ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಲ್ಲಡ್ಕ ವಲಯದ ಸ್ವಸಹಾಯ ಸಂಘಗಳ ಬಾಳ್ತಿಲ ಒಕ್ಕೂಟದ ಆಶ್ರಯದಲ್ಲಿ ಎಳ್ತೀಮಾರ್ ಚಾವಡಿಯಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.
ಒಕ್ಕೂಟದ ಸ್ವಸಹಾಯ ಸಂಘದ ಸದಸ್ಯರುಗಳು ಚಾವಡಿ ಸುತ್ತಮುತ್ತ ಸ್ವಚ್ಛತೆಯನ್ನು ಮಾಡಿದರು.
ಈ ಸಂದರ್ಭದಲ್ಲಿ ಕಲ್ಲಡ್ಕ ವಲಯ ಮೇಲ್ವಿಚಾರಕಿ ಸುಗುಣ ಶೆಟ್ಟಿ, ಶ್ರೀ ಮಣಿಕಂಠ ಯುವಶಕ್ತಿ ಅಧ್ಯಕ್ಷ ಲೋಕನಂದ ಎಳ್ತೀಮಾರ್, ಜನಶಕ್ತಿ ಸೇವ ಟ್ರಸ್ಟ್ ಅಧ್ಯಕ್ಷರಾದ ಜಿನ್ನಪ್ಪ ಎಳ್ತೀಮಾರ್, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸುಂದರ ಸಾಲಿಯಾನ್, ಹಿರಿಯರಾದ ಶ್ರೀಧರ ಪೂಜಾರಿ ಎಳ್ತೀಮಾರ್, ರಾಜೀವ ಪೂಜಾರಿ ಎಳ್ತೀಮಾರ್, ಶೌರ್ಯವಿಪತ್ತು ತಂಡ ಕಲ್ಲಡ್ಕ ವಲಯ ಅಧ್ಯಕ್ಷ ಮಾಧವ ಸಾಲಿಯಾನ್, ಆಶಾ ಕಾರ್ಯಕರ್ತೆ ಸುಜಾತಾ ಒಕ್ಕೂಟದ ಕೋಶಾಧಿಕಾರಿ ಉಷಾ ಹಾಗೂ ಸ್ವಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು.
ಸೇವಾ ಪ್ರತಿನಿಧಿ ವಿದ್ಯಾ ಸ್ವಾಗತಿಸಿ, ಸಂತೋಷ್ ಕುಮಾರ್ ಧನ್ಯವಾದ ಸಲ್ಲಿಸಿದರು.