ಬಂಟ್ವಾಳ :ಶಿಕ್ಷಕರ ಕೆಲಸವು ವೃತ್ತಿಯಲ್ಲ, ಅದು ಸೇವೆ. ಶಿಕ್ಷಕನು ವಿದ್ಯಾರ್ಥಿಗಳ ಸರ್ವತೋಮುಖಗಳ ಪ್ರಗತಿಯದೃಷ್ಟಿಯಿಂದ ಅರ್ಹನಿಶಿ ಚಿಂತಿಸುವ ಶಿಲ್ಪಿಯಾಗುತ್ತಾನೆ. ಶಿಲ್ಪಿಯೊಬ್ಬ ಕಲ್ಲಿಗೆಒಂದುರೂಪವನ್ನು ಹೇಗೆ ನೀಡುತ್ತಾನೋ ಹಾಗೆಯೇ ವಿದ್ಯಾರ್ಥಿಯ ಭವಿಷ್ಯವನ್ನುರೂಪಿಸುವ ರೂವಾರಿಯೇ ಶಿಕ್ಷಕ. ಅಂತಹ ವಿಶಾಲ ದೃಷ್ಟಿಕೋನ ಶಿಕ್ಷಕನಲ್ಲಿರಬೇಕು ಎಂದು ಸರ್ಕಾರಿ ಪದವಿಪೂರ್ವಕಾಲೇಜು ಮಣಿನಾಲ್ಕೂರು ಇಲ್ಲಿನ ಪ್ರಾಂಶುಪಾಲರಾದ ಶ್ರೀಮತಿ ಶಾಲಿನಿ ಮೆಹಂದಳೆ ಹೇಳಿದರು.
ಅವರು ಬಂಟ್ವಾಳದ ಶ್ರೀ ವೆಂಕಟರಮಣ ಸ್ವಾಮೀಕಾಲೇಜಿನಲ್ಲಿ ಎಸ್.ವಿ.ಎಸ್ ಸಮೂಹ ಸಂಸ್ಥೆಗಳು ಬಂಟ್ವಾಳ, ಇವುಗಳ ಆಶ್ರಯದಲ್ಲಿ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
ಗುರುವಾದವ ನಿರ್ದಿಷ್ಠ ಗುರಿ ಹೊಂದಿರಬೇಕು. ಆ ಗುರಿ ವಿದ್ಯಾರ್ಥಿಗಳ ಹಿತಚಿಂತನೆಯಗುರಿಯಾಗಿರಬೇಕು. ಆತಯಾವತ್ತೂ ಸಂಬಳದ ಕುರಿತುಯೋಚಿಸದೆ ಸೇವಾ ಮನೋಭಾವ ಹೊಂದಿರಬೇಕು. ವಿದ್ಯಾರ್ಥಿಗಳಲ್ಲಿಯೂ ಗುರುವಿನ ಕುರಿತು ಸರ್ವ ಸಮರ್ಪಣಾ ಭಾವ ಹೊಂದಿರಬೇಕು ಎಂದವರು ಹೇಳಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಸ್.ವಿ.ಎಸ್ ಸಮೂಹ ಸಂಸ್ಥೆಗಳ ಆಡಳಿತಾತ್ಮಕ ಪ್ರಾಂಶುಪಾಲರಾದಡಾ| ಸುಯೋಗ ವರ್ಧನ್ಡಿ ಎಮ್. ಅವರು ಮಾತನಾಡಿ ವಿದ್ಯಾರ್ಥಿಗಳ ಬಾಳನ್ನು ಬೆಳಗಿಸುವ ರೂವರಿಗಳು ಶಿಕ್ಷಕರು. ತಂದೆ ತಾಯಿಗಳ ಮಾತಿಗಿಂತಲು ಶಿಕ್ಷಕರ ಮಾರ್ಗದರ್ಶನ ವಿದ್ಯಾರ್ಥಿಗಳ ಮೇಲೆ ಹೆಚ್ಚು ಪರಿಣಾಮವನ್ನು ಬಿರುತ್ತದೆ. ಆ ದೃಷ್ಟಿಯಿಂದ ಶಿಕ್ಷಕ ವೃತ್ತಿಯು ಪವಿತ್ರವಾದ ವೃತ್ತಿಯಾಗಿದೆ ಎಂದರು.
ಶ್ರೀ ವೆಂಕಟರಮಣ ಸ್ವಾಮೀ ಸಮೂಹ ಸಂಸ್ಥೆಗಳ ಸಂಚಾಲಕರಾದ ಕೆ.ರೇಖಾ ಶೆಣೈ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಎಸ್.ವಿ.ಎಸ್ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಹರಿಪ್ರಸಾದ್ ಸ್ವಾಗತಿಸಿದರು. ಎಸ್.ವಿ.ಎಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಸುದರ್ಶನ ಬಿ ಅತಿಥಿಗಳನ್ನು ಪರಿಚಯಿಸಿದರು. ಬಂಟ್ವಾಳ ರಘುರಾಮ ಮುಕುಂದ ಪ್ರಭು ಸೆಂಟನರಿಪಬ್ಲಿಕ್ ಸ್ಕೂಲ್ನ ಮುಖ್ಯೋಪಾಧ್ಯಾಯರಾದ ಶ್ರೀಮತಿ ಜೂಲಿ ಟಿ.ಜೆ ವಂದಿಸಿದರು.
ವಿದ್ಯಾರ್ಥಿಗಳಾದ ಪ್ರತೀಕ್ ನಾಯ್ಕ್ ಮತ್ತು ಪ್ರಥಮ್ ತೇಜಸ್ವಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕರ ದಿನಾಚರಣೆಯ ಅಂಗವಾಗಿ ಎಸ್.ವಿ.ಎಸ್ ಸಮೂಹ ಸಂಸ್ಥೆಗಳ ಸಿಬ್ಬಂದಿಗಳಿಗೆ ಏರ್ಪಡಿಸಿದ್ದ ವಿವಿಧಕ್ರೀಡಾ ಸ್ಪರ್ಧೆಯಲ್ಲಿ ವಿಜೇತಾರಾದವರಿಗೆ ಬಹುಮಾನ ವಿತರಿಸಲಾಯಿತು. ಸಭಾಕಾರ್ಯಕ್ರಮದ ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.