ಪುತ್ತೂರು : ವಿನಾಯಕ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ (ರಿ.) ಬಲ್ನಾಡು, ವಿನಾಯಕ ಆರ್ಟ್ಸ್ ಮತ್ತು ಸ್ಪೋರ್ಟ್ಸ್ ಕ್ಲಬ್ ಬಲ್ನಾಡು ವತಿಯಿಂದ ಫೆ.11ರಂದು ಬಲ್ನಾಡಿನ ವಿನಾಯಕ ಕ್ರೀಡಾಂಗಣದಲ್ಲಿ ನಡೆಯುವ “ವಿನಾಯಕ ಟ್ರೋಫಿ – 2024” ಪುರುಷರ ಗ್ರಾಮ ಸೀಮಿತ ಮಟ್ಟದ ಮುಕ್ತ ಹಾಗೂ ಬಲ್ನಾಡು ವಲಯ ಮಟ್ಟದ ಪ್ರೊ ಮಾದರಿಯ ಮ್ಯಾಟ್ ಕಬಡ್ಡಿ ಪಂದ್ಯಾಟದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಜ.14ರಂದು ಬಲ್ನಾಡು ಶ್ರೀ ಭಟ್ಟಿ ವಿನಾಯಕ ದೇವಸ್ಥಾನದಲ್ಲಿ ನಡೆಯಿತು.
ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಮುತ್ತಪ್ಪ ಗೌಡ ಕಾಂತಿಲ, ಭರತ್ ಚನಿಲ, ಅಚ್ಯುತ ಕೋಡಿಯಡ್ಕ, ಶರತ್ ಮುದಲಾಜೆ, ಗುರುರಾಜ್ ವಿನಾಯಕ ನಗರ, ಪುರುಷೋತ್ತಮ ಗೌಡ ಮುದಲಾಜೆ, ವಸಂತ ಮುದಲಾಜೆ, ರೂಪೇಶ್ ಬಲ್ನಾಡ್, ಪವನ್ ಬಲ್ನಾಡ್, ಪುನೀತ್ ಮುದಲಾಜೆ, ಯಶವಂತ ಕೋಡಿಯಡ್ಕ, ಮತ್ತು ವಿನಾಯಕ ಚಾರಿಟೇಬಲ್ ಟ್ರಸ್ಟ್ ರಿ. ನ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.