ಬಂಟ್ವಾಳ: ತ್ಯಾಗ ಹಾಗೂ ಬಲಿದಾನದಿಂದಾಗಿ ಭಾರತಕ್ಕೆ ಸ್ವತಂತ್ರವು ಲಭಿಸಿದ್ದು, ವಿದ್ಯಾರ್ಥಿಗಳು ಇದರ ಮಹತ್ವವನ್ನುಅರಿತು ನಡೆಯಬೇಕು. ಇಂದು ವಿಶ್ವದಲ್ಲಿಯೇ ಭಾರತವುಅತ್ಯಂತ ವೇಗವಾಗಿ ಅಭಿವೃದ್ಧಿಗೊಳ್ಳುತ್ತಿದ್ದು, ಇನ್ನು ಕೆಲವೇ ವರ್ಷಗಳಲ್ಲಿ ಅಭಿವೃದ್ಧಿ ಹೊಂದಿದ ದೇಶಗಳ ಸಾಲಿನಲ್ಲಿ ನಮ್ಮದೇಶವು ನಿಲ್ಲುವುದರೊಂದಿಗೆ ವಿಶ್ವಕ್ಕೇ ಭಾರತವು ಮಾರ್ಗದರ್ಶನ ನೀಡುವ ಸಂದರ್ಭ ಬರಲಿದೆ ಹಾಗೂ ೨೦೪೭ರ ಹೊತ್ತಿಗೆದೇಶವು ವಿಕಸಿತ ಭಾರತವಾಗಲಿದ್ದು, ಈ ವರ್ಷದ ಸ್ವಾತಂತ್ರ್ಯೋತ್ಸವ ದಿನಾಚರಣೆಯು ಇದಕ್ಕೆ ಮುನ್ನುಡಿಯಾಗಲಿದೆ ಎಂದು ಎಸ್.ವಿ.ಎಸ್. ಕಾಲೇಜಿನ ಪ್ರಾಂಶುಪಾಲರಾದ ಡಾ.ಸುಯೋಗ ವರ್ಧನ್‌ಡಿ.ಎಮ್. ನುಡಿದರು.

ಅವರು ಶ್ರೀ ವೆಂಕಟರಮಣಸ್ವಾಮಿ ಪದವಿ ಹಾಗೂ ಪದವಿಪೂರ್ವಕಾಲೇಜಿನ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಸ್ವತಂತ್ರ ದಿನಾಚರಣೆಯಕಾರ್ಯಕ್ರಮದಲ್ಲಿಧ್ವಜಾರೋಹಣ ನೆರವೇರಿಸಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.

ವೇದಿಕೆಯಲ್ಲಿ ವಿದ್ಯಾರ್ಥಿಕ್ಷೇಮಪಾಲನಾ ಅಧಿಕಾರಿಗಳಾದ ಶ್ರೀ ಶಿವಣ್ಣ ಪ್ರಭು ಹಾಗೂ ಎಸ್.ವಿ.ಎಸ್. ಸಮೂಹ ಶಿಕ್ಷಣ ಸಂಸ್ಥೆಗಳ ಕ್ರೀಡಾ ಮೇಲ್ವಿಚಾರಕರಾದ ಶ್ರೀ ಮಹೇಶ್ ಶೆಟ್ಟಿ ಉಪಸ್ಥಿತರಿದ್ದರು. ಪದವಿ ಹಾಗೂ ಪದವಿ ಪೂರ್ವಕಾಲೇಜು ವಿದ್ಯಾರ್ಥಿನಿಯರುರಾಷ್ಟçಗೀತೆ, ಧ್ವಜಗೀತೆಗಳನ್ನು ಹಾಡಿದರು.ಧ್ವಜಾರೋಹಣಕಾರ್ಯಕ್ರಮದಲ್ಲಿ ಎನ್.ಸಿ.ಸಿ. ಹಾಗೂ ಎನ್.ಎಸ್.ಎಸ್. ವಿದ್ಯಾರ್ಥಿಗಳು, ಅಧ್ಯಾಪಕರು ಹಾಗೂ ಅಧ್ಯಾಪಕೇತರ ನೌಕರರು ಉಪಸ್ಥಿತರಿದ್ದರು. ಧ್ವಜಾರೋಹಣಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಸ್ವಚ್ಛತಾಕಾರ್ಯವು ನೆರವೇರಿತು.

ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸುದರ್ಶನ ಬಿ ಸ್ವಾಗತಿಸಿ, ಡಾ.ಕಾಶೀನಾಥ ಶಾಸ್ತಿç ಹೆಚ್.ವಿವಂದಿಸಿದರು. ಶ್ರೀ ಮನೋಹರ್‌ಎಸ್‌ದೊಡಮನಿ ನಿರೂಪಿಸಿದರು.