ಧರ್ಮಸ್ಥಳ : ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣವಾಗುವ ಮೂಲಕ ಭಾರತೀಯರ ಅನೇಕ ವರ್ಷದ ಕನಸು, ನಿರೀಕ್ಷೆಗಳು ಸಾಕಾರಗೊಂಡಿದೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.
ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಖಾವಂದರು “ಈ ದಿನ ಭಾವನಾತ್ಮಕವಾಗಿ ಕೋಟ್ಯಾಂತರ ಭಕ್ತರ ಪಾಳಿಗೆ ಅವಿಸ್ಮರಣೀಯವಾಗಿದೆ.
ಮಹತ್ ಕಾರ್ಯದ ನೇತೃತ್ವ ವಹಿಸಿದ ಪ್ರಧಾನಿ ಮೋದಿ ಹಾಗೂ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡ ಎಲ್ಲರನ್ನು ಅಭಿನಂದಿಸುತ್ತೇನೆ.
ಶ್ರೀರಾಮನ ಸೇವೆಗಾಗಿ ಧರ್ಮಸ್ಥಳದಿಂದ ಬೆಳ್ಳಿಯ ಪೂಜಾ ಸಾಮಗ್ರಿಗಳನ್ನು ಸಮರ್ಪಿಸುತ್ತಿದ್ದೇವೆ ಎಂದಿದ್ದಾರೆ.