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.