ರಾಕೇಶ್ ಟಿಕಾಯತ್ ನೇತೃತ್ವದ ರೈತ ಮುಖಂಡರ ನಿಯೋಗದವರು ಸಿ.ಎಂ.ಸಿದ್ಧರಾಮಯ್ಯ ಅವರನ್ನು ಭೇಟಿಯಾಗಿ 2025ರಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಆಹಾರ ಹಕ್ಕು ಮತ್ತು ಆಹಾರ ಸಾರ್ವಭೌಮತೆ ಕುರಿತ ಅಂತಾರಾಷ್ಟ್ರೀಯ ರೈತ ಸಮಾವೇಶವನ್ನು ಉದ್ಘಾಟಿಸುವಂತೆ ಮನವಿ ಮಾಡಿದರು.
ಭಾರತದಲ್ಲಿ, ಅದರಲ್ಲೂ ಕರ್ನಾಟಕದಲ್ಲಿ ನಡೆಯಲಿರುವ ಈ ಸಮಾವೇಶ ಮೂರನೆಯದ್ದಾಗಿದೆ. ಈ ಹಿಂದೆ ಯುರೋಪ್ ಮತ್ತು ಅಮೆರಿಕದಲ್ಲಿ ಈ ಸಮಾವೇಶಗಳು ಅತ್ಯಂತ ಯಶಸ್ವಿಯಾಗಿ ನಡೆದಿವೆ.
ಮೂರನೇ ಸಮಾವೇಶ ಕರ್ನಾಟಕದಲ್ಲಿ ನಡೆಸಲು ದೇಶದ ಸರ್ವ ರೈತ ಸಂಘಟನೆಗಳ, ರೈತ ಹೋರಾಟಗಳ ಸಮನ್ವಯ ಸಮಿತಿ ಒಮ್ಮತದಿಂದ ತೀರ್ಮಾನಿಸಿದೆ. ಈ ತೀರ್ಮಾನವನ್ನು ರೈತ ಮುಖಂಡರಾದ ರಾಕೇಶ್ ಟಿಕಾಯತ್ ನೇತೃತ್ವದ ನಿಯೋಗದವರು ನನಗೆ ವಿವರಿಸಿದರು.
ನಿಯೋಗದಲ್ಲಿ ರೈತ ನಾಯಕಿ ಚುಕ್ಕಿ ನಂಜುಂಡಸ್ವಾಮಿ, ಪ್ರೊ.ರವಿವರ್ಮಕುಮಾರ್, ದಲಿತ ಸಂಘಟನೆಗಳ ಪರವಾಗಿ ಮಾವಳ್ಳಿ ಶಂಕರ್, ಅಂಕಣಕಾರ, ನಾಟಕಕಾರರಾದ ಬಿ.ಚಂದ್ರೇಗೌಡ ಸೇರಿದಂತೆ 30 ಮಂದಿ ಇದ್ದರು.