ಬಿಜೆಪಿ ಬಂಟ್ವಾಳ ಮಂಡಲದ ಅಧ್ಯಕ್ಷರಾಗಿ ಚೆನ್ನಪ್ಪ ಕೋಟ್ಯಾನ್ ಅವರನ್ನು ಅಯ್ಕೆ ಮಾಡಲಾಗಿದೆ.

ಮಾಜಿ ಜಿ.ಪಂ.ಸದಸ್ಯ ಚೆನ್ನಪ್ಪ ಕೋಟ್ಯಾನ್ ಅವರು ಬಂಟ್ವಾಳ ಮಂಡಲದ ಅಧ್ಯಕ್ಷರಾಗಿ ಎರಡನೇ ಬಾರಿ ಆಯ್ಕೆಯಾಗಿದ್ದಾರೆ.

ಆರ್.ಎಸ್. ಎಸ್. ಕಾರ್ಯಕರ್ತನಾಗಿ ಸೇವೆ ಮಾಡಿದ ಅವರು ಅ ಬಳಿಕ ಬಿಜೆಪಿ ಪಕ್ಷದ ಸಕ್ರೀಯ ಕಾರ್ಯಕರ್ತನಾಗಿ ವಿವಿಧ ಮಜಲುಗಳಲ್ಲಿ ಕೆಲಸ ಮಾಡಿದ ಓರ್ವ ಅನುಭವಿ.

ತಾ. ಪಂ.ಸದಸ್ಯರಾಗಿ, ಮಂಡಲದ ಪ್ರಧಾನ ಕಾರ್ಯದರ್ಶಿಯಾಗಿ,

ಬಂಟ್ವಾಳ ಮಂಡಲದ ಅಧ್ಯಕ್ಷರಾಗಿ, ಜಿಲ್ಲಾ ಪಂ‌ಚಾಯತ್‌ ಸದಸ್ಯರಾಗಿ, ಕಲ್ಲಡ್ಕ ಶ್ರೀರಾಮ ಮಂದಿರದ ಅಧ್ಯಕ್ಷರಾಗಿ, ಕಲ್ಲಡ್ಕ ಪೂರ್ಲಿಪಾಡಿ ಶ್ರೀ ಅಣ್ಣಪ್ಪ ಪಂಜುರ್ಲಿ ಮಹಮ್ಮಾಯಿ ಅಮ್ಮನವರ ಸೇವಾ ಟ್ರಸ್ಟ್ ಅಧ್ಯಕ್ಷರಾಗಿ, ಕಲ್ಲಡ್ಕ ಶ್ರೀ ರಾಮ‌ವಿದ್ಯಾಕೇಂದ್ರದ ಅಡಳಿತ ಮಂಡಳಿಯ ಸದಸ್ಯರಾಗಿ ಅನುಭವ ಹೊಂದಿ ಬಿಜೆಪಿ ಕಾರ್ಯಕರ್ತನಾಗಿ ಗುರುತಿಸಿಕೊಂಡಿದ್ದಾರೆ.