ಹೂಡಿಕೆ ಒಂದು ಬಾರಿ ಮಾತ್ರ. ಆದರೆ ತಿಂಗಳಿಗೆ 20,000 ರೂಪಾಯಿ ಗಳಿಸುತ್ತಾ ನಿವೃತ್ತಿ ಜೀವನ ಹಾಯಾಗಿ ಕಳೆಯಲು ಸಾಧ್ಯವಿದೆ.ಇದು ಪೋಸ್ಟ್ ಆಫೀಸ್ ತಂದಿರುವ ನಿವೃತ್ತಿ ಯೋಜನೆ. ಮೆಚ್ಯುರಿಟಿ ಅವಧಿ ಕೇವಲ 5 ವರ್ಷ ಮಾತ್ರ.
ಪೋಸ್ಟ್ ಆಫೀಸ್ ಹಲವು ಅತ್ಯಂತ ಉಪಯುಕ್ತ ಯೋಜನೆಗಳನ್ನು ಜಾರಿ ಮಾಡಿದೆ. ಕೇಂದ್ರ ಸರ್ಕಾರದ ಅಧೀನದ ಬ್ಯಾಂಕ್ ಆಗಿರುವ ಕಾರಣ ಪೋಸ್ಟ್ ಆಫೀಸ್ ಮೇಲೆ ನಂಬಿಕೆ ಹೆಚ್ಚು. ಚಿಕ್ಕ ಮಕ್ಕಳಿಂದ ಹಿಡಿದು ವಯೋ ವೃದ್ಧರವರೆಗೆ ಹಲವು ಯೋಜನೆಗಳು ಪೋಸ್ಟ್ ಆಫೀಸ್ನಲ್ಲಿದೆ. ಈ ಬೈಕಿ ನಿವತ್ತಿ ಯೋಜನೆ ಪ್ಲಾನ್ ಮೂಲಕ ಒಮ್ಮೆ ಹೂಡಿಕೆ ಮಾಡಿ ಪ್ರತಿ ತಿಂಗಳು 20,000 ರೂಪಾಯಿ ಆದಾಯ ಗಳಿಸಬಹುದು. ಈ ಮೂಲಕ ನಿವೃತ್ತಿ ಕಾಲದಲ್ಲಿ ಹಾಯಾಗಿ ಯಾವುದೇ ಚಿಂತೆ ಇಲ್ಲದೆ ಕಳೆಯಬಹುದು.
ಇದು ಹಿರಿಯ ನಾಯಕರಿಗೆ ತಮ್ಮ ನಿವೃತ್ತಿ ಕಾಲವನ್ನು ಆದಾಯದ ಚಿಂತೆ ಇಲ್ಲದ ಕಳೆಯಲು ಉಪಯುಕ್ತ ಯೋಜನೆಯಾಗಿದೆ. ರಿಯ ನಾಗರೀಕರ ಉಳಿತಾಯ(SCSS) ಯೋಜನೆಯಡಿ ಸುಮ್ಮನೆ ಹೂಡಿಕೆ ಮಾಡಿದರೆ ಸಾಕು. ಹೂಡಿಕೆ ಒಮ್ಮೆ ಮಾತ್ರ. ಹೂಡಿಕೆಯ ಮೆಚ್ಯುರಿಟಿ ಅವಧಿಯ 5 ವರ್ಷ. ನಿಗದಿತ ಅವಧಿ ಬಳಿಕ ಪ್ರತಿ ತಿಂಗಳು 20,000 ರೂಪಾಯಿಯಿಂತ ಆದಾಯ ಸಿಗಲಿದೆ.
ಕನಿಷ್ಠ 60 ವರ್ಷ ವಯಸ್ಸಾಗಿರುವ ಭಾರತದ ಎಲ್ಲಾ ನಾಗರೀಕರು ಈ ಯೋಜನೆಯಲ್ಲಿ ಹಣ ಹೂಡಿಕೆ ಮಾಡಿ ರಿಟರ್ನ್ಸ್ ಪಡೆಯಲು ಸಾಧ್ಯವಿದೆ. ಈ ಯೋಜನೆಯಡಿ ಒಬ್ಬ ಹಿರಿಯ ನಾಗರೀಕರನಿಗೆ ಗರಿಷ್ಠ 30 ಲಕ್ಷ ರೂಪಾಯಿ ಹೂಡಿಕೆ ಮಾಡಲು ಸಾಧ್ಯವಿದೆ. ಇದಕ್ಕೂ ಮೊದಲು ಈ ಮೊತ್ತ 15 ಲಕ್ಷಕ್ಕೆ ಸೀಮಿತಗೊಳಿಸಲಾಗಿತ್ತು. ಇದೀಗ 30 ಲಕ್ಷ ರೂಪಾಯಿಗೆ ಏರಿಕೆ ಮಾಡಲಾಗಿದೆ.
SCSS ಅಡಿಯಲ್ಲಿ ಹೂಡಿಕೆ ಮಾಡುವ ಹಿರಿಯ ನಾಗರೀಕರಿಗೆ ಪೋಸ್ಟ್ ಆಫೀಸ್ ವಾರ್ಷಿಕ 8.5 ಶೇಕಡಾ ಬಡ್ಡಿ ನೀಡಲಿದೆ. ಒಂದು ವೇಳೆ 30 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ 5 ವರ್ಷ ಮೆಚ್ಯುರಿಟಿ ಅವಧಿ ತೆಗೆದುಕೊಳ್ಳಲಿದೆ. ನಿವೃತ್ತಿಯಾಗುವ ನೌಕರರು 55 ರಿಂದ 60 ವರ್ಷದೊಳಗೆ ಈ ಯೋಜನೆ ಅಡಿ ಹೂಡಿಕೆ ಮಾಡಲು ಸಾಧ್ಯವಿದೆ. 30 ಲಕ್ಷ ರೂಪಾಯಿಗೆ ವಾರ್ಷಿಕ 2,46,000 ರೂಪಾಯಿ ಬಡ್ಡಿ ಸಿಗಲಿದೆ. ಅಂದರೆ ಪ್ರತಿ ತಿಂಗಳಿಗ 20,500 ರೂಪಾಯಿ ಸಿಗಲಿದೆ.
ಈ ಯೋಜನೆಯಡಿ ಬಡ್ಡಿ ಮೂಲಕ ಆದಾಯ ಪಡೆಯುವ ನಾಗರೀಕರು ಆದಾಯ ತೆರಿಗೆ ಪಾವತಿಸಬೇಕು. ಈ ಯೋಜನೆ ಕುರಿತ ಹೆಚ್ಚಿನ ಮಾಹಿತಿಗಾಗಿ ಸ್ಥಳೀಯ ಪೋಸ್ಟ್ ಆಫೀಸ್ ಬ್ಯಾಂಕ್ ಭೇಟಿ ನೀಡಿ ಮಾಹಿತಿ ತಿಳಿದುಕೊಳ್ಳಿ.