ಯೆನೆಪೋಯ ಡೆಂಟಲ್ ಕಾಲೇಜಿನ ವಿದ್ಯಾರ್ಥಿಗಳ ವಾರ್ಷಿಕ ದಿನ ಮತ್ತು ನೂತನ ವಿದ್ಯಾರ್ಥಿ ಪರಿಷತ್ ಸ್ಥಾಪನೆ ಕಾರ್ಯಕ್ರಮ ಕಾಲೇಜು ಸಭಾಂಗಣದಲ್ಲಿ ಮಾ.22ರಂದು ಡಾ. ಲಕ್ಷ್ಮೀಕಾಂತ ಚಾತ್ರ ಅಧ್ಯಕ್ಷತೆಯಲ್ಲಿ ನಡೆಯಿತು.

ಪ್ರಾಂಶುಪಾಲ ಡಾ.ಲಕ್ಷ್ಮೀಕಾಂತ್ ಚಾತ್ರ, ಡೀನ್, ಡಾ. ಶಾಮ್ ಎಸ್ ಭಟ್, ವೈಸ್ ಪ್ರಿನ್ಸಿಪಾಲ್ ಡಾ.ಹಸನ್ ಸರ್ಫರಾಜ್, ವಿದ್ಯಾರ್ಥಿ ವ್ಯವಹಾರಗಳ ಡೀನ್ ಡಾ.ಮಾಜಿ ಜೋಸ್, ಇಸ್ಲಾಮಿಕ್ ಅಕಾಡೆಮಿ ಆಫ್ ಎಜುಕೇಶನ್‌ನ ಕಾರ್ಯದರ್ಶಿ ಡಾ. ಅಖ್ತರ್ ಹುಸೇನ್ ಮತ್ತು ಮುಖ್ಯ ಅತಿಥಿ ಡಾ.ವಿನಿತಾ ರಾಮನಾಥ ಪೈ, ನಿರ್ದೇಶಕರು ಉಪಸ್ಥಿತರಿದ್ದರು.

ಮಾಜಿ ಅಧ್ಯಕ್ಷೆ ಶ್ರೀಮತಿ ಫರಾ ಖಾನ್, ಅಧ್ಯಕ್ಷರಾದ ಶ್ರೀ ಅಹ್ಮದ್ ತಾಹ ಪ್ರಾಸ್ತಾವಿಕ ಮಾತನಾಡಿದರು.

ಇದೇ ಸಂದರ್ಭ I, II ಮತ್ತು III BDS ನ ಹಿಂದಿನ ವಿಶ್ವವಿದ್ಯಾನಿಲಯ ಪರೀಕ್ಷೆಯ ಪದವಿ ಪೂರ್ವ ಶೈಕ್ಷಣಿಕ ಟಾಪರ್‌ಗಳನ್ನು ಸಮ್ಮಾನಿಸಲಾಯಿತು.

ಗಣ್ಯರು ವಿದ್ಯಾರ್ಥಿ ಪರಿಷತ್ತಿನ ವಾರ ಪತ್ರಿಕೆಯನ್ನು ಅನಾವರಣಗೊಳಿಸಿದರು. ವಿದ್ಯಾರ್ಥಿ ಪರಿಷತ್ತಿನ ಕಾರ್ಯದರ್ಶಿ ಶ್ರೀಮತಿ ಆಯೇಷಾ ಆಯುಬ್ರೇಡ್ ವಾರ್ಷಿಕ ವರದಿ ಮಂಡಿಸಿದರು.

ನೂತನ ಸದಸ್ಯರನ್ನು ಸಿಬ್ಬಂದಿ ಸಲಹೆಗಾರ್ತಿ ಡಾ. ವರ್ಷಾ ಉಪಾದ್ಯ ಪದಗ್ರಹಣ ನೆರವೇರಿಸಿದರು. ಡಾ.ಹಸನ್ ಸರ್ಫರಾಜ್ ಪ್ರಮಾಣ ವಚನ ಬೋಧಿಸಿದರು.

ಡೀನ್ ಅವರು ಸ್ವಾಗತಿಸಿ, ಪರಿಷತ್ ಸದಸ್ಯರಾದ ಜಿಯಾಜುಲೇಖಾ ಮತ್ತು ಅರುಣಿಮಾ ಶ್ಯಾಮ್ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.